ಬೆಂಗಳೂರು: ಧರ್ಮರಾಯ ಟೆಂಪಲ್ ವಾರ್ಡ್ನ ಮೆಹ್ತಾ ಟವರ್ನ ಶೇರ್ ಖಾನ್ ಗಲ್ಲಿಯಲ್ಲಿ ಬರೋಬ್ಬರಿ 39 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಮೊದಲು ಒಬ್ಬರಿಗೆ ಪಾಸಿಟಿವ್ ದೃಢಪಟ್ಟಿತ್ತು. ಅವರ ಪ್ರಾಥಮಿಕ ಸಂಪರ್ಕಿತರನ್ನು ಟೆಸ್ಟ್ ಮಾಡಲಾಗಿದ್ದು, ಬರೋಬ್ಬರಿ 39 ಜನಕ್ಕೆ ಕೋವಿಡ್ ಸೋಂಕು ದೃಢಪಟ್ಟಿದೆ. ಸದ್ಯ 2000 ಜನರ ಟೆಸ್ಟ್ಗೆ ಟಾರ್ಗೆಟ್ ಮಾಡಿದ್ದು, ಟೆಸ್ಟಿಂಗ್ಗೆ 8 ತಂಡಗಳು ಸಿದ್ಧವಾಗಿದೆ.
ಮೆಹ್ತಾ ಟವರ್ನ ಒಂದು ದೊಡ್ಡ ಕಟ್ಟಡದಲ್ಲಿ ಗೋಲ್ಡ್ ಮೇಕಿಂಗ್ ಸೇರಿದಂತೆ ಅನೇಕ ವಾಣಿಜ್ಯ ಮಳಿಗೆಗಳಿವೆ. ಆ ವಾಣಿಜ್ಯ ಮಳಿಗೆಯಲ್ಲಿ 150 ಜನ ಕೆಲಸ ಮಾಡ್ತಾರೆ. 20 ರಿಂದ 40 ವರ್ಷದವರು ಇದ್ದಾರೆ. ಒಬ್ಬರಿಗೆ ಕೆಮ್ಮು, ನೆಗಡಿ ಎಂದು ಪರೀಕ್ಷೆ ಮಾಡಿದಾಗ ಕೋವಿಡ್ ದೃಢಪಟ್ಟಿದೆ. ಬಳಿಕ ಪ್ರಾಥಮಿಕ ಸಂಪರ್ಕಿತರನ್ನೆಲ್ಲ ತಪಾಸಣೆಗೊಳಪಡಿಸಿದಾಗ 39 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಪಾಸಿಟಿವ್ ಬಂದವರನ್ನು ಅಲ್ಲೇ ಇದ್ದ ಖಾಲಿ ಕಟ್ಟಡದಲ್ಲಿ ಐಸೋಲೇಟ್ ಮಾಡಲಾಗಿದೆ. ಇಬ್ಬರಿಗೆ ರೋಗಲಕ್ಷಣ ಇದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇಡೀ ವಾರ್ಡ್ ನ 40 ಸಾವಿರ ಜನರನ್ನು ಟೆಸ್ಟ್ ಮಾಡಲು ತೀರ್ಮಾನ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಕಟ್ಟಡವನ್ನು 7 ದಿನಗಳ ಸೀಲ್ ಡೌನ್ ಮಾಡಲಾಗಿದೆ ಎಂದು ಜಂಟಿ ಆಯುಕ್ತರಾದ ವೀರಭ್ರದ್ರಸ್ವಾಮಿ ಮಾಹಿತಿ ನೀಡಿದರು.
ಜಿಕೆವಿಕೆ ವಿದ್ಯಾರ್ಥಿ ಹಾಸ್ಟೆಲ್ನಲ್ಲಿ 30 ಕೇಸ್ ಪತ್ತೆ:
ಜಿಕೆವಿಕೆ ವಿದ್ಯಾರ್ಥಿ ಹಾಸ್ಟೆಲ್ನ 30 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಹಾಸ್ಟೆಲ್‌ನಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿಂದು 4,284 ಕೋವಿಡ್ ಪಾಸಿಟಿವ್ ಕೇಸ್ ದೃಢ, 8 ಸಾವು