ಬೆಂಗಳೂರು: ರಾಜ್ಯದಲ್ಲಿಂದು 1,67,237 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರಲ್ಲಿ 1826 ಮಂದಿಗೆ ವೈರಸ್ ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,22,875 ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ ಶೇ1.09 ರಷ್ಟಿದೆ. ಇನ್ನು 1618 ಸೋಂಕಿತರು ಗುಣಮುಖರಾಗಿದ್ದು, ಈ ತನಕ 28,63,117 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಇತ್ತ ಸಕ್ರಿಯ ಪ್ರಕರಣಗಳು 22,851 ರಷ್ಟು ಇದೆ. 33 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 36,881ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ1.80 ರಷ್ಟಿದೆ. ವಿಮಾನ ನಿಲ್ದಾಣದಿಂದ 894 ಜನರು ಆಗಮಿಸಿದ್ದು, ಕೊರೊನಾ ತಪಾಸಣೆಗೆ ಒಳಪಟ್ಟಿದ್ದಾರೆ. ಯುಕೆಯಿಂದ 279 ಪ್ರಯಾಣಿಕರು ಆಗಮಿಸಿದ್ದಾರೆ.
ರೂಪಾಂತರಿ ಅಪ್ಡೇಟ್ಸ್
1) ಡೆಲ್ಟಾ ( Delta/B.617.2) -1089
2) ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 159
4) ಬೇಟಾ ವೈರಸ್ (BETA/B.1.351) -7
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4 ಮಂದಿ
6) ಈಟಾ (ETA/B.1.525) - 1
ರಾಜ್ಯದಲ್ಲಿ 4 ಕೋಟಿಗೂ ಅಧಿಕ ಜನರಿಗೆ ಕೋವಿಡ್ ತಪಾಸಣೆ
ಕರ್ನಾಟಕ 4 ಕೋಟಿ ಕೋವಿಡ್ ಪರೀಕ್ಷೆಗಳನ್ನು ಪೂರೈಸಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ. ರಾಜ್ಯದ ಒಟ್ಟು ಕೋವಿಡ್ ಪರೀಕ್ಷೆಗಳ ಪೈಕಿ ಶೇ. 80 ಕ್ಕಿಂತ ಹೆಚ್ಚು ಆರ್ಟಿಪಿಸಿಆರ್ ಟೆಸ್ಟ್ ಆಗಿದ್ದರೆ ಉಳಿದಂತೆ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗಿದೆ. ದೇಶದಲ್ಲೇ ಅತೀ ಹೆಚ್ಚು ಪರೀಕ್ಷೆ ನಡೆಸಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಲಭಿಸಿದೆ.
ಆರ್ಟಿಪಿಸಿಆರ್ ಟೆಸ್ಟ್ - 74,70,867
ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ - 3,28,01,285
ಒಟ್ಟಾರೆ - 4,02,72,152
ಓದಿ: ಕೋವಿಡ್ನಿಂದ ಮಕ್ಕಳ ಸಾಮಾನ್ಯ ಲಸಿಕೆಯಲ್ಲಿಯೂ ವಿಳಂಬದ ಎಫೆಕ್ಟ್ : ಹೆಚ್ಚಿದ ಚಿಣ್ಣರ ಸೋಂಕಿನ ಪ್ರಕರಣಗಳು