ಬೆಂಗಳೂರು: ಚಾಮರಾಜನಗರ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗೂ ಅನ್‌ಲಾಕ್-2 ಮಾರ್ಗಸೂಚಿ ಅನ್ವಯವಾಗಲಿದೆ. ಕೋವಿಡ್ ಪಾಸಿಟಿವಿಟಿ ಪ್ರಮಾಣ 5%ಗಿಂತ ಕೆಳಗೆ ಇಳಿಕೆಯಾದ ಹಿನ್ನೆಲೆ ಈ ಜಿಲ್ಲೆಗಳಿಗೆ ಅನ್‌ಲಾಕ್-2 ಮಾರ್ಗಸೂಚಿ ಅನ್ವಯವಾಗಲಿದೆ.
ಮೈಸೂರು ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 10ಕ್ಕೂ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅನ್‌ಲಾಕ್-1 ಮಾರ್ಗಸೂಚಿ ಅನ್ವಯವಾಗಲಿದೆ.
ಈವರೆಗೆ ರಾಜ್ಯದಲ್ಲಿ 23 ಜಿಲ್ಲೆಗಳನ್ನು ಕೆಟಗರಿ-1ಗೆ (ಅನ್‌ಲಾಕ್-2) ಸೇರಿಸಲಾಗಿತ್ತು. ಇದೀಗ ಮತ್ತೆ ಮೂರು ಜಿಲ್ಲೆಗಳನ್ನು ಕೆಟಗರಿ-1 ಜಿಲ್ಲೆಗೆ ಸೇರ್ಪಡೆಗೊಳಿಸಲಾಗಿದೆ. ಆ ಮೂಲಕ ಒಟ್ಟು 26 ಜಿಲ್ಲೆಗಳು ಕೆಟಗರಿ-1ಗೆ ಸೇರ್ಪಡೆಗೊಂಡಂತಾಗಿದೆ.