ETV Bharat / state

ಕಾವೇರಿಯಿಂದ ನಿತ್ಯ ಬೆಂಗಳೂರಿಗೆ 1,450 ದಶಲಕ್ಷ ಲೀಟರ್ ನೀರು, ಕಿಲೋ ಲೀಟರ್​​​ಗೆ ₹41 ವೆಚ್ಚ: ಸಿಎಂ - ಜಲಮಾಪಕಗಳ ಲೋಪದೋಷ

ವಿಧಾನ ಪರಿಷತ್ ಕಲಾಪದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಬಗ್ಗೆ ಪ್ರಸ್ತಾಪವಾಯಿತು.

CM Basavaraj Bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Feb 16, 2023, 8:30 PM IST

Updated : Feb 16, 2023, 9:10 PM IST

ವಿಧಾನ ಪರಿಷತ್‌ನಲ್ಲಿ ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಜನರ ದಾಹ ತಣಿಸಲು ಕಾವೇರಿ ಕೊಳ್ಳದಿಂದ ಪ್ರತಿ ದಿನ 1,450 ದಶಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿ ಕಿಲೋ ಲೀಟರ್ ನೀರಿಗೆ 41 ರೂ. ವ್ಯಯ ಮಾಡಲಾಗುತ್ತಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಶೇ 29 ರಷ್ಟು ನೀರು ಪೋಲಾಗುತ್ತಿದ್ದು ಅದನ್ನು ತಡೆಯಲು ವಿಚಕ್ಷಣ ದಳ ರಚಿಸಲು ಸರ್ಕಾರ ಮುಂದಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಧಾನಪರಿಷತ್​ಗೆ ಉತ್ತರ ನೀಡಿದರು.

ಕಾವೇರಿ ಮೊದಲ ಹಂತದಲ್ಲಿ 135 ದಶಲಕ್ಷ ಲೀಟರ್, ಎರಡನೇ ಹಂತದಲ್ಲಿ 140 ದಶಲಕ್ಷ ಲೀಟರ್, ಮೂರನೇ ಹಂತದಲ್ಲಿ 325 ದಶಲಕ್ಷ ಲೀಟರ್, ನಾಲ್ಕನೇ ಹಂತ ಒಂದನೇ ಘಟ್ಟದಲ್ಲಿ 300 ದಶಲಕ್ಷ ಲೀಟರ್, ನಾಲ್ಕನೇ ಹಂತ ಎರಡನೇ ಘಟ್ಟದಲ್ಲಿ 550 ದಶಲಕ್ಷ ಲೀಟರ್ ಸೇರಿ ಒಟ್ಟು 1450 ದಶಲಕ್ಷ ಲೀಟರ್ ನೀರನ್ನು ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ ಎಂದು ಸಿಎಂ ತಿಳಿಸಿದರು. ಕಾವೇರಿ ನೀರಿನ ಸಂಗ್ರಹಣೆಯ ಸರಬರಾಜಿಗೂ ಮುನ್ನ ಜಲ ಶುದ್ದೀಕರಣ ಘಟಕದಲ್ಲಿ ರಾಸಾಯನಿಕ ಬಳಕೆ, ವಿದ್ಯುತ್ ಶುಲ್ಕ, ಬಂಡವಾಳ ವೆಚ್ಚ ಹಾಗೂ ನೌಕರರ ವೇತನ ಇತರ ವೆಚ್ಚ ಸೇರಿ ಒಂದು ಕಿಲೋ ಲೀಟರ್ ಗೆ ತಗುಲುವ ವೆಚ್ಚ 41 ರೂ. ಆಗುತ್ತಿದೆ. ಬೆಂಗಳೂರು ಜಲಮಂಡಳಿ ವತಿಯಿಂದ 10.64 ಲಕ್ಷ ಸಂಪರ್ಕಗಳಿಂದ ಪ್ರತಿದಿನ ಸುಮಾರು 3.83 ಕೋಟಿ ರೂ ಬೆಂಗಳೂರು ಜಲಮಂಡಳಿಗೆ ಸಂದಾಯವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶೇ 29ರಷ್ಟು ಪೋಲು: ನಗರಕ್ಕೆ ಸರಬರಾಜು ಆಗುವ ನೀರಿನಲ್ಲಿ ಶೇ 29 ರಷ್ಟು ಪೋಲಾಗುತ್ತಿದೆ. ಸಾರ್ವಜನಿಕ ಕೊಳಾಯಿಗಳಿಂದ ಶೇ. 4, ಗೃಹ ಸಂಪರ್ಕ ಕೊಳವೆಗಳಲ್ಲಿ ಸೋರಿಕೆ ಶೇ.5, ಜಲಮಾಪಕಗಳ ಲೋಪದೋಷ ಶೇ.5 ಕೊಳೆಗೇರಿ ಪ್ರದೇಶ ಶೇ.4, ಹಳೆಯದಾದ ಜಲಾಶಯದಿಂದ ಆಗುವ ಸೋರಿಕೆಯಿಂದ ಶೇ.5, ನೀರಿನ ಕೊಳವೆ ಶುಚಿಗೊಳಿಸಲು ಶೇ.6 ಸೇರಿ ಒಟ್ಟು ಶೇ.29 ರಷ್ಟು ನೀರು ಪೋಲಾಗುತ್ತದೆ. ಇದನ್ನು ಸರಿಪಡಿಸಲು ಕೊಳವೆ ಮಾರ್ಗಗಳ ಬದಲಾವಣೆ ಮತ್ತು ಜಲಸಂಗ್ರಹಗಳ ಪುನಶ್ಚೇತನಕ್ಕೆ 8 ಸಾವಿರ ಕೋಟಿ ಅಗತ್ಯವಿದ್ದು ಜಲಮಂಡಳಿಗೆ ಇಷ್ಟು ಹಣ ಭರಿಸಲು ಭಾರವಾಗುವ ಕಾರಣ ಹಂತ ಹಂತವಾಗಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ವಿಚಕ್ಷಣ ದಳ ರಚನೆ: ಜಲಮಂಡಳಿ ವ್ಯಾಪ್ತಿ ಕುಡಿಯುವ ನೀರು ಪೂರೈಕೆ ಮಾರ್ಗದಲ್ಲಿನ ನೀರು ಸೋರಿಕೆ, ಅನಧಿಕೃತ ಸಂಪರ್ಕವನ್ನು ಶೂನ್ಯಕ್ಕೆ ತರುವ ಗುರಿ ಹಾಕಿಕೊಳ್ಳಲಾಗಿದೆ. ಇದರಲ್ಲಿ ಅಧಿಕಾರಿಗಳು ಭಾಗಿಯಾಗಿರುವುದನ್ನು ಪತ್ತೆ ಹೆಚ್ಚಲು ವಿಚಕ್ಷಣ ದಳ ರಚಿಸುವ ಚಿಂತನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ‌ ಹೇಳಿದರು.

ಇದನ್ನೂಓದಿ:ಸಿದ್ದರಾಮಯ್ಯ ಕುರಿತು ವಿವಾದಿತ ಹೇಳಿಕೆ: ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಸಚಿವ ಅಶ್ವತ್ಥನಾರಾಯಣ

Last Updated : Feb 16, 2023, 9:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.