ಬೆಂಗಳೂರು: ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಆರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿದ್ದು, 23 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆರು ಮಂದಿ ಐಪಿಎಸ್ಗಳಿಗೆ ಬಡ್ತಿ :
- ಅಮೃತ್ ಪೌಲ್ - ಎಡಿಜಿಪಿ, ನೇಮಕಾತಿ ಮತ್ತು ತರಬೇತಿ
- ಉಮೇಶ್ ಕುಮಾರ್ - ಎಡಿಜಿಪಿ, ಗೃಹ ಇಲಾಖೆ ಕಾರ್ಯದರ್ಶಿ
- ಅರುಣ್ ಚಕ್ರವರ್ತಿ - ಎಡಿಜಿಪಿ, ರೈಲ್ವೇಸ್ ಬೆಂಗಳೂರು
ಮತ್ತೆ ಮೂವರು ಐಪಿಎಸ್ ಅಧಿಕಾರಿಗಳಿಗೆ ಎಡಿಜಿಪಿ ಹುದ್ದೆಯಿಂದ ಡಿಜಿಪಿ ಹುದ್ದೆಗೆ ಪ್ರಮೋಷನ್ ನೀಡಲಾಗಿದೆ.
- ಎನ್.ಎಸ್.ಮೇಘರಿಕ್ - ಡಿಜಿಪಿ ಸಿಐಡಿ
- ಆರ್.ಪಿ ಶರ್ಮಾ - ಡಿಜಿಪಿ ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್
- ಅಲೋಕ್ ಮೋಹನ್ - ಡಿಜಿಪಿ ಕಾರಾಗೃಹ ಇಲಾಖೆ