ETV Bharat / state

2023 ರಾಜ್ಯ ಕಾಂಗ್ರೆಸ್ ಪಾಲಿಗೆ ದಿಗ್ವಿಜಯದ ಅದೃಷ್ಟ - ಕಾಂಗ್ರೆಸ್ ದಿಗ್ವಿಜಯದ ವರ್ಷ

2023 ರಾಜ್ಯ ರಾಜಕೀಯದಲ್ಲಿ ಹಲವು ಪರಿವರ್ತನೆಗಳಾಗಿವೆ. ಅದರಲ್ಲೂ ಈ ವರ್ಷ ಕಾಂಗ್ರೆಸ್ ಪಾಲಿಗೆ ಅದೃಷ್ಟದ ವರ್ಷ. ಹೊಸ ವರ್ಷಕ್ಕೆ ಕಾಲಿಡುವ ಮುನ್ನ 2023ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಡೆದ ವಿದ್ಯಮಾನಗಳ ಕಿರುನೋಟ.

ಕಾಂಗ್ರೆಸ್ ಪಾಲಿಗೆ ದಿಗ್ವಿಜಯದ ಅದೃಷ್ಟ
ಕಾಂಗ್ರೆಸ್ ಪಾಲಿಗೆ ದಿಗ್ವಿಜಯದ ಅದೃಷ್ಟ
author img

By ETV Bharat Karnataka Team

Published : Dec 31, 2023, 5:26 PM IST

ಬೆಂಗಳೂರು: 2023 ವರ್ಷ ಮುಗಿದು 2024ರ ಹೊಸ ವರ್ಷದ ಆರಂಭದಲ್ಲಿದ್ದೇವೆ. 2023 ರಾಜ್ಯ ರಾಜಕೀಯದಲ್ಲಿ ಅನೇಕ ಪರಿವರ್ತನೆಗಳಾಗಿವೆ. ಬಿಜೆಪಿ ಸರ್ಕಾರ ಹೋಗಿ ಹೊಸ ಕಾಂಗ್ರೆಸ್ ಸರ್ಕಾರ ರಾಜ್ಯದ ಅಧಿಕಾರದ ಗದ್ದುಗೆ ಹಿಡಿದಿದೆ. ಕಾಂಗ್ರೆಸ್ ಪಾಲಿಗೆ 2023 ಅದೃಷ್ಟದ ವರ್ಷ.‌ ಪ್ರಚಂಡ ವಿಧಾನಸಭೆ ಚುನಾವಣೆ ಗೆಲುವಿನೊಂದಿಗೆ ಹಳೆಯ ಕಾಂಗ್ರೆಸ್ ಪಕ್ಷ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. 2023ರಲ್ಲಿ ಮೈಕೊಡವಿ ನಿಂತ‌ ಕಾಂಗ್ರೆಸ್ ಪಕ್ಷವು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ಧೂಳಿಪಟ ಮಾಡಿತು. ಅಲ್ಲಿಗೆ 2023 ವರ್ಷ ರಾಜ್ಯ ಕಾಂಗ್ರೆಸ್ ಪಾಲಿಗೆ ವಿಜಯದ ವರ್ಷವಾಗಿದೆ.

ರಾಜ್ಯ ಕಾಂಗ್ರೆಸ್​​ಗೆ ದಿಗ್ವಿಜಯದ ವರ್ಷ: ರಾಜ್ಯ ಕಾಂಗ್ರೆಸ್ ಪಾಲಿಗೆ 2023 ದಿಗ್ವಿಜಯದ ವರ್ಷ. ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ 136 ಸ್ಥಾನ ಗೆದ್ದು, ಒಟ್ಟು ಶೇ.43.2 ಮತ ಪಾಲನ್ನು ಗಳಿಸಿ ಕರುನಾಡಲ್ಲಿ ದಿಗ್ವಿಜಯದ ಪತಾಕೆ ಹಾರಿಸುವಲ್ಲಿ ಸಫಲವಾಯಿತು. 1989ರ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ದಾಖಲಿಸಿದ ಅತಿ ದೊಡ್ಡ ಜಯಭೇರಿಯಾಗಿದೆ. ಆ ಮೂಲಕ ರಾಜ್ಯ ಕಾಂಗ್ರೆಸ್ ಕರ್ನಾಟಕ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿತು.

ಈ ಐತಿಹಾಸಿಕ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲೇ ಸಂಚಲನ ಮೂಡಿಸುವಂತೆ ಮಾಡಿತು. ಜೊತೆಗೆ ರಾಷ್ಟ್ರ ರಾಜಕಾರಣದಲ್ಲೂ ಒಂದು ಬಲವಾದ ಸಂದೇಶವನ್ನು ರವಾನಿಸುವಂತೆ ಮಾಡಿತು. ಕರ್ನಾಟಕ ಮಾದರಿ ಚುನಾವಣಾ ತಂತ್ರಗಾರಿಕೆ ಇದೀಗ ದೇಶದ ಇತರೆಡೆಯೂ ಪ್ರತಿಧ್ವನಿಸುತ್ತಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಪ್ರಚಂಡ ಗೆಲುವು ರಾಷ್ಟ್ರ ರಾಜಕಾರಣದಲ್ಲಿ ವಿಪಕ್ಷಗಳ ಕೂಟಕ್ಕೆ ಗೆಲುವಿನ ಆತ್ಮವಿಶ್ವಾಸವನ್ನೂ ಹೆಚ್ಚಿಸಲು ಕಾರಣವಾಗಿದೆ.

ನಾಯಕತ್ವ ಪೈಪೋಟಿ: ಅಭೂತಪೂರ್ವ ಜಯಭೇರಿಯೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ನಾಯಕತ್ವ ತಿಕ್ಕಾಟ ಸಂದಿಗ್ಧತೆಗೆ ಸಿಲುಕುವಂತೆ ಮಾಡಿತು. ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಪೈಪೋಟಿ ಪಕ್ಷಕ್ಕೆ ಇರುಸು ಮುರುಸು ಉಂಟು ಮಾಡಿತ್ತು.

ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿ ಗೊಂದಲ: ಇತ್ತ ಹೆಚ್ಚಿನ ಡಿಸಿಎಂ ಹುದ್ದೆ ಸೃಷ್ಟಿ ಹೇಳಿಕೆಗಳು ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲಕ್ಕೆ ಮತ್ತಷ್ಟು ಇಂಬು ನೀಡಿದವು.‌ ಡಿಸಿಎಂ ಸೃಷ್ಟಿಗೆ ಬಹಿರಂಗ ಹೇಳಿಕೆಗಳಿಂದ ಪಕ್ಷದಲ್ಲಿ ಗೊಂದಲ ಹೆಚ್ಚಾಗಿತ್ತು. ಕೊನೆಗೆ ಹೈಕಮಾಂಡ್ ಮಧ್ಯ ಪ್ರವೇಶಿಸಿ ಹೆಚ್ಚುವರಿ ಡಿಸಿಎಂ ಸೃಷ್ಟಿ ಹೇಳಿಕೆಗಳಿಗೆ ಬ್ರೇಕ್​ ಹಾಕಿತು.

ಹಿರಿಯ ಕೈ ಶಾಸಕರ ಅಸಮಾಧಾನದ ಹೊಗೆ: ಇನ್ನು ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮುಜುಗರ ತಂದೊಡ್ಡಿದ್ದು ಹಿರಿಯ ಕಾಂಗ್ರೆಸ್ ಶಾಸಕರ ಅತೃಪ್ತಿ. ಬಹಿರಂಗವಾಗಿ ಕೆಲ ಕೈ ಶಾಸಕರು ತಮ್ಮ ಅಸಮಾಧಾನ ಹೊರಹಾಕುವ ಮೂಲಕ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುವಂತೆ ಮಾಡಿತು. ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ, ಬಿ ಆರ್ ಪಾಟೀಲ್, ಶ್ಯಾಮನೂರು ಶಿವಶಂಕರಪ್ಪರ ಭಿನ್ನ ರಾಗ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿತು.‌

ಗ್ಯಾರಂಟಿ ಸಂಕಷ್ಟ, ಅನುದಾನ ಕೊರತೆ, ಸಚಿವರ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿ ಸರ್ಕಾರ ಹಾಗೂ ಪಕ್ಷಕ್ಕೆ ಇರುಸು ಮುರುಸು ಎದುರಾಯಿತು. ಇತ್ತ ಶ್ಯಾಮನೂರು ಶಿವಶಂಕರಪ್ಪ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆರೋಪ, ಲಿಂಗಾಯತ ಸಿಎಂ ಹೇಳಿಕೆ ಕಾಂಗ್ರೆಸ್​ನಲ್ಲಿ ಗೊಂದಲ ವಾತಾವರಣ ಸೃಷ್ಟಿ ಮಾಡಿತು. ಸದ್ಯ ರಾಯರೆಡ್ಡಿ, ಬಿ.ಆರ್.ಪಾಟೀಲ್​ಗೆ ಸಿಎಂ ಸಲಹೆಗಾರನ ಹುದ್ದೆ ನೀಡಿ ಅಸಮಾಧಾನವನ್ನು ತಣಿಸುವ ಕೆಲಸ ಮಾಡಲಾಗಿದೆ.

ನಿಗಮ ಮಂಡಳಿ ನೇಮಕಾತಿ ಕಗ್ಗಂಟು: ನಿಗಮ ಮಂಡಳಿಗಳ ನೇಮಕಾತಿಯಲ್ಲಿನ ವಿಳಂಬ ಕಾಂಗ್ರೆಸ್ ಪಕ್ಷದೊಳಗಿನ ಬೇಗುದಿಯನ್ನು ಇನ್ನಷ್ಟು ಹೆಚ್ಚಿಸಿತು. ನಿಗಮ ಮಂಡಳಿ ನೇಮಕಾತಿಯಲ್ಲಿ ಶಾಸಕರಿಗೆ ಅವಕಾಶ ಕೊಡಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯವಾದರೆ, ಡಿಕೆಶಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಉಭಯ ನಾಯಕರ ಈ ಬಿಗಿ ಪಟ್ಟಿನಿಂದ ನೇಮಕ ವಿಳಂಬದ ಗೊಂದಲ ಉಂಟಾಗಿದೆ.

ಲೋಕಸಭೆ ಚುನಾವಣೆ ಹಿತದೃಷ್ಟಿಯಿಂದ ಪಕ್ಷದ ಕಾರ್ಯಕರ್ತರು ನಿಗಮ ಮಂಡಳಿಯಲ್ಲಿ ನಮಗೆ ಸ್ಥಾನಮಾನ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇತ್ತ ಸಚಿವ ಸ್ಥಾನ ವಂಚಿತ ಶಾಸಕರು ನಿಗಮ ಮಂಡಳಿ ಸ್ಥಾನದ ಮೇಲೆ ಕಣ್ಣಿಟ್ಟಿರುವುದು ರಾಜ್ಯ ಕಾಂಗ್ರೆಸ್​​ಗೆ ನಿಗಮ ಮಂಡಳಿ ನೇಮಕಾತಿ ಕಗ್ಗಂಟಾಗಿ ಪರಿಣಮಿಸಿದೆ. ಹಲವು ಸಭೆಗಳು ನಡೆದರೂ ಇನ್ನೂ ನಿಗಮ ಮಂಡಳಿ ನೇಮಕಾತಿ ಪಟ್ಟಿ ಅಂತಿಮವಾಗದೇ ಇರುವುದು ಪಕ್ಷದ ಕಾರ್ಯಕರ್ತರು, ಶಾಸಕರ ಅಸಹನೆ, ಬೇಸರವನ್ನು ಇಮ್ಮಡಿಗೊಳಿಸಿದೆ.

ಕಾಂಗ್ರೆಸ್​​ಗೆ ಜಾತಿಗಣತಿಯ ಬಿಕ್ಕಟ್ಟು: ಜಾತಿ ಗಣತಿ ವರದಿಯ ಬಿಕ್ಕಟ್ಟು ದಿನೇ ದಿನೆ ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ರಾಹುಲ್ ಗಾಂಧಿ ಜಾತಿ ಗಣತಿ ಪರ ರಾಷ್ಟ್ರ ರಾಜಕಾರಣದಲ್ಲಿ ಬಲವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಕಾಂತರಾಜು ಸಿದ್ಧಪಡಿಸಿರುವ ಜಾತಿ ಗಣತಿ ವರದಿಯನ್ನು ಜಾರಿ ಮಾಡಲು ಮುಂದಾಗಿದ್ದಾರೆ. ಈ ಜಾತಿ ಗಣತಿ ವಿಚಾರ ಇದೀಗ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ.

ಕಾಂಗ್ರೆಸ್​​ನ ಅಹಿಂದ ನಾಯಕರು ಜಾತಿ ಗಣತಿ ವರದಿ ಜಾರಿಗೆ ಪಟ್ಟು ಹಿಡಿದರೆ, ಇತ್ತ ಲಿಂಗಾಯತ, ಒಕ್ಕಲಿಗ ಕೈ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಒಕ್ಕಲಿಗ ಮುಖಂಡರು ಡಿಸಿಎಂ ಡಿಕೆಶಿಯಾದಿಯಾಗಿ, ಇತ್ತ ಲಿಂಗಾಯತ ಕೈ ಮುಖಂಡರು ಶ್ಯಾಮನೂರು ಶಿವಶಂಕರಪ್ಪ ಸೇರಿದಂತೆ ಜಾತಿ ಗಣತಿ ವರದಿ ಜಾರಿಗೆ ವಿರೋಧಿಸಿ ಸಹಿ ಹಾಕಿದ್ದಾರೆ. ಈ ಜಾತಿ ಗಣತಿ ಕಗ್ಗಂಟು ಇದೀಗ ಕಾಂಗ್ರೆಸ್​​ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಲೋಕಸಭೆ ಚುನಾವಣೆ ತಯಾರಿ ಕಸರತ್ತು: ಇನ್ನು ರಾಜ್ಯ ಕಾಂಗ್ರೆಸ್ ಲೋಕಸಭೆ ಚುನಾವಣೆ ತಯಾರಿ ಕಸರತ್ತು ಆರಂಭಿಸಿದೆ. ಇತ್ತ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭಿಸಿದೆ. ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಅಭ್ಯರ್ಥಿಗಳ ಪಟ್ಟಿ ಮಾಡುವ ಹೊಣೆಗಾರಿಕೆ ನೀಡಲಾಗಿದೆ. ಆದರೆ, ಹಲವು ಸಚಿವರುಗಳು ಇನ್ನೂ ಅಭ್ಯರ್ಥಿಗಳ ಪಟ್ಟಿ ನೀಡಲು ವಿಫಲರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ರಾಜ್ಯದಲ್ಲಿ ರಾಜ್ಯ ಚುನಾವಣೆಯ ಫಲಿತಾಂಶ ಮರುಕಳಿಸುವಂತೆ ಮಾಡಲು ರಾಜ್ಯ ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ರಾಜ್ಯದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುವ ಗುರಿ ಹೊಂದಿದೆ‌. ಇತ್ತ ಲೋಕಸಭೆ ಚುನಾವಣೆಗೆ ನಾಲ್ಕೈದು ಸಚಿವರನ್ನು ಕಣಕ್ಕಿಳಿಸುವ ಚಿಂತನೆಯೂ ನಡೆದಿದೆ. ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಕೆ ಎನ್ ರಾಜಣ್ಣ ಸೇರಿ ಕೆಲವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಕೆಲ ಸಚಿವರು ಲೋಕಸಭೆ ಕಣಕ್ಕೆ ಇಳಿಯಲು ಹಿಂದೇಟು ಹಾಕುತ್ತಿದ್ದು, ತಮ್ಮ ಮಕ್ಕಳ ಪರ ಲಾಬಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ಇಸ್ರೋ ಮಹತ್ವದ ಉಪಗ್ರಹ ಉಡಾವಣೆ; ಏನಿದರ ವಿಶೇಷತೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.