ಬೆಂಗಳೂರು : ನಗರದ ದೇವರ ಜೀವನಹಳ್ಳಿ (ಡಿ.ಜೆ ಹಳ್ಳಿ)ಯಲ್ಲಿ ಪೊಲೀಸ್ ಠಾಣೆಯ ಪಕ್ಕದಲ್ಲೇ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಬಗ್ಗೆ ಗೌ ಗ್ಯಾನ ಫೌಂಡೇಶನ್ ಶುಕ್ರವಾರ ಬೆಳಕಿಗೆ ತಂದು ದೂರು ನೀಡಿದೆ.
ವಿಜಯದಶಮಿ ದಿನದಂದೇ ಕಾನೂನುಬಾಹಿರವಾಗಿ 25 ಗೋವುಗಳ ಕಟಾವು ಮಾಡಿರುವ ಮಾಹಿತಿ ಹೊರ ಬಿದ್ದಿದೆ. ಡಿಜೆಹಳ್ಳಿ ಠಾಣೆ ಪಕ್ಕದ ಗಲ್ಲಿಯಲ್ಲಿರುವ ಕಸಾಯಿಖಾನೆ ಮೇಲೆ ಗೌ ಗ್ಯಾನ ಫೌಂಡೇಶನ್ ಇಂದು ಬೆಳಗ್ಗೆ ದಾಳಿ ನಡೆಸಿದೆ. ಕೊಲ್ಲಲು ಕಟ್ಟಿ ಹಾಕಿದ್ದ ನಾಲ್ಕು ಗೋವುಗಳನ್ನು ರಕ್ಷಿಸಿದ್ದಾರೆ.
ಕಸಾಯಿಖಾನೆಯನ್ನು ಪರಿಶೀಲಿಸಿ, ಸಿಬ್ಬಂದಿ ವಿಚಾರಣೆ ನಡೆಸಿದಾಗ ಸುಮಾರು 25 ಗೋವುಗಳನ್ನು ಕಡಿದು ಮಾಂಸವನ್ನು ಸಾಗಿಸಿರುವುದು ತಿಳಿದು ಬಂದಿದೆ. ಡಿಜೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಕ್ಷಿಸಲ್ಪಟ್ಟ ಗೋವುಗಳನ್ನು ವಶಪಡಿಸಿಕೊಂಡಿದ್ದಾರೆ.
ಓದಿ: ಜಂಬೂ ಸವಾರಿಗೂ ಮುನ್ನ ನಂದಿ ಧ್ವಜಕ್ಕೆ ಮೊದಲ ಪೂಜೆ: ಏನಿದರ ಹಿನ್ನೆಲೆ?