ಬೆಂಗಳೂರು : ಕೋವಿಡ್ ಪ್ರಕರಣಗಳು ಸಂಪೂರ್ಣವಾಗಿ ಇಳಿಮುಖವಾಗದ ಕಾರಣ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಮಾಡಲಾಗಿದೆ. ತಪ್ಪಿದ್ದಲ್ಲಿ ಮಾರ್ಷಲ್ಸ್ ಹದ್ದಿನ ಕಣ್ಣಿಟ್ಟಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆ, ಮಾರುಕಟ್ಟೆ, ಶಾಪಿಂಗ್ ಪ್ರದೇಶಗಳಲ್ಲಿ ಹೆಚ್ಚು ಜನ ಸೇರಿದ್ದರು. ಅಲ್ಲದೇ ಮಾಸ್ಕ್ ಧರಿಸುವುದನ್ನು ಮರೆತು ಓಡಾಡಿದ್ದರು. ಈ ಹಿನ್ನೆಲೆ ನಿನ್ನೆ ಒಂದೇ ದಿನ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ 868 ಪ್ರಕರಣಗಳಿಂದ, 2,17,000 ರೂ. ದಂಡ ವಿಧಿಸಲಾಗಿದೆ.
ಈ ಪೈಕಿ ವಾರ್ಡ್ ಮಾರ್ಷಲ್ಸ್ 1,09,500 ರೂ. ಹಾಗೂ ಸ್ಪೆಷಲ್ ಟೀಂ ಮಾರ್ಷಲ್ಸ್ 1,07,500 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇನ್ನು, ಮೇ ತಿಂಗಳಿಂದ ಆಗಸ್ಟ್ 20ರವರೆಗೆ 5,37,908 ಪ್ರಕರಣಗಳಿಂದ 12,87,79,825 ರೂ. ಫೈನ್ ಸಂಗ್ರಹಿಸಲಾಗಿದೆ. ಮಾಸ್ಕ್ ಉಲ್ಲಂಘಿಸಿದವರಲ್ಲಿ ಪೂರ್ವ, ಪಶ್ಚಿಮ, ದಕ್ಷಿಣ ವಲಯದವರೇ ಹೆಚ್ಚಿದ್ದು, ಪೂರ್ವ ವಲಯದಲ್ಲಿ 180, ಪಶ್ಚಿಮ 256, ದಕ್ಷಿಣ ವಲಯ 165 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ.
ಇದನ್ನೂ ಓದಿ : ಮಾಸ್ಕ್ ದಂಡ; 20 ಲಕ್ಷ ಜನರಿಂದ 40 ಕೋಟಿ ವಸೂಲಿ.. ಎಲ್ಲಿ ಗೊತ್ತಾ?