ETV Bharat / state

ಮೆಗಾ ಲೋಕ್ ಅದಾಲತ್​​ನಲ್ಲಿ 3.52 ಲಕ್ಷ ಪ್ರಕರಣ ಇತ್ಯರ್ಥ : 90 ಜೋಡಿಗಳ ಬಾಳಲ್ಲಿ ಹೊಸ ಬೆಳಕು - ಮೆಗಾ ಲೋಕ್ ಅದಾಲತ್​​ನಲ್ಲಿ ಮತ್ತೆ ಒಂದಾದ 90 ಜೋಡಿಗಳು

ರಾಜ್ಯವ್ಯಾಪಿ ನಡೆದ ಲೋಕ ಅದಾಲತ್​​ನಲ್ಲಿ ಹೈಕೋರ್ಟ್ ನ 11 ಪೀಠಗಳು ಹಾಗೂ 978 ಜಿಲ್ಲಾ ನ್ಯಾಯಪೀಠಗಳು ಕಾರ್ಯನಿರ್ವಹಿಸಿವೆ. ವಿಡಿಯೋ ಕಾನ್ಫರೆನ್ಸ್ ಮೂಲಕವೂ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಹೈಕೋರ್ಟ್
ಹೈಕೋರ್ಟ್
author img

By

Published : Mar 12, 2022, 9:30 PM IST

ಬೆಂಗಳೂರು : ಇಂದು ನಡೆದ ರಾಷ್ಟ್ರೀಯ ಮೆಗಾ ಲೋಕ್ ಅದಾಲತ್​​​ನಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ತಿಳಿಸಿದರು.

ಸಂಜೆ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡ ಅವರು, ಮಾರ್ಚ್ 12ರಂದು ನಡೆಸಿದ ರಾಷ್ಟ್ರೀಯ ಲೋಕ್ ಅದಾಲತ್​​ನಲ್ಲಿ 3,52,588 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇವೆ. ಇವುಗಳಲ್ಲಿ 3.35 ಲಕ್ಷ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದಂತಹವು. ಉಳಿದ 17 ಸಾವಿರ ಪ್ರಕರಣಗಳು ವ್ಯಾಜ್ಯ ಪೂರ್ವ ಪ್ರಕರಣಗಳು ಎಂದು ತಿಳಿಸಿದರು.

ರಾಜ್ಯವ್ಯಾಪಿ ನಡೆದ ಲೋಕ ಅದಾಲತ್​​ನಲ್ಲಿ ಹೈಕೋರ್ಟ್ ನ 11 ಪೀಠಗಳು ಹಾಗೂ 978 ಜಿಲ್ಲಾ ನ್ಯಾಯಪೀಠಗಳು ಕಾರ್ಯನಿರ್ವಹಿಸಿವೆ. ವಿಡಿಯೋ ಕಾನ್ಫರೆನ್ಸ್ ಮೂಲಕವೂ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದೇ ಮೊದಲ ಬಾರಿಗೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ)ಕ್ಕೆ ಸಂಬಂಧಿಸಿದ 183 ಪ್ರಕರಣಗಳನ್ನು ಕೂಡ ಇತ್ಯರ್ಥಪಡಿಸಲಾಗಿದೆ. ಹಾಗೆಯೇ, ಮೊದಲ ಬಾರಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರದ 5,582 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ವೈವಾಹಿಕ ಜೀವನ ಪುನಾರಂಭ : ಕಾನೂನು ಸೇವಾ ಪ್ರಾಧಿಕಾರ ಲೋಕ ಅದಾಲತ್​​ನಲ್ಲಿ ವೈವಾಹಿಕ ಪ್ರಕರಣಗಳನ್ನು ಸಾಧ್ಯವಾದಷ್ಟು ರಾಜಿ ಮೂಲಕ ಇತ್ಯರ್ಥಪಡಿಸಲು ಯೋಜಿಸಲಾಗಿತ್ತು. ಅದರಂತೆ 90ಕ್ಕೂ ಹೆಚ್ಚು ಪ್ರಕರಣಗಳಲ್ಲಿ ದಂಪತಿ ತಮ್ಮ ವೈಮನಸ್ಸು ಬಿಟ್ಟು ಒಂದಾಗಿ ಮತ್ತೆ ಹೊಸ ಜೀವನ ಆರಂಭಿಸಿದ್ದಾರೆ. ಮೈಸೂರಿನಲ್ಲಿ 32 ಹಾಗೂ ಬೆಂಗಳೂರಿನಲ್ಲಿ 29 ದಂಪತಿಗಳು ಮೆಗಾ ಲೋಕ್ ಅದಾಲತ್​​ನ ರಾಜಿ ಸಂಧಾನದಲ್ಲಿ ಒಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಕೆಎಸ್ಆಆರ್​​​​ಟಿಸಿ-ಬಿಎಂಟಿಸಿ ನೌಕರರ ಮರು ನೇಮಕ : ಕಾರ್ಮಿಕ ನ್ಯಾಯಾಲಯಗಳಲ್ಲಿ ವಜಾಗೊಂಡ ಕೆಎಸ್ಆರ್​​​ಟಿಸಿ ಹಾಗೂ ಬಿಎಂಟಿಸಿ ನೌಕರರ ಮರು ನೇಮಕಾತಿಗೆ ಸಂಬಂಧಿಸಿದಂತೆ ಇದ್ದಂತಹ 359 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇವುಗಳಲ್ಲಿ ಬೆಂಗಳೂರಿನ 324 ಪ್ರಕರಣಗಳು, ಮಂಗಳೂರಿನ 32 ಪ್ರಕರಣಗಳು ಹಾಗೂ ಕಾರವಾರದ 3 ಪ್ರಕರಣಗಳು ಇತ್ಯರ್ಥವಾಗಿವೆ ಎಂದರು.

ಅಪಘಾತ ಪ್ರಕರಣಗಳಲ್ಲಿ ಹೆಚ್ಚಿನ ಪರಿಹಾರ : ಈ ಬಾರಿಯ ಲೋಕ ಅದಾಲತ್​​ನಲ್ಲಿ ಬೆಂಗಳೂರಿನ ಎಂ.ವಿ.ಸಿ ಪ್ರಕರಣವೊಂದರಲ್ಲಿ ಅತಿ ಹೆಚ್ಚಿನ ಪರಿಹಾರ ದೊರಕಿಸಿಕೊಡಲಾಗಿದೆ. ಅಪಘಾತ ಪ್ರಕರಣವೊಂದರಲ್ಲಿ 1.75 ಕೋಟಿ ರೂ. ಪರಿಹಾರ ನೀಡಲು ವಿಮಾ ಸಂಸ್ಥೆ ಒಪ್ಪಿಗೆ ಸೂಚಿಸಿದೆ. ಅದೇ ರೀತಿ ಬಾಗಲಕೋಟೆಯಲ್ಲಿ 81 ಲಕ್ಷ ಹಾಗೂ ಶಿವಮೊಗ್ಗದ ಸೊರಬದಲ್ಲಿ 70 ಲಕ್ಷ ಮೊತ್ತದ ಪರಿಹಾರ ನೀಡಲು ವಿಮಾ ಸಂಸ್ಥೆಗಳು ಒಪ್ಪಿದ್ದು, ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ನ್ಯಾಯಮೂರ್ತಿಗಳು ವಿವರಿಸಿದರು.

ವಾಣಿಜ್ಯ ದಾವೆ ಇತ್ಯರ್ಥ: ಬೆಂಗಳೂರಿನ ಎಂಟು ವಾಣಿಜ್ಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 126 ವಾಣಿಜ್ಯ ದಾವೆಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ, 62 ಕೋಟಿ ಪರಿಹಾರ ಕೊಡಿಸಲಾಗಿದೆ.

53 ವರ್ಷದ ಹಿಂದಿನ ಪ್ರಕರಣ ಇತ್ಯರ್ಥ : ಮೈಸೂರಿನಲ್ಲಿ 53 ವರ್ಷಗಳಷ್ಟು ಹಿಂದಿನ ಆಸ್ತಿ ಹಂಚಿಕೆ ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗಿದೆ. ಹಾಗೆಯೇ ಮಂಗಳೂರಿನ 26 ವರ್ಷ ಹಳೆಯದಾದ ಸಾಲ ವಸೂಲಾತಿ ಅಡಮಾನ ದಾವೆಯನ್ನು ಕೂಡ ರಾಜಿ ಮೂಲಕ ಬಗೆಹರಿಸಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.