ETV Bharat / state

ಪ್ರವಾಹಕ್ಕೆ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕೆ 557.67 ಕೋಟಿ ರೂ. ಬಿಡುಗಡೆ: ಸಚಿವ ಆರ್. ಅಶೋಕ್​​​ - ಬೆಂಗಳೂರು ಲೆಟೆಸ್ಟ್ ನ್ಯೂಸ್

ಕಳೆದ‌ ಬಾರಿ ಪ್ರವಾಹದಿಂದ ಹಾನಿಗೊಳಗಾಗಿದ್ದ ಮನೆಗಳ ನಿರ್ಮಾಣಕ್ಕಾಗಿ 557.67 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

557.67 crore Released for the construction of flood-damaged houses
ಪ್ರವಾಹಕ್ಕೆ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕೆ 557.67 ಕೋಟಿ ರೂ. ಬಿಡುಗಡೆ: ಸಚಿವ ಆರ್.ಅಶೋಕ್​​​
author img

By

Published : May 22, 2020, 3:52 PM IST

ಬೆಂಗಳೂರು: ಕಳೆದ‌ ಬಾರಿ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕಾಗಿ 557.67 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರವಾಹಕ್ಕೆ ಒಟ್ಟು 32,482 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಈ ಪೈಕಿ 32,424 ಮನೆಗಳಿಗೆ ತಲಾ 1 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. 11,037 ಮನೆಗಳಿಗೆ ತಲಾ 2 ಲಕ್ಷ ರೂ., 4582 ಮನೆಗಳಿಗೆ 3 ಲಕ್ಷ ರೂ., 656 ಮನೆಗಳಿಗೆ ತಲಾ 4 ಲಕ್ಷ ರೂ., ಒಟ್ಟು 47 ಮನೆಗಳಿಗೆ ಸಂಪೂರ್ಣ 5 ಲಕ್ಷ ರೂ. ಪರಿಹಾರ ಹಣ ನೀಡಲಾಗಿದೆ ಎಂದರು.

ಕಂದಾಯ ಸಚಿವ ಆರ್.ಅಶೋಕ್

ಈಗಾಗಲೇ ಮನೆ ಕಟ್ಟಲು 5ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು, ಆದಷ್ಟು ಬೇಗ ಮನೆ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು. ಇನ್ನು ಸುಮಾರು 12,662 ಮನೆಗಳ ಕಾಮಗಾರಿಯೇ ಪ್ರಾರಂಭವಾಗಿಲ್ಲ. ಆ ಮನೆಗಳ ನಿರ್ಮಾಣ ಕಾರ್ಯ ಆದಷ್ಟು ಬೇಗ ಪ್ರಾರಂಭಿಸುವಂತೆ ಎಲ್ಲಾ ಡಿಸಿಗಳಿಗೆ ಪತ್ರ ಬರೆಯಲಿದ್ದೇನೆ ಎಂದು ಸ್ಪಷ್ಟಪಡಿಸಿದರು.

6.5 ಹೆಕ್ಟೇರ್ ಬೆಳೆ ಪ್ರವಾಹದಿಂದ ನಷ್ಟ ಆಗಿತ್ತು. ಬೆಳೆ ನಷ್ಟವಾದ ರೈತರಿಗೆ 1,185 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇವೆ. ಈ ಬಾರಿ ಸಾಮಾನ್ಯ ಮಾನ್ಸೂನ್ ಆಗಲಿದೆಯೆಂದು ತಜ್ಞರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮಳೆ ಆಗಲಿದೆ. ಈ ಬಗ್ಗೆ ತಜ್ಞರ ಜೊತೆ ಸಭೆ ಮಾಡಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರವಾಹ ಯಾವ ಭಾಗದಲ್ಲಿಯಾದರೂ ಆಗಬಹುದು, ಆದ್ರೆ, ಮುಂಜಾಗ್ರತಾ ಕ್ರಮಕ್ಕೆ ಸಿದ್ಧತೆ ಮಾಡಿದ್ದೇವೆ. 336 ಕೋಟಿ ರೂ. ಎಸ್​ಡಿಆರ್​ಎಫ್ ಹಣ ಬಂದಿದೆ. ಈ ಬಾರಿ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ 1054 ಕೋಟಿ ರೂ. ಎಸ್​ಡಿಆರ್​ಎಫ್ ಹಣ ಹಂಚಿಕೆ ಮಾಡಿದ್ದಾರೆ. ಅದ್ರಲ್ಲಿ 395 ಕೋಟಿ ಈಗಾಗಲೇ ರಿಲೀಸ್ ಆಗಿದೆ. ಪ್ರಧಾನಿ ಮೋದಿ ಮೊದಲ ಬಾರಿ 201.8 ಕೋಟಿ ಹಣವನ್ನು ಸ್ಟೇಟ್ ಡಿಸಾಸ್ಟರ್ ಲಿಟಿಗೇಷನ್ ಫಂಡ್ ಅಂತ ಹೊಸದಾಗಿ ರಿಲೀಸ್ ಮಾಡಿದ್ದಾರೆ ಎಂದು ವಿವರಿಸಿದರು.

ಕಾಂಗ್ರೆಸ್ ವಿರುದ್ಧ ಕಿಡಿ: ಸಿದ್ದರಾಮಯ್ಯ ಸರ್ಕಾರ ಇದ್ದಾಗ ಗ್ರಾಮ ಪಂಚಾಯತ್​ ಚುನಾವಣೆ ಯಾವಾಗ ಮಾಡಿದ್ರು. ಬಿಬಿಎಂಪಿ ಚುನಾವಣೆ ಎಷ್ಟು ದಿನ ಮುಂದೂಡಿದ್ರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು‌. ಕಾನೂನು, ಸಂವಿಧಾನ ಏನು ಇದೆಯೊ ಅದನ್ನು ಬಳಸಿ ಪಂಚಾಯತ್​​ ಚುನಾವಣೆ ಬಗ್ಗೆ ತೀರ್ಮಾನ ಮಾಡಿದ್ದಾರೆ. ಕಾನೂನು ಏನು ಇದೆಯೊ ಅದನ್ನು ತಿಳಿದುಕೊಂಡು ಮಾತನಾಡಲಿ ಎಂದು ಸಚಿವ ಅಶೋಕ್ ಹೇಳಿದ್ರು​.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.