ಬೆಂಗಳೂರು: ನಗರದಲ್ಲಿ 5,811 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೊಮ್ಮನಹಳ್ಳಿಯಲ್ಲಿ- 496, ದಾಸರಹಳ್ಳಿ- 186, ಬೆಂಗಳೂರು ಪೂರ್ವ- 671, ಮಹಾದೇವಪುರ- 938, ಆರ್‌ಆರ್ ನಗರ- 430, ಬೆಂಗಳೂರು ದಕ್ಷಿಣ- 534, ಬೆಂಗಳೂರು ಪಶ್ಚಿಮ- 428, ಯಲಹಂಕ- 493, ಹೊರವಲಯದ ತಾಲೂಕುಗಳಲ್ಲಿ 455 ಜನರಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು 611 ಸೋಂಕಿತರು ಪಾಲಿಕೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: Black fungus: ಸಾವಿರ ಗಡಿಯತ್ತ ಕಪ್ಪು ಶಿಲೀಂಧ್ರ ಪ್ರಕರಣ... ರಾಜ್ಯದಲ್ಲಿ ಔಷಧಿ ಕೊರತೆ
ನಿನ್ನೆ ನಗರದಲ್ಲಿ 5,949 ಪ್ರಕರಣಗಳು ಪತ್ತೆಯಾಗಿ, 273 ಮಂದಿ ಮೃತಪಟ್ಟಿದ್ದರು. 2,06,390 ಸಕ್ರಿಯ ಪ್ರಕರಣಗಳಿವೆ. ಇನ್ನು ಮೇ. 26ರಂದು 53,098 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ಪಾಸಿಟಿವಿಟಿ ಪ್ರಮಾಣ 29.17%ಕ್ಕೆ ಇಳಿಕೆಯಾಗಿದೆ. ಮರಣ ಪ್ರಮಾಣ 1.60%ರಷ್ಟಿದೆ.