ETV Bharat / state

Unlock​​ 2.O.. ಮೊದಲ ದಿನವೇ ಕೋವಿಡ್​​ ನಿಯಮ ಉಲ್ಲಂಘನೆ: ಪೊಲೀಸರು ಜಡಿದ ದಂಡವೆಷ್ಟು? - no mask fine,

ಸೋಮವಾರ ಒಂದೇ ದಿನ ನಗರದಲ್ಲಿ 59,750 ರೂ. ದಂಡ ಸಂಗ್ರಹ ಆಗಿದೆ. 239 ಜನ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಈ ಪೈಕಿ 232 ಮಂದಿ ಮಾಸ್ಕ್ ಧರಿಸದೇ ಓಡಾಡಿದ್ದು 58,000 ರೂ. ದಂಡವನ್ನು ಪೊಲೀಸರು ಜಡಿದಿದ್ದಾರೆ.

59750-thousand-fine-collected-of-no-mask-and-social-distance-in-bangalore
ಕೋವಿಡ್​​ ನಿಯಮ ಉಲ್ಲಂಘನೆ
author img

By

Published : Jun 22, 2021, 12:27 PM IST

ಬೆಂಗಳೂರು: ಅನ್​​ಲಾಕ್​ 2.0 ನಿನ್ನೆಯಿಂದ ನಗರದಲ್ಲಿ ಜಾರಿಯಾಗಿದ್ದು, ಜನರ ಓಡಾಟ ಆರಂಭವಾಗಿದೆ. ಆದರೆ ಕೋವಿಡ್ ಮಾರ್ಗಸೂಚಿಗಳನ್ನು ಜನರು ಪಾಲಿಸುವಂತೆ ನೋಡಿಕೊಳ್ಳಲು ಹೆಚ್ಚುವರಿ ಮಾರ್ಷಲ್ಸ್, ಹೋಂಗಾರ್ಡ್ಸ್ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿದೆ.

ಈ ನಿಟ್ಟಿನಲ್ಲಿ ಅನ್​ಲಾಕ್​ ಆಗಿದ್ದರೂ ಸಹ ಕೂಡಾ ಪೊಲೀಸರು ಮಾತ್ರ ಸರ್ಕಾರದ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಮಾಸ್ಕ್​ ಹಾಕದೇ ಸಂಚರಿಸುತ್ತಿರುವ ವಾಹನ ಸವಾರರನ್ನು ಹಿಡಿದು ದಂಡ ಜಡಿಯುತ್ತಿದ್ದಾರೆ.

ಸೋಮವಾರ ಒಂದೇ ದಿನ ನಗರದಲ್ಲಿ ಒಟ್ಟು 59,750 ರೂಪಾಯಿ ದಂಡ ಸಂಗ್ರಹವಾಗಿದೆ. 239 ಜನ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಈ ಪೈಕಿ 232 ಮಂದಿ ಮಾಸ್ಕ್ ಧರಿಸದೇ ಓಡಾಡಿದ್ದು 58,000 ದಂಡ ವಿಧಿಸಲಾಗಿದೆ. 7 ಪ್ರಕರಣಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಹಿನ್ನೆಲೆ 1,750 ದಂಡ ವಿಧಿಸಲಾಗಿದೆ.

ನಗರದ ಮಾರುಕಟ್ಟೆ ಪ್ರದೇಶಗಳು, ವಾಣಿಜ್ಯ ವಹಿವಾಟು ನಡೆಯುವ ಕಡೆ ಜನರು ಗುಂಪುಗುಂಪಾಗಿ ಓಡಾಟ ನಡೆಸುತ್ತಿದ್ದಾರೆ. ಸಂಜೆ 5 ಗಂಟೆ ವೇಳೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.