ETV Bharat / state

ಕೇಂದ್ರ ಬಜೆಟ್​; ಬೆಂಗಳೂರು ಉಪನಗರ ರೈಲ್ವೆಗೆ 300 ಕೋಟಿ, ನೈರುತ್ಯ ರೈಲ್ವೆಗೆ 4,467 ಕೋಟಿ ಮೀಸಲು - ಡಿಜಿಎಂ ಹಾಗೂ ಮುಖ್ಯ ಸಂಪರ್ಕಾಧಿಕಾರಿ ವಿಜಯಾ ಮಾಹಿತಿ

ಕೇಂದ್ರ ರೈಲ್ವೆ ಬಜೆಟ್​​ನ ಪಿಂಕ್ ಬುಕ್​​ನಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಪ್ರಸ್ತಾಪವಿಲ್ಲ ಎಂದು ಸುದ್ದಿಯಾಗಿತ್ತು. ಈ ಕುರಿತಂತೆ ಡಿಜಿಎಂ ಹಾಗೂ ಮುಖ್ಯ ಸಂಪರ್ಕಾಧಿಕಾರಿ ವಿಜಯಾ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು ರೈಲ್ವೆ ನಿಲ್ದಾಣ
Bangalore Railway Station
author img

By

Published : Feb 4, 2021, 7:32 PM IST

ಬೆಂಗಳೂರು: ಕೇಂದ್ರ ರೈಲ್ವೆ ಬಜೆಟ್​​ನ ಪಿಂಕ್ ಬುಕ್​​ನಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಪ್ರಸ್ತಾಪವಿಲ್ಲ ಎಂದು ಸುದ್ದಿಯಾಗಿತ್ತು. ಇದಕ್ಕೆ ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರವೂ ಅರ್ಧ ಅನುದಾನ ನೀಡುವುದರಿಂದ ಇದರ ಅನುದಾನದ ಕುರಿತು ನಾದರ್ನ್ ರೈಲ್ವೆ ವರ್ಕ್ ವಿಭಾಗದಡಿ ಮೀಸಲಿಡಲಾಗಿದೆ. ಒಟ್ಟು 800 ಕೋಟಿ ರೂ. ನೀಡಲಾಗಿದೆ. ಇದರಲ್ಲಿ ಕನಿಷ್ಠ 300 ಕೋಟಿ ಬೆಂಗಳೂರು ಉಪನಗರ ಯೋಜನೆಗೆ ಬರಬಹುದು ಎಂದು ಡಿಜಿಎಂ ಹಾಗೂ ಮುಖ್ಯ ಸಂಪರ್ಕಾಧಿಕಾರಿ ವಿಜಯಾ ತಿಳಿಸಿದರು.

ಈ ವರ್ಷ ಅಧಿಕ ಅನುದಾನ: ನೈರುತ್ಯ ವಲಯ ರೈಲ್ವೆ ವಿಭಾಗ ಆರಂಭವಾದ 2003 ರಿಂದ ಈ ವರ್ಷವೇ ಅತಿಹೆಚ್ಚು ಅನುದಾನ ಬಂದಿದೆ. ನೈರುತ್ಯ ರೈಲ್ವೆಗೆ 4,467 ಕೋಟಿ ರೂ. ಬಜೆಟ್ ನೀಡಿದೆ. ಕಳೆದ ಬಾರಿಗಿಂತ ಶೇ 20 ರಷ್ಟು ಹೆಚ್ಚಾಗಿದೆ. ಈ ಬಾರಿ ಹೊಸ ಯೋಜನೆಗಳ ಘೋಷಣೆಗಿಂತ ಹಳೆ ಯೋಜನೆಗಳನ್ನು ಸಂಪೂರ್ಣಗೊಳಿಸಲು ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.

  • ಮಾರ್ಚ್ 2022 ರ ವೇಳೆಗೆ ಯಲಹಂಕ- ಪೆನುಕೊಂಡ ಹಾಗೂ ಅರಸೀಕೆರೆ- ತುಮಕೂರು ಈ ಎರಡು ಪ್ರಾಜೆಕ್ಟ್​ ಮುಗಿಸಲಾಗುವುದು.
  • ರಸ್ತೆ ಸುರಕ್ಷತಾ ಯೋಜನೆಗೆ ಕಳೆದ ವರ್ಷಕ್ಕಿಂತ ಶೇ 25 ರಷ್ಟು ಹೆಚ್ಚುವರಿ ಅನುದಾನ ಮೀಸಲಿಡಲಾಗಿದೆ. ಇದರಲ್ಲಿ ರೈಲ್ವೆ ಮೇಲ್ಸೇತುವೆ (ROB) ಹಾಗೂ ರೈಲ್ವೆ ಕೆಳಸೇತುವೆಗೆ (RUB) ಹಾಗೂ ಹೊಸ ಸಂಪರ್ಕಗಳಿಗೆ 1,223 ಕೋಟಿ ರೂ. ರಾಜ್ಯದಿಂದ ನಿರೀಕ್ಷಿಸಲಾಗಿದೆ. ಕೇಂದ್ರದಿಂದ 20-21 ನೇ ಸಾಲಿನಲ್ಲಿ 158 ಕೋಟಿ ಹಾಗೂ 21-22 ನೇ ಸಾಲಿಗೆ 174 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಇದರ ನಿರ್ಮಾಣ ಸಂಪೂರ್ಣವಾಗಲಿದೆ. ಈ ವರ್ಷ 3 ಆರ್​ಒಬಿ, 10 ಆರ್​ಯುಬಿ ನಿರ್ಮಾಣ ಮಾಡುವ ಗುರಿ ಇದೆ.
  • ರೈಲ್ವೆ ಡಬಲಿಂಗ್ ಅಥವಾ ಜೋಡಿ ಮಾರ್ಗ ನಿರ್ಮಾಣಕ್ಕೆ 20-21ನೇ ಸಾಲಿನಲ್ಲಿ 85 ಕೋಟಿ ರೂ., 21-22 ನೇ ಸಾಲಿನಲ್ಲಿ 236 ಕೋಟಿ ಮೀಸಲು
  • ಟ್ರಾಕ್ ನವೀಕರಣಕ್ಕೆ ಈ ವರ್ಷ 480 ಕೋಟಿ ಅನುದಾನ.
  • ಬ್ರಿಡ್ಜ್ ಕೆಲಸಗಳಿಗಾಗಿ 30 ಕೋಟಿ ರೂ. ಮೀಸಲು.
  • ಹುಬ್ಬಳ್ಳಿ- ಬೆಂಗಳೂರು ನಡುವೆ ಡಬಲ್ ಲೈನ್ ಮಾಡಲಾಗುತ್ತಿದೆ. ಇದಕ್ಕೆ 336 ಕೋಟಿ ರೂ ನೀಡಲಾಗಿದ್ದು, ಒಂದೂವರೆ ವರ್ಷದಲ್ಲಿ ಮುಗಿಸಲು ಚಿಂತನೆ.
  • ಬೆಂಗಳೂರು- ವೈಟ್ ಫೀಲ್ಡ್​ ನಡುವೆ ರೈಲ್ವೆ ಚತುಷ್ಕೋನ ಹಳಿ ಕಾಮಗಾರಿಗೆ 78 ಕೋಟಿ ಕೊಡಲಾಗಿದೆ. ಮುಂದಿನ ಫೆಬ್ರವರಿ ವೇಳೆಗೆ ಅಂತ್ಯಗೊಳಿಸಲು ಯೋಜನೆ ರೂಪಿಸಿದೆ.
  • ಬೆಂಗಳೂರು-ಹುಬ್ಬಳ್ಳಿ- ಡಬಲಿಂಗ್ ಪ್ರಾಜೆಕ್ಟ್​ನಲ್ಲಿ ನಾಲ್ಕೈದು ಕೆಲಸ ಇದೆ. ಕಳೆದ ವರ್ಷ 253 ಕೋಟಿ ಮಾತ್ರ ಸಿಕ್ಕಿತ್ತು.ಈ ಬಾರಿ 383 ಕೋಟಿ ವೆಚ್ಚದಲ್ಲಿ ಕೆಲಸ ಆಗಲಿದೆ. ಅರಸಿಕೆರೆ-ತುಮಕೂರು ನಡುವೆ 47 ಕೋಟಿ ವೆಚ್ಚದಲ್ಲಿ ಮುಂದಿನ ವರ್ಷ ಕೆಲಸ ಸಂಪೂರ್ಣ ಆಗಲಿದೆ. ಹುಬ್ಬಳ್ಳಿ-ಚಿಕ್ಕ ಜಾಜೂರು ನಡುವೆಯೂ ಡಬಲಿಂಗ್ ಕೆಲಸ ನಡೆಯಲಿದೆ.
  • ನಾಗನಹಳ್ಳಿ-ಮೈಸೂರು- ಸ್ಯಾಟಲೈಟ್ ಟರ್ಮಿನಲ್- ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ.
  • ರಾಜ್ಯಾದ್ಯಂತ ರೈಲ್ವೆ ಎಲೆಕ್ಟ್ರಿಫಿಕೇಶನ್ ಕೆಲಸ ಚುರುಕು ಪಡೆಯಲಿದೆ. ಮುಂದಿನ ವರ್ಷಾಂತ್ಯಕ್ಕೆ 849 ಕಿ.ಮೀ ರೈಲ್ವೆಯನ್ನು ಎಲೆಕ್ಟ್ರಿಫಿಕೇಶನ್ ಮಾಡಲಾಗುತ್ತದೆ.
  • ರಾಜ್ಯದಲ್ಲಿ ಒಟ್ಟು ಜನವರಿ ಅಂತ್ಯದ ವರೆಗೆ 105 ಕಿ.ಮೀ ಡಬಲಿಂಗ್ ಮಾಡಲಾಗಿದೆ. ಜೊತೆಗೆ ಈ ವರ್ಷ ಅಂತ್ಯದಲ್ಲಿ 170 ಕಿ.ಮೀ , 200 ಕಿ.ಮೀ ಮುಂದಿನ ವರ್ಷದಲ್ಲಿ ಸಂಪೂರ್ಣಗೊಳಿಸುವ ಗುರಿ ಇದೆ.
  • ಇನ್ನು ಹೊಸ ರೈಲ್ವೇ ಮಾರ್ಗಗಳಿಗೆ 2,298 ಎಕರೆ ಭೂಮಿ ಅಗತ್ಯ ಇದೆ. ಸದ್ಯ 130 ಎಕರೆ ಮಾತ್ರ ಬಂದಿದೆ. ರಾಜ್ಯ ಸರ್ಕಾರ ಭೂ ಸ್ವಾಧೀನ ಮಾಡಿ ಕೊಡಬೇಕಿದೆ. ಇದರಲ್ಲಿ ವಿಳಂಬವಾಗುತ್ತಿದೆ.
  • ನಾಗನಹಳ್ಳಿ ಟರ್ಮಿನಲ್ ಅಭಿವೃದ್ಧಿಗೆ 20 ಕೋಟಿ ಅನುದಾನ ಸಿಕ್ಕಿದೆ.
  • ಕುಶಾಲನಗರ- ಮೈಸೂರು ಪ್ರಾಜೆಕ್ಟ್ - ಹೊಸ ಸಂಪರ್ಕ ಮಾರ್ಗಕ್ಕೆ ಭೂಸ್ವಾಧೀನ ಕೆಲಸ ಸಂಪೂರ್ಣಗೊಂಡಿಲ್ಲ.
  • ಬೆಂಗಳೂರು- ಮೈಸೂರು- ಚೆನ್ನೈ ನಡುವೆ ಹೈ ಸ್ಪೀಡ್ ರೈಲಿನ ಯೋಜನೆಗೆ ಈಗಾಗಲೇ ಟೆಂಡರ್ ಜಾರಿಯಲ್ಲಿದೆ.

ಓದಿ: 2 ದಿನ ಕಲಾಪ ವಿಸ್ತರಿಸುವಂತೆ ಸಭಾಪತಿಗಳಿಗೆ ಬಿಜೆಪಿ ಪತ್ರ

ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಅನುದಾನ.. ಹೊಸ ಸಂಪರ್ಕಗಳು :

  • ರಾಯದುರ್ಗ- ಕಲ್ಯಾಣದುರ್ಗ - 250 ಕೋಟಿ
  • ಬಾಗಲಕೋಟೆ-ಕುಡಚಿ- 25 ಕೋಟಿ
  • ತುಮಕೂರು-ದಾವಣಗೆರೆ (199ಕಿ.ಮೀ) - 100 ಕೋಟಿ
  • ಗದಗ-ವಾಡಿ- (252 ಕಿ.ಮೀ) - 100 ಕೋಟಿ
  • ಶಿವಮೊಗ್ಗ-ರಾಣಿಬೆನ್ನೂರು- 100 ಕೋಟಿ
  • ಬೆಳಗಾವಿ-ಕಿತ್ತೂರು- 50 ಕೋಟಿ‌

ರೈಲ್ವೆ ಡಬಲಿಂಗ್​​:

  • ಹೊಸಪೇಟೆ-ವಾಸ್ಕೋಡಿಗಾಮ- 365 ಕೋಟಿ
  • ಹೋಟಗಿ- ಗದಗ- 165 ಕೋಟಿ
  • ಯಲಹಂಕ-ಪೆನುಕೊಂಡ- 160 ಕೋಟಿ
  • ಹುಬ್ಬಳ್ಳಿ- ಚಿಕ್ಕಜಾಜೂರು- 336 ಕೋಟಿ
  • ಅರಸೀಕೆರೆ-ತುಮಕೂರು- 47 ಕೋಟಿ

ಒಟ್ಟಿನಲ್ಲಿ ಈ ಬಾರಿ ನೈರುತ್ಯ ರೈಲ್ವೆ ವಿಭಾಗಕ್ಕೆ ಹೆಚ್ಚು ಅನುದಾನ ನೀಡಲಾಗಿದ್ದು, ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಅಧಿಕಾರಿ ವಿಜಯಾ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.