ETV Bharat / state

ಸಂಚಾರಿ ನಿಯಮ ಉಲ್ಲಂಘನೆ: ಬೆಂಗಳೂರಲ್ಲಿ 251 ವಾಹನಗಳು ಜಪ್ತಿ - ಬೆಂಗಳೂರು ಸಾರಿಗೆ ಅಧಿಕಾರಿಗಳಿಂದ ಕಾರ್ಯಾಚರಣೆ

ತೆರಿಗೆ ಪಾವತಿಸದೆ ಮತ್ತು ಡಿಎಲ್ (ಚಾಲನಾ ಪರವಾನಗಿ)​ ಇಲ್ಲದೆ ಸಂಚರಿಸುತ್ತಿದ್ದ ವಾಹನಗಳನ್ನು ಬೆಂಗಳೂರು ಸಾರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

vehicles seized in Bengaluru for violating the rule
ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿದ ವಾಹನಗಳು ಜಪ್ತಿ
author img

By

Published : Dec 11, 2020, 3:47 PM IST

ಬೆಂಗಳೂರು : ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿದ್ದ ಖಾಸಗಿ ಬಸ್​, ಮಾಕ್ಸಿ ಕ್ಯಾಬ್​ಗಳ ವಿರುದ್ಧ ಸಾರಿಗೆ ಇಲಾಖೆಯು ವಿಶೇಷ ಕಾರ್ಯಾಚರಣೆ ನಡೆಸಿದೆ.

ಗುರುವಾರ ಒಂದೇ ದಿನ‌ ನಗರದ ಹೆಬ್ಬಾಳ, ನಾಗಾವರ, ಇಂದಿರಾನಗರ, ಕೆ.ಆರ್.ಪುರ ಮತ್ತು ಗುರಗುಂಟೆಪಾಳ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ ಸಾರಿಗೆ ಅಧಿಕಾರಿಗಳು, ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ 40 ಬಸ್​, 60 ಮಾಕ್ಸಿ ಕ್ಯಾಬ್ ಹಾಗೂ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ151 ವಾಹನಗಳು ಸೇರಿದಂತೆ ಒಟ್ಟು 251 ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಓದಿ: ಇದ್ದಕ್ಕಿದ್ದಂತೆ ಚಲಿಸಿದ ಟೆಂಪೋ: ಗಾಬರಿಗೊಂಡ ಸಾರ್ವಜನಿಕರು

ಸಂಬಂಧಪಟ್ಟವರ ವಿರುದ್ದ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ಸರ್ಕಾರಕ್ಕೆ ಸಂದಾಯವಾಗಬೇಕಾದ ತೆರಿಗೆ ಪಾವತಿಸದೆ ಸಂಚರಿಸುತ್ತಿದ್ದ ವಾಹನಗಳು ಮತ್ತು ಡಿಎಲ್ ಇಲ್ಲದೆ ಸಂಚರಿಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.