ETV Bharat / state

ಬೆಂಗಳೂರಿನಲ್ಲಿ ಇಂದು 1,995 ಮಂದಿಗೆ ಕೋವಿಡ್ ಪಾಸಿಟಿವ್ - ಕೊರೊನಾ ಪರೀಕ್ಷಾ ವರದಿ ವಿಳಂಬ

ಬೆಂಗಳೂರು ನಗರದಲ್ಲಿ ಇಂದು 1,995 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ನಿನ್ನೆಯವರೆಗೂ 16,259 ಸಕ್ರಿಯ ಪ್ರಕರಣಗಳಿವೆ. ಇನ್ನೊಂದೆಡೆ ನಿತ್ಯ ಟೆಸ್ಟ್ ಹೆಚ್ಚಳ ಆಗುತ್ತಿರುವುದರಿಂದ ಪರೀಕ್ಷಾ ವರದಿ ಬರುವಲ್ಲಿ ವಿಳಂಬವಾಗ್ತಿದೆ. ಕೋವಿಡ್ ಪ್ರಯೋಗಾಲಯಗಳ ಮೇಲೆ ಒತ್ತಡ ಹೆಚ್ಚಿದ ಪರಿಣಾಮ ಕೊರೊನಾ ಸೋಂಕು ಪರೀಕ್ಷೆ ನಡೆಸಿ ಸ್ಯಾಂಪಲ್ ಕಳುಹಿಸಿ ಐದು ದಿನವಾದರೂ ಪಾಲಿಕೆ ಶಾಲಾ ಮಕ್ಕಳ ರಿಸಲ್ಟ್ ಬಂದಿಲ್ಲ.

corona positive in Bangalore Today
ಬೆಂಗಳೂರಿನಲ್ಲಿ ಇಂದು 1,995 ಮಂದಿಗೆ ಕೋವಿಡ್ ಪಾಸಿಟಿವ್
author img

By

Published : Mar 30, 2021, 12:59 PM IST

Updated : Mar 30, 2021, 1:34 PM IST

ಬೆಂಗಳೂರು: ನಗರದಲ್ಲಿ ಇಂದು 1,995 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ನಿನ್ನೆಯವರೆಗೂ 16,259 ಸಕ್ರಿಯ ಪ್ರಕರಣಗಳಿವೆ. ಕಳೆದ ಮೂರು ದಿನಗಳಿಂದ ಕೊರೊನಾ ಪ್ರಕರಣಗಳು ಎರಡು ಸಾವಿರದ ಆಸುಪಾಸಿನಲ್ಲಿ ಹರಡುತ್ತಿರುವುದರಿಂದ ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಈಗಾಗಲೇ ವಲಯವಾರು ಹಿರಿಯ ಐಎಎಸ್ ಅಧಿಕಾರಿಗಳ ನೇಮಕವಾಗಿದೆ.

ಇನ್ನೊಂದೆಡೆ ನಿತ್ಯ ಟೆಸ್ಟ್ ಹೆಚ್ಚಳ ಆಗುತ್ತಿರುವುದರಿಂದ ಪರೀಕ್ಷಾ ವರದಿ ಬರುವಲ್ಲಿ ವಿಳಂಬವಾಗ್ತಿದೆ. ಕೋವಿಡ್ ಪ್ರಯೋಗಾಲಯಗಳ ಮೇಲೆ ಒತ್ತಡ ಹೆಚ್ಚಿದ ಪರಿಣಾಮ ಕೊರೊನಾ ಸೋಂಕು ಪರೀಕ್ಷೆ ನಡೆಸಿ ಸ್ಯಾಂಪಲ್ ಕಳುಹಿಸಿ ಐದು ದಿನವಾದರೂ ಪಾಲಿಕೆ ಶಾಲಾ ಮಕ್ಕಳ ರಿಸಲ್ಟ್ ಬಂದಿಲ್ಲ. ಹೀಗಾಗಿ ಆತಂಕದಿಂದಲೇ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾಗಿದೆ. ಮಾರ್ಚ್​ 1 ರಿಂದ ಇಲ್ಲಿಯವರೆಗೆ 1,500 ಸ್ಯಾಂಪಲ್​ಗಳ ಪೈಕಿ 30 ಮಕ್ಕಳಲ್ಲಿ ಕೋವಿಡ್ ದೃಢಪಟ್ಟಿದೆ.

ಇದನ್ನೂ ಓದಿ: ಮಂಗಳೂರು ಏರ್​ಪೋರ್ಟ್​ನಲ್ಲಿ ತಿಂಗಳ ಮಗುವಿಗೆ ಕೊರೊನಾ ಟೆಸ್ಟ್: ಡಿಎಚ್​​​ಒಗೆ ದೂರು ದಾಖಲು

ಸದ್ಯ ಪಾಲಿಕೆಯಲ್ಲಿ ಒಟ್ಟು 13,839 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 33 ಹೈಸ್ಕೂಲ್, 15 ಪ್ರೈಮರಿ ಸ್ಕೂಲ್, 90 ನರ್ಸರಿ, 14 ಪಿಯು ಕಾಲೇಜ್ ಹಾಗೂ 4 ಡಿಗ್ರಿ ಕಾಲೇಜುಗಳಿವೆ. ನಿಯಮದ ಪ್ರಕಾರ ಸ್ಯಾಂಪಲ್ ಕಳುಹಿಸಿದ 24 ಗಂಟೆಯ ಒಳಗೆ ವರದಿ ಕೈ ಸೇರಬೇಕು. ಆದರೆ, ಐದು ದಿನವಾದರೂ ಸಿಗುತ್ತಿಲ್ಲ. ಇದಕ್ಕೆ ಕಾರಣ ಟೆಸ್ಟ್ ಸಂಖ್ಯೆ ಹೆಚ್ಚಳವಾಗಿದ್ದು, ಮಾರ್ಚ್ 1 ರಲ್ಲಿ ನಿತ್ಯ 23 ಸಾವಿರ ಸ್ಯಾಂಪಲ್ ಟೆಸ್ಟ್ ಮಾಡಲಾಗುತ್ತಿತ್ತು , ಈಗ 50 ಸಾವಿರ ಸ್ಯಾಂಪಲ್ ಟೆಸ್ಟ್ ಮಾಡಲಾಗುತ್ತಿದೆ, ಇದು ಇರುವ ಲ್ಯಾಬ್ ಗಳ ಮೇಲೆ ಒತ್ತಡ ಹೆಚ್ಚಾಗಲು ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಶಾಲೆಯ 6-7 ನೇ ತರಗತಿಯಲ್ಲಿ 593 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, 369 ಮಕ್ಕಳನ್ನು ಟೆಸ್ಟ್ ಗೆ ಒಳಪಡಿಸಿದ್ದು, 346 ನೆಗೆಟಿವ್, 1 ಪಾಸಿಟಿವ್ ಹಾಗೂ 22 ವಿದ್ಯಾರ್ಥಿಗಳ ಟೆಸ್ಟ್ ಗೆ ಕಾಯಲಾಗಿದೆ. ಪ್ರೌಢಶಾಲೆಯಲ್ಲಿ 19, ಪಿಯುಸಿಯಲ್ಲಿ 12 ಸೇರಿ ಒಟ್ಟು 32 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಬಂದಿದ್ದು 2,286 ವಿದ್ಯಾರ್ಥಿಗಳಲ್ಲಿ ನೆಗೆಟಿವ್ ಬಂದಿದ್ದು, 5,458 ವಿದ್ಯಾರ್ಥಿಗಳ ಟೆಸ್ಟ್ ರಿಸಲ್ಟ್ ಬರುವುದು ಬಾಕಿ ಇದೆ. ಈ ವರೆಗೆ 12,268 ವಿದ್ಯಾರ್ಥಿಗಳ ಪೈಕಿ 8,327 ವಿದ್ಯಾರ್ಥಿಗಳನ್ನು ಟೆಸ್ಟ್ ಗೆ ಒಳಪಡಿಸಲಾಗಿದೆ.

Last Updated : Mar 30, 2021, 1:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.