ಬೆಂಗಳೂರು: ಭಾರತದಲ್ಲಿ ನಿರುದ್ಯೋಗ 2018ರಲ್ಲಿ ಶೇ.6ರಷ್ಟು ಹೆಚ್ಚಳವಾಗಿದ್ದು 2010ರಿಂದ 2018ರ ಅವಧಿಗಿಂತ ದ್ವಿಗುಣ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಅಜೀಂ ಪ್ರೇಮ್ಜಿ ವಿವಿಯ ಸಮರ್ಥನೀಯ ಉದ್ಯೋಗ ಕೇಂದ್ರದ ವರದಿಯಲ್ಲಿ ಮೋದಿ ಸರ್ಕಾರದ ಪ್ರಮುಖ ನಿರ್ಧಾರವಾದ ನೋಟ್ಬ್ಯಾನ್ನಿಂದಾಗಿ ಐವತ್ತು ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕಳೆದ ದಶಕಕ್ಕೆ ಹೋಲಿಕೆ ಮಾಡಿದರೆ ನಿರುದ್ಯೋಗ ನಿಧಾನವಾಗಿ ಏರಿಕೆಯಾಗುತ್ತಿದ್ದು, ನೋಟ್ಬ್ಯಾನ್ ಬಳಿಕ ಆ ಪ್ರಮಾಣ ತೀವ್ರ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
20ರಿಂದ 24 ವರ್ಷದ ಯುವ ಸಮೂಹದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು ಇದು ಅತ್ಯಂತ ಗಂಭೀರ ವಿಚಾರ ಎನ್ನುವುದನ್ನು ವರದಿಯಲ್ಲಿ ಹೇಳಲಾಗಿದೆ.
ಲೋಕಸಭಾ ಚುನಾವಣೆ ವೇಳೆ ಈ ವರದಿ ಹೊರಬಿದ್ದಿರೋದು ಪ್ರತಿಪಕ್ಷಗಳ ಬಾಯಿಗೆ ಆಹಾರವಾಗಿರೋದಂತು ಸತ್ಯ..!