ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಇಂದು ಸಂಜೆಯೊಳಗೆ 149 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆ ಆಗಿದೆ.
ಇತ್ತ ನಿನ್ನೆಯಿಂದ ಮಹಾರಾಷ್ಟ್ರ, ಗುಜರಾತ್ ಹಾಗೂ ತಮಿಳುನಾಡಿನಿಂದ ಯಾವುದೇ ಪ್ರಯಾಣಿಕರನ್ನು ಕರ್ನಾಟಕಕ್ಕೆ ಬಿಟ್ಟಿಲ್ಲ. ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ಈ ರಾಜ್ಯಗಳಿಂದ ಬಂದ ಪ್ರಯಾಣಿಕರಲ್ಲೇ ಕಂಡು ಬಂದಿದೆ. ಹಾಗಾಗಿ ಸದ್ಯಕ್ಕೆ ಈ ಮೂರು ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ ಎನ್ನಲಾಗುತ್ತಿದೆ.
ಇಲ್ಲಿಯವರೆಗೆ 543 ಮಂದಿ ಗುಣಮುಖರಾಗಿದ್ದು, 811 ಮಂದಿ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 40+1( ನಾನ್ ಕೋವಿಡ್) ಬಲಿಯಾಗಿದ್ದಾರೆ.
ಎಲ್ಲೆಲ್ಲಿ ಎಷ್ಟು ಕೇಸ್?
- ಮಂಡ್ಯ-71
- ದಾವಣಗೆರೆ- 22
- ಕಲಬುರಗಿ- 13
- ಶಿವಮೊಗ್ಗ -10
- ಬೆಂಗಳೂರು -6
- ಚಿಕ್ಕಮಗಳೂರು -5
- ಉಡುಪಿ - 4
- ಉ.ಕ - 4
- ವಿಜಯಪುರ -1
- ಗದಗ -1
- ಬೀದರ್ - 1
- ರಾಯಚೂರು - 1
- ಯಾದಗಿರಿ - 1
ಇಂದು ಇಷ್ಟು ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಈವರೆಗೆ ಒಟ್ಟು 1 ಲಕ್ಷದ 51 ಸಾವಿರದ 663 ಜನಕ್ಕೆ ಕೋವಿಡ್-19 ಟೆಸ್ಟ್ ಮಾಡಲಾಗಿದೆ. ಅದರಲ್ಲಿ 1395 ಮಂದಿಗೆ ಪಾಸಿಟಿವ್ ಪತ್ತೆಯಾಗಿದೆ. 23,187 ಮಂದಿ ಕ್ವಾರಂಟೈನ್ನಲ್ಲಿದ್ದು, ಅದರಲ್ಲಿ 9,996 ಪ್ರಥಮ ಸಂಪರ್ಕಿತರು, 13,191 ದ್ವಿತೀಯ ಸಂಪರ್ಕದಲ್ಲಿ ಇರುವವರು ಕ್ವಾರಂಟೈನ್ನಲ್ಲಿದ್ದಾರೆ.