ETV Bharat / state

19 ಜನ ಮಾದಕ‌ ದಂಧೆಕೋರರ ಬಂಧನ : 7 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ - ಈಟಿವಿ ಭಾರತ ಕನ್ನಡ

ಬೆಂಗಳೂರಿನ ವಿವಿದೆಡೆ ಮಾದಕವಸ್ತು ದಂಧೆಯಲ್ಲಿ ತೊಡಗಿದ್ದ ಸುಮಾರು 19 ಮಂದಿ ಮಾದಕ ದಂಧೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 7 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

19-drug-peddlers-arrested-in-bengaluru-7-crore-worth-drugs-seized
19 ಜನ ಮಾದಕ‌ ದಂಧೆಕೋರರ ಬಂಧನ : 7 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ
author img

By

Published : May 8, 2023, 4:19 PM IST

ಬೆಂಗಳೂರು : ಮಾದಕ ದಂಧೆಕೋರರ ವಿರುದ್ಧ ಕಳೆದ ಒಂದು ತಿಂಗಳಿನಿಂದ ವಿಶೇಷ ಕಾರ್ಯಾಚರಣೆ ಕೈಗೊಂಡು ನೈಜೀರಿಯಾದ ಇಬ್ಬರು, ಐವರಿಕೋಸ್ಟ್ ದೇಶದ ಒಬ್ಬರು, ಕೇರಳದ 12 ಜನ, ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದ ಓರ್ವ ಮತ್ತು ಬೆಂಗಳೂರಿನ ಇಬ್ಬರು ಡ್ರಗ್ ಪೆಡ್ಲರ್‌ಗಳ ಸಹಿತ ಒಟ್ಟು 19 ಜನ ಡ್ರಗ್ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 7,06,00,000 ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ 6 ಕೆ.ಜಿ ಹ್ಯಾಶಿಶ್ ಆಯಿಲ್, 51.89 ಕೆ.ಜಿ ಗಾಂಜಾ, 140 ಗ್ರಾಂ ಎಂಡಿಎಂಎ ಕ್ರಿಸ್ಟಲ್, 236 ಎಕ್ಸ್ಟಸಿ ಪಿಲ್ಸ್, 34 ಎಲ್ಎಸ್ಡಿ ಸ್ಟ್ರಿಪ್ಸ್, 23 ಗ್ರಾಂ ಕೊಕೈನ್, 17 ಮೊಬೈಲ್ ಫೋನ್‌ಗಳು, 1 ಕಾರು, 1 ಬೈಕ್​​​ ವಶಕ್ಕೆ ಪಡೆಯಲಾಗಿದೆ.

ಪ್ರಮುಖ ಪ್ರಕರಣಗಳು : ವಿಲ್ಸನ್‌ ಗಾರ್ಡನ್, ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಡ್ರಗ್ ಪೆಡ್ಲಿಂಗ್​ನಲ್ಲಿ ತೊಡಗಿದ್ದ ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ಇಬ್ಬರು ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ ಆರೋಪಿಯು ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಫೋರ್ಟರ್ ಮತ್ತು ಉಬರ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇತರ ಆರೋಪಿಗಳು ಆಂಧ್ರಪ್ರದೇಶದಿಂದ ತಂದುಕೊಡುವ ಹ್ಯಾಶಿಶ್ ಆಯಿಲ್ ಮತ್ತು ಗಾಂಜಾವನ್ನು ನಿರ್ದಿಷ್ಟ ವಿಳಾಸಕ್ಕೆ ತಲುಪಿಸಿದರೆ ಪ್ರತಿ ಡೆಲಿವರಿಗೆ 1 ಸಾವಿರ ರೂನಂತೆ ಕಮೀಷನ್​ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.

19-drug-peddlers-arrested-in-bengaluru-7-crore-worth-drugs-seized
ಮಾದಕ‌ ದಂಧೆಕೋರರ ಬಂಧನ

ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಪೆಡ್ಲಿಂಗ್​​ನಲ್ಲಿ ತೊಡಗಿದ್ದ ಕೇರಳದ ಅಕ್ಷಯ್ ಹಾಗೂ ಜಿಷ್ಣು ಎಂಬ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಯಾದ ಅಕ್ಷಯ್ ಮೂಲತಃ ಕೇರಳದವನಾಗಿದ್ದು, 6 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಹೆಚ್ಡಿಎಫ್ಸಿ ಲೈಫ್ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಆರೋಪಿಗಳು ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಆಂದ್ರಪ್ರದೇಶದ ವೈಜಾಕ್‌ ನಲ್ಲಿ ಅಕ್ರಮವಾಗಿ ಬೆಳೆಯಲಾಗುವ ಗಾಂಜಾವನ್ನು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ತಮ್ಮ ಕಾರಿನ ಡಿಕ್ಕಿಯಲ್ಲಿ ಇಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದ. ಬಳಿಕ ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದನೆಯಲ್ಲಿ ತೊಡಗುತ್ತಿದ್ದ ಎಂದು ಹೇಳಲಾಗಿದೆ.

ಅಶೋಕ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಕೇರಳ ಮೂಲದ 7 ಜನ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು, ಆರೋಪಿಗಳು ಬೆಂಗಳೂರಿನಲ್ಲಿ ನೆಲೆಸಿರುವ ಆಫ್ರಿಕನ್ ಪ್ರಜೆಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್‌ಗಳನ್ನು ಖರೀದಿಸಿ, ಡೆಂಜೋ ಮತ್ತು ಪೋರ್ಟರ್ ಅಪ್ಲಿಕೇಷನ್‌ ಮುಖಾಂತರ ಗಿರಾಕಿಗಳನ್ನು ಬುಕ್ ಮಾಡಿಕೊಂಡು ಜಿಲೆಟ್ ಮತ್ತು ಇತರ ವಸ್ತುಗಳ ಗಿಫ್ಟ್‌ಬಾಕ್ಸ್‌ನ ಒಳಗೆ ಡ್ರಗ್ಸ್‌ ಅನ್ನು ಪ್ಯಾಕ್ ಮಾಡಿ ತಮ್ಮ ಗಿರಾಕಿಗಳಿಗೆ ಕಳುಹಿಸುತ್ತಿದ್ದರು. ಡ್ರಗ್ಸ್‌ಗಳನ್ನು ಪಡೆದುಕೊಂಡ ಗಿರಾಕಿಗಳು ಅದೇ ಬಾಕ್ಸ್‌ಗಳಲ್ಲಿ ಹಣವನ್ನು ಇಟ್ಟು ಪ್ಯಾಕ್ ಮಾಡಿ ಆರೋಪಿಗಳ ವಿಳಾಸಕ್ಕೆ ವಾಪಸ್ ಕಳುಹಿಸುತ್ತಿದ್ದರು ಎಂದು‌ ತಿಳಿದು‌ ಬಂದಿದೆ.

ಇದನ್ನೂ ಓದಿ : ಕಂದಕಕ್ಕೆ ಉರುಳಿದ ಮದುವೆ ದಿಬ್ಬಣದ ಬಸ್​ : ಐವರು ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.