ಬೆಂಗಳೂರು: ಕೊರೊನಾ, ಲಾಕ್ಡೌನ್ ನಡುವೆ 25 ಡಿವೈಎಸ್ಪಿ ಹಾಗೂ 24 ಮಂದಿ ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಇತ್ತೀಚೆಗಷ್ಟೇ ಗೃಹ ಇಲಾಖೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾರ್ಗಸೂಚಿ ಆದೇಶ ಪ್ರಕಟಿಸಿದ ಹಿನ್ನೆಲೆಯಲ್ಲಿ ಇಂದು 49 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿದ್ದು, ವರ್ಗಾವಣೆಯಾದ ಪೊಲೀಸ್ ಅಧಿಕಾರಿಗಳು ಆಯಾ ಸ್ಥಳಕ್ಕೆ ನಿಯುಕ್ತಿಗೊಂಡ ಬಳಿಕ ಕೂಡಲೇ ಪಾಲನಾ ವರದಿ ನೀಡುವಂತೆ ಇಲಾಖೆ ಸೂಚಿಸಿದೆ.