ETV Bharat / state

ಬೆಂಗಳೂರಿನಲ್ಲಿಂದು 4,284 ಕೋವಿಡ್ ಪಾಸಿಟಿವ್ ಕೇಸ್ ದೃಢ​, 8 ಸಾವು - bengaluru latest corona updates

ಬೆಂಗಳೂರಿನಲ್ಲಿ ಇಂದು ಹೊಸದಾಗಿ 4,284 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 8 ಜನ ಸೋಂಕಿತರು ಮೃತಪಟ್ಟಿದ್ದಾರೆ.

4284 positive cases found in bengaluru
4284 ಕೋವಿಡ್ ಪಾಸಿಟಿವ್ ಕೇಸ್
author img

By

Published : Apr 6, 2021, 11:52 AM IST

ಬೆಂಗಳೂರು: ನಗರದಲ್ಲಿಂದು ಮತ್ತೆ ದಾಖಲೆ ಪ್ರಮಾಣದಲ್ಲಿ ಕೋವಿಡ್ ಹರಡಿದ್ದು, 4,284 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ನಿನ್ನೆಗಿಂತ ಕೋವಿಡ್ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಇಂದು 8 ಮಂದಿ ಮೃತಪಟ್ಟಿದ್ದಾರೆ. ನಿನ್ನೆ 18 ಜನ ಮೃತಪಟ್ಟಿದ್ದರು.

ಕೋವಿಡ್ ರೋಗಿಗಳಲ್ಲಿ ಈಗಲೂ ಶೇ 80 ಜನರಲ್ಲಿ (ಎಸಿಮ್ಟಮ್ಯಾಟಿಕ್ -ಸೋಂಕು ಲಕ್ಷಣ ಇಲ್ಲದ) ರೋಗ ಲಕ್ಷಣ ಕಂಡು ಬರುತ್ತಿಲ್ಲ. ಆದರೂ ಸೋಂಕು ಲಕ್ಷಣಗಳಿರುವ ರೋಗಿಗಳಿಗೆ ಹಾಸಿಗೆಗಳ ಅಭಾವ ಎದುರಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳ ಜೊತೆ ಬಿಬಿಎಂಪಿ ನಿರಂತರವಾಗಿ ಸಭೆ ನಡೆಸುತ್ತಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸದ್ಯ ಇರುವ ಬೆಡ್​ಗಳು ಭರ್ತಿಯಾಗಿದ್ದು, ಕೋವಿಡ್ ಬೆಡ್​ಗಳನ್ನು ಇನ್ನಷ್ಟು ಹೆಚ್ಚಿಸಲು ಸರ್ಕಾರ ಸೂಚಿಸಿದೆ. ನಗರದಲ್ಲಿ ಪ್ರತಿನಿತ್ಯ 60 ಸಾವಿರಕ್ಕೂ ಹೆಚ್ಚು ಕೋವಿಡ್ ಪರೀಕ್ಷೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರಲ್ಲಿ ಪಾಸಿಟಿವ್ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.