ETV Bharat / state

ಬಿಎಂಟಿಸಿ, ಮೆಟ್ರೋ ಸಿಬ್ಬಂದಿಗೆ ಕೋವಿಡ್ ಸೋಂಕು; 264 ಮಂದಿ ನೌಕರರಿಗೆ ಪಾಸಿಟಿವ್!

author img

By

Published : Jan 20, 2022, 11:55 AM IST

ಬಿಎಂಟಿಸಿ ಮತ್ತು ಮೆಟ್ರೋ ಸಿಬ್ಬಂದಿಗೆ ಕೋವಿಡ್ ಸೋಂಕು ತೀವ್ರವಾಗಿ ತಟ್ಟಿದ್ದು, 264 ನೌಕರರಿಗೆ ಕೊರೊನಾ ದೃಢಪಟ್ಟಿರುವ ಮಾಹಿತಿ ಲಭ್ಯವಾಗಿದೆ.

BMTC metro staff tests positive for covid, Metro employees test positive for corona, Bengaluru corona news, Bengaluru covid update, ಬಿಎಂಟಿಸಿ ಮೆಟ್ರೋ ಸಿಬ್ಬಂದಿಗಳಿಗೆ ಕೊರೊನಾ ದೃಢ, ಮೆಟ್ರೋ ಸಿಬ್ಬಂದಿಗಳಿಗೆ ಕೋವಿಡ್​ ದೃಢ, ಬೆಂಗಳೂರು ಕೊರೊನಾ ಸುದ್ದಿ, ಬೆಂಗಳೂರು ಕೋವಿಡ್​ ಅಪ್​ಡೇಟ್​,
ಬಿಎಂಟಿಸಿ ಮೆಟ್ರೋ ಸಿಬ್ಬಂದಿಗಳಿಗೆ ತೀವ್ರವಾಗಿ ತಟ್ಟಿದ್ದ ಕೋವಿಡ್ ಸೋಂಕು

ಬೆಂಗಳೂರು: ಕೋವಿಡ್ ಸೋಂಕಿನ ಮೂರನೇ ಅಲೆ ಬಿಎಂಟಿಸಿ ಸಿಬ್ಬಂದಿಗೂ ತೀವ್ರವಾಗಿ ಕಾಡುತ್ತಿದ್ದು, ಸೋಂಕು ತಗುಲಿರುವ ನೂರಾರು ಮಂದಿ ಸಿಬ್ಬಂದಿ ಮನೆಗಳಲ್ಲಿಯೇ ಐಸೋಲೇಷನ್​ಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಎಂಟಿಸಿ ಎಂ.ಡಿ ಅನ್ಬುಕುಮಾರ್ ಮಾಹಿತಿ

ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಕರು, ನಿರ್ವಾಹಕರು, ಮೆಕಾನಿಕ್​ಗಳು ಸೇರಿದಂತೆ 163 ಮಂದಿಗೆ ಕೊರೋನಾ ದೃಢಪಟ್ಟಿದೆ. ಎಲ್ಲ ಸಿಬ್ಬಂದಿಯೂ ಸರ್ಕಾರದ ಮಾರ್ಗಸೂಚಿಗಳನ್ವಯ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಬಿಎಂಟಿಸಿ ಎಂ.ಡಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

ಓದಿ: ಜಲ್ಲಿಕಟ್ಟು ಸ್ಪರ್ಧೆ ವೇಳೆ ಗೂಳಿಗಳ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಬಂಧನ! VIDEO

ಕೋವಿಡ್ ಸೋಂಕಿತ ಎಲ್ಲ ಸಿಬ್ಬಂದಿಗೂ ವೇತನ ಸಹಿತ 8 ದಿನಗಳ ಕಾಲ ರಜೆ ಮಂಜೂರು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಸಿಬ್ಬಂದಿಗೆ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವ ಕುರಿತು ಕಾಲ ಕಾಲಕ್ಕೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ನಮ್ಮ ಮೆಟ್ರೋದ 820 ಸಿಬ್ಬಂದಿಗೆ ಟೆಸ್ಟ್:

ನಮ್ಮ ಮೆಟ್ರೋ ರೈಲಿನ ಒಟ್ಟು 101 ಮಂದಿ ಸಿಬ್ಬಂದಿಗೆ ಬುಧವಾರ ಕೊರೊನಾ ಸೋಂಕು ತಗಲಿರುವುದು ವರದಿಯಾಗಿದೆ. ಮೆಟ್ರೋದಲ್ಲಿ ಸೇವೆ ಸಲ್ಲಿಸುತ್ತಿರುವ 820 ಸಿಬ್ಬಂದಿಗೆ ಕೊರೊನಾ ಪರೀಕ್ಷೆಗೊಳಪಡಿಸಲಾಗಿತ್ತು. ಅವರಲ್ಲಿ ಈವರೆಗೆ 101 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.