ETV Bharat / state

ಯಡಿಯೂರಪ್ಪ ಲೆಕ್ಕ: 2.37 ಲಕ್ಷ ಕೋಟಿ ರೂ‌. ಗಾತ್ರದ ಬಜೆಟ್​​​ನಲ್ಲಿ ಕೇಂದ್ರದ ತೆರಿಗೆ ಪಾಲು ಕಡಿತ!

2020-21ರ ಬಜೆಟ್​​ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಇಂದು ಮಂಡಿಸಿದ್ದು, ಈ ಬಜೆಟ್​ನಲ್ಲಿ ಕೇಂದ್ರದ ತೆರಿಗೆ ಪಾಲು ಹಾಗೂ ಅನುದಾನದಲ್ಲಿ ಕಡಿತಗೊಂಡಿದೆ.

2020-21 Budget
ಯಡಿಯೂರಪ್ಪ ಲೆಕ್ಕ
author img

By

Published : Mar 5, 2020, 2:15 PM IST

ಬೆಂಗಳೂರು: ಸಿಎಂ ಯಡಿಯೂರಪ್ಪ ಇಂದು 2,37,893 ಕೋಟಿ ರೂ. ಮೊತ್ತದ 2020-21ರ ಆಯವ್ಯಯವನ್ನು ಮಂಡಿಸಿದ್ದಾರೆ.

2020-21ನೇ ಸಾಲಿನಲ್ಲಿ ಒಟ್ಟು 2,33,134 ಕೋಟಿ ರೂ. ಜಮೆ ಆಗುವ ಅಂದಾಜು ಮಾಡಲಾಗಿದ್ದು, ಈ ಪೈಕಿ 1,79,920 ಕೋಟಿ ರೂ. ರಾಜಸ್ವ ಜಮೆ ಹಾಗೂ 52,918 ಕೋಟಿ ರೂ. ಸಾಲ ಸೇರಿದಂತೆ 53,214 ಕೋಟಿ ರೂ. ಬಂಡವಾಳ ಜಮೆ ಒಳಗೊಂಡಿದೆ.

ರಾಜಸ್ವ ಸಂಗ್ರಹದಲ್ಲಿ ಈ ಬಾರಿ ಕೇಂದ್ರದ ತೆರಿಗೆ ಪಾಲು ಖೋತಾ ಆಗಿದೆ. 2020 - 21 ಸಾಲಿನಲ್ಲಿ ಕೇಂದ್ರದ ತೆರಿಗೆ ಪಾಲನ್ನು 28,591.23 ಕೋಟಿ ರೂ. ಅಂದಾಜಿಸಲಾಗಿದೆ. ಈ ಪಾಲು ಕಳೆದ ಸಾಲಿನಲ್ಲಿ 30,919 ಕೋಟಿ ರೂ‌‌. ಆಗಿತ್ತು.

ಇದೇ ವೇಳೆ, ಕೇಂದ್ರ ಸರ್ಕಾರದ ಅನುದಾನದ ಪಾಲನ್ನು ಕಡಿತಗೊಳಿಸಲಾಗಿದೆ. 2020-21ನೇ ಸಾಲಿನಲ್ಲಿ 15,454.46 ಕೋಟಿ ರೂ‌‌. ಕೇಂದ್ರದ ಅನುದಾನ ಪಾಲು ಎಂದು ಅಂದಾಜಿಸಲಾಗಿದೆ. ಕಳೆದ ಸಾಲಿನಲ್ಲಿ ಇದು 19,839.83 ಕೋಟಿ ರೂ‌.‌ ಇತ್ತು.

1,79,776 ಕೋಟಿ ರೂ. ರಾಜಸ್ವ ವೆಚ್ಚದ ಅಂದಾಜು ಮಾಡಲಾಗಿದ್ದು, ಇದು 46,512 ಕೋಟಿ ರೂ. ಬಂಡವಾಳ ವೆಚ್ಚ ಮತ್ತು ಸಾಲದ ಮರುಪಾವತಿ 11,605 ಕೋಟಿ ರೂ. ಹೊಂದಿದೆ.

ಈ ಬಾರಿ ವಿತ್ತೀಯ ಕೊರತೆ 46,072 ಕೋಟಿ ರೂ.‌ ಎಂದು ಅಂದಾಜಿಸಲಾಗಿದೆ. ಇದು ರಾಜ್ಯದ ಆಂತರಿಕ ಉತ್ಪನ್ನದ ಶೇ.2.55 ರಷ್ಟಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.