ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಹಿರಿಯ ಸಿವಿಲ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದ 57 ಮಂದಿಗೆ ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯಪಾಲರ ಆದೇಶಾನುಸಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ವಿ. ನಾಗೇಶ್ ರಾವ್ ಅವರು ನಿನ್ನೆ (ಮಂಗಳವಾರ) ಈ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ನ್ಯಾಯಾಂಗ ಸೇವೆ(ನೇಮಕಾತಿ) ನಿಯಮಗಳು-2004 ರ ಪ್ರಕಾರ ಜಿಲ್ಲಾ ನ್ಯಾಯಾಧೀಶರ ಹುದ್ದೆಗಳಿಗೆ ಶೇ 65ರಷ್ಟು ಸ್ಥಾನಗಳನ್ನು ಸೇವಾ ನಿರತ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರುವರಲ್ಲಿಯೇ ಜೇಷ್ಠತೆ ಆಧಾರದಲ್ಲಿಯೇ ನೇಮಕ ಮಾಡಬೇಕಿದ್ದು, ಅದರಂತೆ ಈ ಬಡ್ತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿಲಾಗಿದೆ.
ಅಪರೂಪದ ಪಕ್ಷಿಗಳ ರಕ್ಷಣೆ ಕೋರಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಸೇವಾ ಜೇಷ್ಠತೆ ಆಧಾರದಲ್ಲಿ ಶ್ರೀಕಾಂತ್, ಎಸ್ ವಿ. ವೆಂಕಟೇಶ್, ಮನ್ಸೂರ್ ಅಹ್ಮದ್ ಜಮಾನ್, ಕೆ. ರವೀಂದ್ರ ಸೇರಿದಂತೆ ಒಟ್ಟು 57 ಮಂದಿ ಹಿರಿಯ ಸಿವಿಲ್ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಹೊಂದಿದ್ದಾರೆ. ಈ ಬಡ್ತಿ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು ಸದ್ಯದಲ್ಲೇ ಇಷ್ಟೂ ಮಂದಿ ಜಿಲ್ಲಾ ನ್ಯಾಯಾಲಯಗಳಲ್ಲಿ ಕಾರ್ಯರಂಭ ಮಾಡಲಿದ್ದಾರೆ.