ETV Bharat / state

ಬೆಂಗಳೂರು: ಸೋಂಕು ಹೆಚ್ಚಿರುವ ವಾರ್ಡ್‌ಗಳ ಸೀಲ್​ಡೌನ್ ವಿಸ್ತರಿಸಲು ಚಿಂತನೆ!

author img

By

Published : Jul 10, 2020, 11:46 PM IST

ನಗರದ ಕೆಲ ವಲಯದ ವಾರ್ಡ್​​​ಗಳಲ್ಲಿ ಅತಿ ಹೆಚ್ಚು ಕೊರೊನಾ ಪಾಸಿಟಿವ್ ರೋಗಿಗಳಿದ್ದು, ಆ ವಾರ್ಡ್ ಗಳ ಸೀಲ್​​ಡೌನ್ ಪ್ರದೇಶದ ವ್ಯಾಪ್ತಿಯನ್ನು ವಿಸ್ತರಿಸಲು ಚಿಂತಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.

Bangalore corona news
Bangalore corona news

ಬೆಂಗಳೂರು: ರಾಜಧಾನಿಯಲ್ಲಿಂದು 1,447 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 15,329ಕ್ಕೆ ಏರಿಕೆಯಾಗಿದೆ. ಇಂದು 29 ಮಂದಿ ಮೃತಪಟ್ಟಿರುವುದು ವರದಿಯಾಗಿದೆ.

ಈವರೆಗೆ 206 ಮಂದಿಯನ್ನು ಕೋವಿಡ್ ಬಲಿ ತೆಗೆದುಕೊಂಡಿದೆ. ಇಂದು 601 ಮಂದಿ ಗುಣಮುಖರಾಗಿದ್ದು, ಈವರೆಗೆ 3,435 ಮಂದಿ ಬಿಡುಗಡೆಯಾಗಿದ್ದಾರೆ. 11,687 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿರುವವರ ಸಂಖ್ಯೆ 301ಕ್ಕೆ ಏರಿಕೆಯಾಗಿದೆ.

Bangalore corona news
ಬೆಂಗಳೂರು ಕೊರೊನಾ ಪ್ರಕರಣ
ಸೋಂಕಿತರು ಹೆಚ್ಚಿರುವ ವಾರ್ಡ್​​ಗಳ ಸೀಲ್​ಡೌನ್ ವಿಸ್ತರಣೆ: ನಗರದ ಕೆಲ ವಲಯದ ವಾರ್ಡ್​​ಗಳಲ್ಲಿ ಅತಿ ಹೆಚ್ಚು ಕೊರೊನಾ ಪಾಸಿಟಿವ್ ರೋಗಿಗಳಿದ್ದು, ಆ ವಾರ್ಡ್ ಗಳ ಸೀಲ್​ಡೌನ್ ಪ್ರದೇಶದ ವ್ಯಾಪ್ತಿಯನ್ನು ವಿಸ್ತರಿಸಲು ಚಿಂತಿಸಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ. ಮುಂದಿನ ಎರಡು ದಿನದಲ್ಲಿ ಇದು ಜಾರಿಯಾಗುವ ಸಾಧ್ಯತೆ ಇದೆ. ಸದ್ಯ ನೂರು ಮೀಟರ್ ಮಾತ್ರ ಸೀಲ್​ಡೌನ್ ಇದ್ದು, ಇದರ ವ್ಯಾಪ್ತಿ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಅತಿಹೆಚ್ಚು ಕೊರೊನಾ ಪ್ರಕರಣ ಇರುವ ವಾರ್ಡ್​​
*ಬಿಟಿಎಂ ಲೇಔಟ್
*ಜಕ್ಕಸಂದ್ರ
*ವಿಜಯನಗರ
*ಬಸವನಗುಡಿ
*ಶಾಂತಲಾನಗರ
*ಚಾಮರಾಜಪೇಟೆ
*ಸಂಪಿಗೆ ನಗರ
*ಜಯನಗರ
*ಚಿಕ್ಕಪೇಟೆ
*ಪಟ್ಟಾಭಿರಾಮನಗರ
*ಹೊಂಬೇಗೌಡ ನಗರ
*ಸದ್ದುಗುಂಟೆ ಪಾಳ್ಯ
*ಆರ್ ಆರ್ ನಗರ
*ವಿವಿಪುರಂ
*ಕೆ.ಆರ್ ಮಾರುಕಟ್ಟೆ

ಈ ವಾರ್ಡ್​​ಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಂಪೂರ್ಣ ಇಳಿಮುುಖ ಆಗುವವರೆಗೂ ಸೀಲ್​ಡೌನ್ ಮುಂದುವರಿಯುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.