ETV Bharat / state

ರಸ್ತೆ ಅಪಘಾತ ಪ್ರಕರಣ: ದೇಶಕ್ಕೆ ಕರ್ನಾಟಕ 4ನೇ ಸ್ಥಾನ - Accident In Karnataka

ರಸ್ತೆ ಅಪಘಾತದ ಸಾವಿನಲ್ಲಿ ದೇಶಕ್ಕೆ ಉತ್ತರಪ್ರದೇಶ ಅಗ್ರ ಸ್ಥಾನದಲ್ಲಿದ್ದು, ನಂತರದ 2, 3, 4ನೇ ಸ್ಥಾನಗಳಲ್ಲಿ ಕ್ರಮವಾಗಿ ತಮಿಳುನಾಡು, ಮಹಾರಾಷ್ಟ್ರ ಮತ್ತು ಕರ್ನಾಟಕ ಇದೆ.

road-accident-case
ರಸ್ತೆ ಅಪಘಾತ ಪ್ರಕರಣ
author img

By

Published : Dec 14, 2020, 8:13 PM IST

ಬೆಂಗಳೂರು: ವಾಹನ ಸಂಚಾರ ಹೆಚ್ಚಾದಂತೆ ಅಪಘಾತಗಳ ಸಂಖ್ಯೆಯೂ ರಾಜ್ಯದಲ್ಲಿ ಅಧಿಕವಾಗಿದ್ದು, ದೇಶದಲ್ಲಿ ಹೆಚ್ಚು ಅಪಘಾತ ಸಂಭವಿಸುವ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ದಿನಕ್ಕೆ ಐದಾರು ಮಂದಿ ಮೃತಪಡುತ್ತಿರುವ ಅಥವಾ ಗಾಯಾಳುಗಳಾಗಿ (ಕೈ - ಕಾಲು ಕಳೆದುಕೊಂಡು) ಜೀವನ ಪರ್ಯಂತ ನರಕ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ರಸ್ತೆ ಗುಂಡಿ, ವಾಹನ ಸವಾರರ ಅಜಾಗರೂಕತೆ, ಡ್ರಗ್ಸ್ ಮತ್ತು ಮದ್ಯ ಸೇವನೆ, ಮೊಬೈಲ್ ಬಳಕೆ ಹೀಗೆ ಹಲವು ಕಾರಣಗಳಿಂದ ಅಪಘಾತದ ಸಂಖ್ಯೆ ದುಪ್ಪಾಟ್ಟಾಗುತ್ತಿದೆ. ಹಾಗೆಯೇ ಸಾರ್ವಜನಿಕರು ತೋರುವ ಬೇಜವಾಬ್ದಾರಿತನವೂ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಬದಲಿಗೆ ವಿಡಿಯೋ ಅಥವಾ ಸೆಲ್ಪಿ ತೆಗೆದುಕೊಳ್ಳುವಲ್ಲಿ ಜನರು ಮಗ್ನರಾಗಿರುತ್ತಾರೆ. ಇನ್ನು ಆಸ್ಪತ್ರೆ ಸಿಬ್ಬಂದಿ ತೋರುವ ದುವರ್ತನೆಯೂ ಅಪಘಾತಕ್ಕೆ ಒಳಗಾದವರ ಸಾವಿಗೆ ಕಾರಣವಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ವರದಿ ಪ್ರಕಾರ ದಿನಕ್ಕೆ ಅಂದಾಜು 30 ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಅಪಘಾತದ ಸಾವಿನಲ್ಲಿ ಉತ್ತರಪ್ರದೇಶ ಅಗ್ರ ಸ್ಥಾನದಲ್ಲಿದ್ದು, ಕಳೆದ ವರ್ಷದಲ್ಲಿ 38,783 ಅಪಘಾತಗಳ ಪೈಕಿ 20,124 ಮಂದಿ ಬಲಿಯಾಗಿದ್ದಾರೆ. ದ್ವಿತಿಯ ಸ್ಥಾನ ತಮಿಳುನಾಡು ( 65,562 ಅಪಘಾತ, 16,015 ಸಾವು) 3ನೇ ಸ್ಥಾನ ಮಹಾರಾಷ್ಟ್ರ (35,853 ಅಪಘಾತ, 12,264 ಸಾವು) ನಾಲ್ಕನೇ ಸ್ಥಾನ ಕರ್ನಾಟಕವಿದೆ. ರಾಜ್ಯದಲ್ಲಿ ವರ್ಷದಲ್ಲಿ 43,542 ಅಪಘಾತಗಳು ಸಂಭವಿಸಿದರೆ 10,609 ಮಂದಿ ಸಾವನ್ನಪ್ಪಿದ್ದಾರೆ. ಹಾಗೆಯೇ ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ಹರಿಯಾಣ, ಒಡಿಶಾ, ಪಂಜಾಬ್ ರಾಜ್ಯಗಳು ನಂತರದ ಸ್ಥಾನದಲ್ಲಿವೆ.

ಸಾಮಾಜಿಕ ಕಾರ್ಯಕರ್ತ ಸಾಯಿದತ್ತ

ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರು ಈ ಕುರಿತು ಮಾತನಾಡಿ, ಅಪಘಾತಕ್ಕೆ ಪ್ರಮುಖ ಕಾರಣ ರಸ್ತೆ ಅವ್ಯವಸ್ಥೆ. ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆ ನೀಡಲು ವಿಳಂಬ ಮತ್ತು ಬಡವ ಮತ್ತು ಶ್ರೀಮಂತರಿಗೆ ಚಿಕಿತ್ಸೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕಳಪೆ ರಸ್ತೆಯಿಂದ ಅಪಘಾತ ಅಥವಾ ತೊಂದರೆಯಾದರೆ ಆಯಾ ವ್ಯಾಪ್ತಿಯ ಬಿಬಿಎಂಪಿಯೇ ಖರ್ಚು ನೋಡಿಕೊಳ್ಳಬೇಕು ಎಂಬ ಹೈಕೋರ್ಟ್ ನಿರ್ದೆಶನವಿದೆ. ಆದರೂ ಸಹಕಾರ ಸಿಗುತ್ತಿಲ್ಲ ಎಂದು ಹೇಳಿದರು.

ಅಪಘಾತ ತಡೆಗೆ ಕ್ರಮ:

  • ಹೆಚ್ಚು ಅಪಘಾತ ಸಂಭವಿಸುವ ಜಾಗಗಳನ್ನು ಬ್ಲಾಕ್​ಸ್ಪಾಟ್​ ಎಂದು ಗುರುತಿಸಬೇಕು
  • ರಸ್ತೆ ತಿರುವುಗಳ ಅಗಲೀಕರಣ, ರಸ್ತೆ ವಿಭಜಕಗಳ ಅಳವಡಿಕೆ
  • ಹೆದ್ದಾರಿಗಳ ಎರಡೂ ಬದಿಯಲ್ಲಿ ಅನಧಿಕೃತ ಅಂಗಡಿಗಳ ತೆರವು
  • ರಸ್ತೆ ಗುಂಡಿಗಳನ್ನು ಸಂಪೂರ್ಣ ಮುಚ್ಚಬೇಕು
  • ಟ್ರಾಫಿಕ್ ಸಿಗ್ನಲ್, ರಸ್ತೆ ವಿಭಜಕಗಳ ದುರಸ್ತಿ
  • ರಸ್ತೆ ಅಪಘಾತಗಳ ತಡೆ ಕುರಿತು ಜಾಗೃತಿ ಅತ್ಯಗತ್ಯ
  • ತುರ್ತು ಚಿಕಿತ್ಸೆಗಾಗಿ ಟ್ರಾಮಾ ಸೆಂಟರ್​ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.