ETV Bharat / state

ಬೆಂಗಳೂರಿನಲ್ಲಿ ಇಂದು ರಾತ್ರಿ 9ರಿಂದ 12ರವರೆಗೆ 144 ಸೆಕ್ಷನ್ ಜಾರಿ..! - Police commissioner Bhaskar rao

ಕೊರೊನಾ ಮಹಾಮಾರಿ ಹೆಚ್ಚಾದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಬೆಂಗಳೂರಿನ ಜನರು ಇದಕ್ಕೆ ಸ್ಪಂದಿಸಿದ್ದಾರೆ. ಇದೀಗ ಇಂದು ರಾತ್ರಿ 9ರಿಂದ 12ರವರೆಗೆ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ

144 section
ಬೆಂಗಳೂರಿನಲ್ಲಿ ಇಂದು ರಾತ್ರಿ 9ರಿಂದ 12ರವರೆಗೆ 144 ಸೆಕ್ಷನ್ ಜಾರಿ
author img

By

Published : Mar 22, 2020, 3:51 PM IST

ಬೆಂಗಳೂರು: ಜನತಾ ಕರ್ಫ್ಯೂ ಜಾರಿ ಬೆನ್ನಲೇ ನಗರ ಪೊಲೀಸರು ಬೆಂಗಳೂರಿನಲ್ಲಿ ಇಂದು ರಾತ್ರಿ 9ಗಂಟೆಯಿಂದ 12ಗಂಟೆವರೆಗೂ ನಿಷೇಧಾಜ್ಞೆ ಆದೇಶಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ಕೊರೊನಾ ಮಹಾಮಾರಿ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದೆಲ್ಲೆಡೆ ಜನತಾ ಕರ್ಫ್ಯೂ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.‌ ಇದಕ್ಕೆ ಸ್ಪಂದಿಸಿದ ಬೆಂಗಳೂರು ನಾಗರಿಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಮ‌ನೆಯಲ್ಲೇ ಉಳಿದುಕೊಂಡಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಇಂದು ರಾತ್ರಿ 9 ರಿಂದ 12 ಗಂಟೆವರೆಗೆ ನಗರದಲ್ಲಿ 144 ಸೆಕ್ಷನ್ ಜಾರಿಗೆ ನಗರ ಪೊಲೀಸರು ಆಯುಕ್ತ ಭಾಸ್ಕರ್ ರಾವ್ ಸಿದ್ಧತೆ ನಡೆಸುತ್ತಿದ್ದು, ಇನ್ನು‌ ಕೆಲವೇ ಕ್ಷಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಧಿಕೃತವಾಗಿ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.