ETV Bharat / state

ಐದು ದಿನಗಳ ಅತಿ ದೊಡ್ಡ ವೈಮಾನಿಕ ಪ್ರದರ್ಶನ 'ಏರೋ ಇಂಡಿಯಾ'ಗೆ ವಿದ್ಯುಕ್ತ ತೆರೆ - ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ

ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನಲ್ಲಿ ನಡೆಯುವ ಅತಿ ದೊಡ್ಡ ವೈಮಾನಿಕ ಪ್ರದರ್ಶನಕ್ಕೆ ಇಂದು ಅಧಿಕೃತವಾಗಿ ತೆರೆ ಬಿತ್ತು.

ವೈಮಾನಿಕ ಪ್ರದರ್ಶನ
ವೈಮಾನಿಕ ಪ್ರದರ್ಶನ
author img

By

Published : Feb 17, 2023, 5:54 PM IST

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿದ್ದ 14ನೇ ಆವೃತ್ತಿಯ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಮುಗಿದಿದೆ. 5 ದಿನಗಳ ಕಾಲ ನಡೆದ ಉಕ್ಕಿನ ಹಕ್ಕಿಗಳ ರೋಮಾಂಚಕ ಪ್ರದರ್ಶನದಲ್ಲಿ 90ಕ್ಕೂ ಹೆಚ್ಚು ದೇಶಗಳು ಪಾಲ್ಗೊಂಡಿದ್ದವು. ಕೊನೆಯ ದಿನವಾದ ಇಂದು ಸಮರ ವಿಮಾನಗಳ ಚಿತ್ತಾರ ಕಾಣಲು ಜನಸಾಗರವೇ ಹರಿದುಬಂದಿತ್ತು. ಫೆಬ್ರವರಿ 13ರಂದು ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಪ್ರದರ್ಶನಕ್ಕೆ ಚಾಲನೆ ನೀಡಿದ್ದರು.

ಕಳೆದ ಐದು ದಿನಗಳಿಂದಲೂ ವೈಮಾನಿಕ ಪ್ರದರ್ಶನ, ಒಡಂಬಡಿಕೆ ಸೇರಿ ರಕ್ಷಣಾ ಸಚಿವಾಲಯದ ಹಲವು ಮಹತ್ವದ ಕಾರ್ಯಚಟುವಟಿಕೆಗಳು ಜರುಗಿವೆ. ವಿದೇಶಿ ವಿಮಾನಗಳ ನಡುವೆ ಭಾರತದ ಸ್ವದೇಶಿ ವಿಮಾನಗಳ ಆರ್ಭಟಕ್ಕೆ ಲಕ್ಷಾಂತರ ಜನರು ಮಾರು ಹೋಗಿದ್ದಾರೆ. ಇಂದು ಸೂರ್ಯಕಿರಣ, ಸಾರಂಗ ತಂಡ ಹಾರಾಟ ನಡೆಸಿ ನೋಡುಗರನ್ನು ರಂಜಿಸಿದವು. ಸ್ವದೇಶಿ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳೂ ಸೇರಿದಂತೆ ರಕ್ಷಣಾ ವಲಯದ ಹಲವು ಉತ್ಪನ್ನಗಳು ಜಾಗತಿಕ ಮಟ್ಟದ ಗಮನಸೆಳೆದವು. 2 ವರ್ಷಕ್ಕೊಮ್ಮೆ ನಡೆಯುವ ಈ ವಿಮಾನ ಸಂತೆಯನ್ನು ನೋಡಲು ಪಾಸ್, ಟಿಕೆಟ್‌ ಪಡೆದು ಬೆಳಗ್ಗೆಯಿಂದ ಯಲಹಂಕ ವಾಯುನೆಲೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು.

ಗಮನ ಸೆಳೆದ ಸ್ವದೇಶಿ ವಿಮಾನಗಳು
ಗಮನ ಸೆಳೆದ ಸ್ವದೇಶಿ ವಿಮಾನಗಳು

ಇದನ್ನೂ ಓದಿ : ಏರೋ ಇಂಡಿಯಾದಲ್ಲಿ ಆ್ಯಂಟಿ ಡ್ರೋನ್ ಡಿವೈಸ್​ಗಳದ್ದೇ ಮಾತು, ಚರ್ಚೆ

700 ಕ್ಕೂ ಹೆಚ್ಚು ಮಳಿಗೆ: ಪ್ರದರ್ಶನ ಮಳಿಗೆಗಳಿಗೆ ವಿದ್ಯಾರ್ಥಿಗಳು, ವಿವಿಧ ದೇಶದ ಪ್ರತಿನಿಧಿಗಳು, ಸೇನಾ ಸಿಬ್ಬಂದಿಯ ಕುಟುಂಬಸ್ಥರು ಆಗಮಿಸಿದ್ದರು. ಪ್ರದರ್ಶನ ಮೇಳದಲ್ಲಿ 700ಕ್ಕೂ ಅಧಿಕ ಮಳಿಗೆಗಳಿದ್ದವು. ವೈಮಾನಿಕ ಕ್ಷೇತ್ರದ ಸಂಶೋಧನೆ, ಸಾಧನೆ, ಯುದ್ಧ ವಿಮಾನಗಳ ಹಾಗೂ ಯುದ್ಧ ಸಾಮಗ್ರಿಗಳನ್ನು ಇಲ್ಲಿ ಪ್ರದರ್ಶಿಸಲಾಗಿತ್ತು.

ಕಾಕ್ ಪಿಟ್ ಸೆಲ್ಫಿ: ಗ್ರಿಪೆನ್ ಇ ವಿಮಾನದ ಕಾಕ್​ಪಿಟ್‌ನಲ್ಲಿ ಕುಳಿತು ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಇದಕ್ಕಾಗಿ ಜನರು ಉದ್ದನೆಯ ಸಾಲುಗಟ್ಟಿ ನಿಂತು ವಿಮಾನದಲ್ಲಿ ಕುಳಿತು ಫೋಟೋ ತೆಗೆಸಿಕೊಂಡು ಖುಷಿಪಟ್ಟರು. ಇವುಗಳ ಜೊತೆಗೆ ಇಂಡಿಯನ್ ಪೆವಿಲಿಯನ್‌ನಲ್ಲಿದ್ದ ತೇಜಸ್, ಡಿಆರ್‌ಡಿಒ ಮಳಿಗೆಯಲ್ಲಿದ್ದ ಕಾಪ್ಟರ್‌ಗಳೆದುರು ನಿಂತು ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಮುಂದಿನ ವೈಮಾನಿಕ ಪ್ರದರ್ಶನ 2025ರಲ್ಲಿ ನಡೆಯಲಿದೆ.

ವೈಮಾನಿಕ ಪ್ರದರ್ಶನಕ್ಕೆ ನೆರೆದ ಜನಸ್ತೋಮ
ವೈಮಾನಿಕ ಪ್ರದರ್ಶನಕ್ಕೆ ನೆರೆದ ಜನಸ್ತೋಮ

ಇದನ್ನೂ ಓದಿ: ಏರೋ ಇಂಡಿಯಾ: ಜನಮನ ರಂಜಿಸಿದ ಸೂರ್ಯಕಿರಣ್ ಚಿತ್ತಾಕರ್ಷಕ ಪ್ರದರ್ಶನ

₹80 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ: ಆರಂಭದ ಮೂರು ದಿನಗಳಲ್ಲಿ ಸುಮಾರು 80 ಸಾವಿರ ಕೋಟಿ ರೂಪಾಯಿಗಳ ಒಪ್ಪಂದವಾಗಿದೆ. 226 ಸಹಭಾಗಿತ್ವ, 201 ಒಪ್ಪಂದಗಳಿಗೆ ಸಹಿ ಬಿದ್ದಿದೆ. ಯುದ್ಧ ವಿಮಾನಗಳ ಖರೀದಿ, ನಿರ್ಮಾಣದ ಕಂಪನಿಗಳ ನಡುವೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿಗಳು ಹೆಚ್ಚು ಸದ್ದು ಮಾಡಿದ್ದವು. ವಿದೇಶದ ರಕ್ಷಣಾ ಅಧಿಕಾರಿಗಳು, ನಗರದ ಸ್ಟಾರ್ಟ್​ಅಪ್​​​​ ಕಂಪನಿಗಳ ಜೊತೆ ಸಾವಿರಾರು ಕೋಟಿಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಲೋಹದ ಹಕ್ಕಿಗಳ ಹಾರಾಟ
ಲೋಹದ ಹಕ್ಕಿಗಳ ಹಾರಾಟ

ಇದನ್ನೂ ಓದಿ: ಏರೋ ಇಂಡಿಯಾ 2023: ಮಾರಿಷಸ್ ಪೊಲೀಸ್‌ ಪಡೆಗೆ ಹೆಚ್ಎಎಲ್‌ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್ ಮಾರ್ಕ್ -3 ಹಸ್ತಾಂತರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.