ETV Bharat / state

ಗುರುರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣ: ಮೂವರನ್ನು ಬಂಧಿಸಿದ ಸಿಐಡಿ - Bangalore Crime News

ಗುರುರಾಘವೇಂದ್ರ ಬ್ಯಾಂಕ್​​ ಬಹುಕೋಟಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನದ ಹಿಂದೆ ಬ್ಯಾಂಕ್​​ನ ಮಾಜಿ ಅಧ್ಯಕ್ಷ ರಾಮಕೃಷ್ಣನನ್ನು ಬಂಧಿಸಲಾಗಿತ್ತು. ಇದೀಗ ಪ್ರಕರಣ ಸಂಬಂಧ ಇನ್ನೂ ಮೂವರನ್ನು ಸಿಐಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

gururaghavendra-bank-fraud-case
ಗುರುರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣ
author img

By

Published : Sep 28, 2020, 5:17 PM IST

ಬೆಂಗಳೂರು: ಬಸವನಗುಡಿಯ ಶ್ರೀ ಗುರುರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲರೆಡ್ಡಿ, ವೆಂಕಟೇಶ್ ಹಾಗೂ ಸುಬ್ರಮಣ್ಯ ಬಂಧಿತರು.

ಕಳೆದ ಎರಡು ದಿನಗಳ ಹಿಂದೆ ಪ್ರಕರಣದ ಪ್ರಮುಖ ಆರೋಪಿಯಾದ ಬ್ಯಾಂಕ್​​ನ ಮಾ​ಜಿ ಅಧ್ಯಕ್ಷ ರಾಮಕೃಷ್ಣ, ಆಡಳಿತ ಮಂಡಳಿಯ ಸದಸ್ಯರಾಗಿದ್ದ ವೇಣುಗೋಪಾಲ್ ಹಾಗೂ ಜಿ‌.ರಘುನಾಥ್ ಎಂಬುವರಿಗೆ ವಂಚನೆಗೆ ಸಹಕರಿಸಿದ ಆರೋಪದಡಿ ಸಿಐಡಿ ಪೊಲೀಸರು ಬಂಧಿಸಿದ್ದರು.

ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿಗಳ ಇರುವಿಕೆ ಆಥವಾ ಮಾಹಿತಿ ನೀಡಿದವರಿಗೆ‌ ಸೂಕ್ತ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಗ್ರಾಹಕರಿಂದ ಯಾವುದೇ ದಾಖಲೆ ಪಡೆದುಕೊಳ್ಳದೆ ಆಪ್ತರಿಗೆ ಸಾಲ ನೀಡುತ್ತಿದ್ದರು ಎನ್ನಲಾಗ್ತಿದೆ. ಈ ಮೂಲಕ‌ ನೂರಾರು ಕೋಟಿ ಅವ್ಯವಹಾರ ಎಸಗಿರುವುದು ಕಂಡುಬಂದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.