ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದ ನಿತ್ಯ ಸಾರಿಗೆ ನಿಗಮಗಳಿಗೆ ಕೋಟಿ ಕೋಟಿ ರೂ. ನಷ್ಟ ಉಂಟಾಗಿದ್ದು, ಕಳೆದ ಎಂಟು ದಿನದಿಂದ 152 ಕೋಟಿಯಷ್ಟು ನಷ್ಟ ಅನುಭವಿಸಿದೆ. ಬಸ್ ಸಂಚಾರವಿಲ್ಲದೇ ನಾಲ್ಕು ನಿಗಮಗಳ ಆದಾಯಕ್ಕೆ ಪೆಟ್ಟು ಬಿದಿದ್ದೆ.
ಆದ ನಷ್ಟ:
1) ಕೆಎಸ್ಆರ್ಟಿಸಿ - 70 ಕೋಟಿ ರೂ.
2) ಬಿಎಂಟಿಸಿ - 20 ಕೋಟಿ ರೂ.
3) ಎನ್ಡಬ್ಲ್ಯೂಕೆಎಸ್ಆರ್ಟಿಸಿ- 30.5 ಕೋಟಿ ರೂ.
4) ಎನ್ಇಕೆಎಸ್ಆರ್ಟಿಸಿ - 31.5 ಕೋಟಿ ರೂ.
ಇದನ್ನೂ ಓದಿ: ನಿಮ್ಮ ಸರ್ಕಾರವಿದ್ದಾಗ ಪೊಲೀಸರೇ ದಂಗೆ ಎದ್ದಿದ್ದನ್ನು ಮರೆಯದಿರಿ: ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್
ಕೆಎಸ್ಆರ್ಟಿಸಿ ನಿತ್ಯ ಕಾರ್ಯಾಚರಣೆಯಿಂದ 7 ಕೋಟಿ ರೂ. ಆದಾಯ, ಬಿಎಂಟಿಸಿ 3 ಕೋಟಿ ರೂ., ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ನಿಗಮಗಳು ತಲಾ ನಿತ್ಯ 3.5 ಕೋಟಿ ರೂ. ಆದಾಯ ಪಡೆಯುತ್ತಿದ್ದವು. ಇದೀಗ ಕೆಲ ದಿನಗಳ ಮುಷ್ಕರದಿಂದ 152 ಕೋಟಿ ರೂ. ನಷ್ಟ ಅನುಭವಿಸಿದೆ.