ಬೆಂಗಳೂರು: ನಗರದಲ್ಲಿ 17 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 581ಕ್ಕೆ ಏರಿಕೆಯಾಗಿದೆ. 299 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ರೆ, ಸಾವಿನ ಸಂಖ್ಯೆ 23ಕ್ಕೆ ತಲುಪಿದೆ ಎಂದು ಇಂದಿನ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ನಿಂದ ತಿಳಿದುಬಂದಿದೆ.
ನಗರದಲ್ಲಿ ಅತಿ ಹೆಚ್ಚು ಜನರಲ್ಲಿ ಸೋಂಕಿನ ಲಕ್ಷಣಗಳು ಕಂಡುಬರುತ್ತಿದೆ. ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದ್ದು, ನಗರದ ಹೊಸ ಹೊಸ ಏರಿಯಾಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
17 ಸೋಂಕಿತರ ಪೈಕಿ ಐದು ಜನ ಮಾತ್ರ ಮಹಾರಾಷ್ಟ್ರ ಹಾಗೂ ತಮಿಳುನಾಡು ಪ್ರಯಾಣಿಕರಾಗಿದ್ದಾರೆ. ಉಳಿದ ಹತ್ತು ಮಂದಿ ಶೀತ, ಜ್ವರ, ನೆಗಡಿ ಲಕ್ಷಣ ಹಾಗೂ ಇಬ್ಬರು ತೀವ್ರ ಉಸಿರಾಟದ ಸಮಸ್ಯೆಯಿಂದ ಕೋವಿಡ್-19 ಆಸ್ಪತ್ರೆಗೆ ದಾಖಲಾಗಿದ್ದರು.
ಏಳು ಮಂದಿ ಬಿಬಿಎಂಪಿ ವ್ಯಾಪ್ತಿಯವರಾಗಿದ್ದು, 9 ತಿಂಗಳ ಗರ್ಭಿಣಿ ಬಿಎಸ್ಕೆ ಎರಡನೇ ಹಂತದ ನಿವಾಸಿ, 22 ವರ್ಷದ ಜಯನಗರ ಠಾಣೆಯ ಆರೋಪಿ, ಮೈಸೂರು ರಸ್ತೆಯ ಮಸೀದಿ ಆವರಣದ 45 ವರ್ಷದ ವ್ಯಕ್ತಿ, ಬಿಟಿಎಂ ಎರಡನೇ ಹಂತದ 37 ವರ್ಷದ ವ್ಯಕ್ತಿ, ವಾಲ್ಮೀಕಿ ನಗರದಲ್ಲಿ 58 ವರ್ಷದ ವ್ಯಕ್ತಿ , ಪಾದರಾಯನಪುರದ 25 ವರ್ಷದ ಮಹಿಳೆಗೆ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. P-5327 ಅಂಜನಪ್ಪ, ಗಾರ್ಡನ್ ನಿವಾಸಿಯಿಂದ 55 ವರ್ಷದ ಮಹಿಳೆಗೆ ಸೋಂಕು ತಗುಲಿದೆ.