ETV Bharat / state

ಬೆಂಗಳೂರಿನಲ್ಲಿಂದು 23 ಸಾವಿರ ಸೋಂಕಿತರು ಪತ್ತೆ: ಪಾಸಿಟಿವಿಟಿ ಪ್ರಮಾಣ ಶೇ. 39.91ಕ್ಕೆ ಏರಿಕೆ

author img

By

Published : May 6, 2021, 10:39 AM IST

Updated : May 6, 2021, 11:00 AM IST

ರಾಜ್ಯ ರಾಜಧಾನಿಯಲ್ಲಿ ಕೋವಿಡ್​ ಪ್ರರಣಗಳು ಬಹಳ ವೇಗವಾಗಿ ಉಲ್ಭಣಗೊಳ್ಳುತ್ತಿದೆ. ನಗರದಲ್ಲಿಂದು ಪತ್ತೆಯಾಗಿರುವ ಸೋಂಕು ಪ್ರಕರಣಗಳ ವರದಿ ಹೀಗಿದೆ.

bangalore covid cases
ಬೆಂಗಳೂರು ಕೋವಿಡ್​ ಪ್ರರಣಗಳು

ಬೆಂಗಳೂರು: ನಗರದಲ್ಲಿಂದು 23,746 ಕೋವಿಡ್​ ಪ್ರಕರಣಗಳು ಪತ್ತೆಯಾಗಿವೆ. ಜನತಾ ಕರ್ಫ್ಯೂ ಇದ್ರೂ ಕೂಡ ಹತೋಟಿಗೆ ಬಾರದ ಸೋಂಕು ಹರಡುವಿಕೆ ಬೆಂಗಳೂರು ಜನತೆಯಲ್ಲಿ ಭೀತಿ ಹುಟ್ಟಿಸಿದೆ. ನಗರದ ಕೋವಿಡ್ ಪಾಸಿಟಿವಿಟಿ ಪ್ರಮಾಣ ಇದೀಗ ಶೇ.39.9 ರಷ್ಟಾಗಿದೆ.

ಹೊಸ ಸೋಂಕು ಪ್ರಕರಣಗಳು ಪತ್ತೆಯಾದ ಪ್ರದೇಶಗಳು:

ಬೆಂಗಳೂರು ಪೂರ್ವದಲ್ಲಿ- 3,460, ಮಹದೇವಪುರ- 3,396, ಬೊಮ್ಮನಹಳ್ಳಿ- 2,309, ದಕ್ಷಿಣ ವಲಯ- 2,982, ಪಶ್ಚಿಮ ವಲಯ- 2,305, ಯಲಹಂಕ- 1,948, ಆರ್​ಆರ್ ನಗರ- 1,869, ದಾಸರಹಳ್ಳಿ- 837 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ನಗರದಲ್ಲಿ 9 ವರ್ಷದೊಳಗಿನ 715 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿದೆ. 10-19 ವರ್ಷದ 1,472 ಮಂದಿಗೆ, 20-29 ವರ್ಷದ 5,152 ಹಾಗೂ 70 ವರ್ಷ ಮೇಲ್ಪಟ್ಟ 1,092 ಮಂದಿ ಸೋಂಕಿಗೆ ಒಳಪಟ್ಟಿದ್ದಾರೆ. ಇನ್ನು 161 ಸಾವಿನ ಪ್ರಕರಣಗಳ ಪೈಕಿ 70 ವರ್ಷ ಮೇಲ್ಪಟ್ಟ 51 ಮಂದಿ ಮೃತಪಟ್ಟಿದ್ದಾರೆ.

ಎರಡನೇ ಸ್ಥಾನದಲ್ಲಿದೆ ಬೆಂಗಳೂರು:

ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಒಳಗೊಂಡಿರುವ ನಗರಗಳ ಪೈಕಿ ದೆಹಲಿಯ ನಂತರ ಎರಡನೇ ಸ್ಥಾನದಲ್ಲಿ ಬೆಂಗಳೂರು ಇದೆ. ದೆಹಲಿಯಲ್ಲಿ 12,32,942 ಜನಕ್ಕೆ ಸೋಂಕು ದೃಢಪಟ್ಟಿದ್ದರೆ ಬೆಂಗಳೂರಲ್ಲಿ 8,63,380 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

Last Updated : May 6, 2021, 11:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.