ETV Bharat / state

ಬೆಂಗಳೂರಿನಲ್ಲಿಂದು 17 ಕೊರೊನಾ ಪ್ರಕರಣ ಪತ್ತೆ: ಇಬ್ಬರು ಸಾವು - ಕೊರೊನಾ ಇತ್ತೀಚಿನ ಸುದ್ದಿ

ಬೆಂಗಳೂರಿನಲ್ಲಿಂದು 17 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ 17 ಕೊರೊನಾ ಪ್ರಕರಣಗಳು ಪತ್ತೆ
ಬೆಂಗಳೂರಿನಲ್ಲಿ 17 ಕೊರೊನಾ ಪ್ರಕರಣಗಳು ಪತ್ತೆ
author img

By

Published : Jun 18, 2020, 9:07 PM IST

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದು 17 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಎಲ್ಲ ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಸಿಕ್ಕಿವೆ.

ಕೊರೊನಾ ಸೋಂಕಿತರ ಅಂಕಿಅಂಶ
ಕೊರೊನಾ ಸೋಂಕಿತರ ಅಂಕಿಅಂಶ

ಇಂದು 65 ವರ್ಷದ ಮಹಿಳೆ ಹಾಗೂ 31 ವರ್ಷದ ಪುರುಷ ಕೊರೊನಾಗೆ ಬಲಿಯಾಗಿದ್ದಾರೆ. 31 ವರ್ಷದ ವ್ಯಕ್ತಿ ಆಸ್ಪತ್ರೆಗೆ ಜೂನ್​​ 13 ರಂದು ದಾಖಲಾಗಿದ್ದು, ಐದು ದಿನದ ಬಳಿಕ ಇಂದು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ ಒಟ್ಟು 844ಕ್ಕೆ ಏರಿಕೆಯಾಗಿದೆ. ಇಂದು ಹದಿನಾಲ್ಕು ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 384 ಮಂದಿ ಗುಣಮುಖರಾಗಿದ್ದಾರೆ. 408 ಸಕ್ರಿಯ ಪ್ರಕರಣಗಳಿದ್ದು, ಐಸಿಯುನಲ್ಲಿ 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ಸೋಂಕಿತರ ಅಂಕಿಅಂಶ
ಕೊರೊನಾ ಸೋಂಕಿತರ ಅಂಕಿಅಂಶ

ಕಂಟೇನ್​​ಮೆಂಟ್​​ ಪ್ರದೇಶಗಳ ಸಂಖ್ಯೆ 231ಕ್ಕೆ ಏರಿಕೆಯಾಗಿದ್ದು, 38 ವಾರ್ಡ್​ಗಳು ಕಂಟೇನ್​ಮೆಂಟ್​ ಝೋನ್​ನಿಂದ ತೆರವಾಗಿವೆ. ನಗರದಲ್ಲಿ 2,212 ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚಿದ್ದು, ಒಟ್ಟು 869 ಮಂದಿ ಅಂದರೆ ಶೇ. 39 ರಷ್ಟು ಮಂದಿ ಕ್ವಾರಂಟೈನ್​​ನಲ್ಲಿದ್ದಾರೆ. ಶೇ.61 ಅಂದರೆ 1343 ದ್ವಿತೀಯ ಸಂಪರ್ಕಿತರು ಕ್ವಾರಂಟೈನ್​​ನಲ್ಲಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.