ETV Bharat / state

ರಾಜ್ಯದ 1,121 ಹಳ್ಳಿಗಳಿಗೆ ಮೊಬೈಲ್ ನೆಟ್​ವರ್ಕೇ ಇಲ್ಲ..! - ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕ ಹಿಂದೆ

ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂದುವರಿದ ಕರ್ನಾಟಕ - 5ಜಿ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ ಕರುನಾಡು - ಈವರೆಗೂ 1,121 ಗ್ರಾಮಗಳಿಗಿಲ್ಲ ಮೊಬೈಲ್ ಸಂಪರ್ಕ- ದೂರಸಂಪರ್ಕ ಇಲಾಖೆ ಮಾಹಿತಿ.

mobile network
5ಜಿ ಮೊಬೈಲ್ ತಂತ್ರಜ್ಞಾನ
author img

By

Published : Feb 13, 2023, 8:19 PM IST

ಬೆಂಗಳೂರು: ಕರ್ನಾಟಕವು ದೇಶದ ಅತಿ ವೇಗದಲ್ಲಿ ಪ್ರಗತಿ ಕಾಣುತ್ತಿರುವ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ. ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಗಳಿಸಿರುವ ರಾಜಧಾನಿ ಹೊಂದಿರುವ ಕರ್ನಾಟಕ, ತಂತ್ರಜ್ಞಾನ ಅಳವಡಿಕೆಯಲ್ಲಿ ದೇಶದಲ್ಲೇ ಮುಂಚೂಣಿ ರಾಜ್ಯ. ತಂತ್ರಜ್ಞಾನ ಅಳವಡಿಕೆಯಲ್ಲಿ ಮಾದರಿಯಾಗಿರುವ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಈಗಲೂ ಮೊಬೈಲ್ ನೆಟ್​ವರ್ಕೇ ಇಲ್ಲದಂತಹ ಪರಿಸ್ಥಿತಿಯಿದೆ.

ಹೌದು, ಕರ್ನಾಟಕ ಹೊಸತನ, ಆಧುನಿಕ ತಂತ್ರಜ್ಞಾನವನ್ನು ಬಿಗಿದಪ್ಪುವ ಪ್ರಗತಿಶೀಲ ರಾಜ್ಯವಾಗಿದೆ. ದೇಶದ ಸಿಲಿಕಾನ್‌ ಸಿಟಿ, ಸ್ಟಾರ್ಟ್ ಅಪ್​ ಸಿಟಿ, ವೈಬ್ರೇಂಟ್ ಸಿಟಿ, ವಿಜ್ಞಾನ ಸಿಟಿ ಎಂಬ ಹಲವು ಹೆಗ್ಗಳಿಕೆಗೆ ಪಾತ್ರವಾಗಿರುವ ರಾಜ್ಯ. ಎಲ್ಲ ಕ್ಷೇತ್ರಗಳಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಂಪದ್ಬರಿತ ರಾಜ್ಯ ಕರ್ನಾಟಕ.

5ಜಿ ಮೊಬೈಲ್ ತಂತ್ರಜ್ಞಾನ: ಡಿಜಿಟಲೀಕರಣ, ಕಂಪ್ಯೂಟರೀಕರಣ, ಮೊಬೈಲ್ ಬಳಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಅಗ್ರಗಣ್ಯ. ದೇಶ ಇತ್ತೀಚೆಗಷ್ಟೇ 5ಜಿ ಮೊಬೈಲ್ ತಂತ್ರಜ್ಞಾನ ಆಲಂಗಿಸಿಕೊಂಡಿದೆ. 5ಜಿ ಯುಗದಲ್ಲೂ ರಾಜ್ಯದ ಹಲವು ಹಳ್ಳಿಗಳಲ್ಲಿ ಈಗಲೂ ಮೊಬೈಲ್ ಸಂಪರ್ಕವೇ ಇಲ್ಲ. ಕರುನಾಡಿನ ಸಾವಿರಾರು ಹಳ್ಳಿಗಳು ಇನ್ನೂ ಮೊಬೈಲ್ ನೆಟ್​ವರ್ಕ್ ಕೂಡ ಇಲ್ಲದ ಸ್ಥಿತಿಯಲ್ಲಿರುವುದು ನಂಬಲು ಅಸಾಧ್ಯವಾದ ಕಹಿ ಸತ್ಯ.

1,121 ಗ್ರಾಮಗಳಿಗಿಲ್ಲ ಮೊಬೈಲ್ ಸಂಪರ್ಕ: ತಂತ್ರಜ್ಞಾನ ಅಳವಡಿಕೆಯಲ್ಲಿ ಮುಚೂಣಿಯಲ್ಲಿರುವ ಕರ್ನಾಟಕದ ಹಲವು ಗ್ರಾಮಗಳು ಇನ್ನೂ ಮೊಬೈಲ್ ಸಂಪರ್ಕವನ್ನೇ ಕಂಡಿಲ್ಲ. ದೂರಸಂಪರ್ಕ ಇಲಾಖೆ ನೀಡಿದ ಲಿಖಿತ ಉತ್ತರದ ಪ್ರಕಾರ ಕರ್ನಾಟಕದ 1,121 ಹಳ್ಳಿಗಳಲ್ಲಿ ಮೊಬೈಲ್ ನೆಟ್​ವರ್ಕ್ ಇಲ್ಲ.‌

ಕರ್ನಾಟಕದಲ್ಲಿನ ಒಟ್ಟು 29,818 ಹಳ್ಳಿಗಳ ಪೈಕಿ 1,121 ಹಳ್ಳಿಗಳಿಗೆ ಇನ್ನೂ ಮೊಬೈಲ್ ನೆಟ್​ವರ್ಕ್ ಮರೀಚಿಕೆಯಾಗಿಯೇ ಉಳಿದಿದೆ. ತಂತ್ರಜ್ಞಾನ, ಐಟಿ ಕ್ಷೇತ್ರದಲ್ಲಿ ಅಗ್ರಗಣ್ಯವಾಗಿರುವ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಮೊಬೈಲ್ ನೆಟ್​ವರ್ಕ್ ಇಲ್ಲದೇ ಇರುವುದು ಈ 5G ಯುಗದಲ್ಲಿ ದುರಂತವೇ ಸರಿ.

ಮೊಬೈಲ್ ನೆಟ್​ವರ್ಕ್ ವಿಸ್ತರಿಸಲು ಕಾರ್ಯ: ''ಗುಡ್ಡಗಾಡು ಪ್ರದೇಶ, ಕಠಿಣ ಭೌಗೋಳಿಕ ಪ್ರದೇಶ, ಅರಣ್ಯದ ಮಧ್ಯದ ಹಳ್ಳಿಗಳು, ವಾಣಿಜ್ಯ ಕಾರಣದ ಹಿನ್ನೆಲೆಯಲ್ಲಿ ಹಿಂದುಳಿರುವ ಕಾರಣ, ಈ ಪ್ರದೇಶಗಳಲ್ಲಿ ಮೊಬೈಲ್​ ನೆಟ್​ವರ್ಕೇ ಇಲ್ಲದಂತಾಗಿದೆ. ಒಟ್ಟು 1,121 ಹಳ್ಳಿಗಳಲ್ಲಿ ಮೊಬೈಲ್ ಸಂಪರ್ಕ ತಲುಪಿಲ್ಲ'' ಎಂದು ಇ - ಆಡಳಿತ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದ ಅನುದಾನದ ಮೂಲಕ ಈ ಗ್ರಾಮಗಳಲ್ಲಿ ಮೊಬೈಲ್ ನೆಟ್​ವರ್ಕ್ ವಿಸ್ತರಿಸಲು ಕಾರ್ಯ ಕೈಗೊಳ್ಳಲಾಗಿದೆ'' ಎಂದು ಅವರು ತಿಳಿಸಿದ್ದಾರೆ.

ಯುನಿವರ್ಸಲ್ ಸರ್ವಿಸ್ ಒಬ್ಲಿಗೇಷಮ್ ಫಂಡ್: ಸುಮಾರು 500ಕ್ಕೂ ಹೆಚ್ಚು ಹಳ್ಳಿಗಳು ಪಶ್ಚಿಮ‌ ಘಟ್ಟಗಳ ತಪ್ಪಲಲ್ಲಿ ಬರುತ್ತವೆ. ಇಲ್ಲಿ ಮೊಬೈಲ್ ಸಂಪರ್ಕ ಕಲ್ಪಿಸಲು ಕಷ್ಟ ಸಾಧ್ಯವಾಗುತ್ತಿದೆ. ಮತ್ತೆ ಇನ್ನಷ್ಟು ಹಳ್ಳಿಗಳಲ್ಲಿ 1,000ಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿದೆ. ಇಂಥ ಹಳ್ಳಿಗಳಲ್ಲಿ ವಾಣಿಜ್ಯ ಚಟುವಟಿಕೆ ಕಡಿಮೆ ಇರುವುದರಿಂದ ದೂರಸಂಪರ್ಕ ಕಂಪನಿಗಳಿಗೆ ಲಾಭದಾಯಕವಾಗದ ಕಾರಣ, ಟವರ್​ ಅಳವಡಿಕೆ ಮಾಡಿಲ್ಲ'' ಎಂದ ಅಧಿಕಾರಿಗಳು, ಯುನಿವರ್ಸಲ್ ಸರ್ವಿಸ್ ಒಬ್ಲಿಗೇಷಮ್ ಫಂಡ್ (USOF) ಅಡಿಯಲ್ಲಿ ಹಲವು ಯೋಜನೆಗಳ ಮೂಲಕ ಇಂಥ ಹಳ್ಳಿಗಳಲ್ಲಿ ಮೊಬೈಲ್ ಸಂಪರ್ಕ‌ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ'' ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ರಾಜ್ಯಗಳಲ್ಲಿ ಕರ್ನಾಟಕ ಹಿಂದೆ: ಹಳ್ಳಿಗಳಿಗೆ ಮೊಬೈಲ್ ಸಂಪರ್ಕ ಕಲ್ಪಿಸದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ 2,971 ಗ್ರಾಮಗಳಿಗೆ ಮೊಬೈಲ್ ಸಂಪರ್ಕ ಕಲ್ಪಿಸದೇ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿರುವುದು ಕರ್ನಾಟಕ ರಾಜ್ಯ. ಒಟ್ಟು 1,121 ಗ್ರಾಮಗಳಲ್ಲಿ ಮೊಬೈಲ್ ನೆಟ್​ವರ್ಕ್ ಇಲ್ಲ.

ಕೇರಳದಲ್ಲಿ ಕೇವಲ 53 ಹಳ್ಳಿಗಳಲ್ಲಿ ಹಾಗೂ ತಮಿಳುನಾಡಿನಲ್ಲಿ 384 ಹಳ್ಳಿಗಳಲ್ಲಿ ಮೊಬೈಲ್ ಮತ್ತು ತೆಲಂಗಾಣ ರಾಜ್ಯದ 203 ಹಳ್ಳಿಗಳಲ್ಲಿ ಮೊಬೈಲ್ ನೆಟ್​ವರ್ಕ್ ಇಲ್ಲ. ದೇಶಾದ್ಯಂತ ಸುಮಾರು 38,901 ಗ್ರಾಮಗಳಲ್ಲಿ ಮೊಬೈಲ್ ನೆಟ್​ವರ್ಕೇ ಇಲ್ಲ ಎಂದು ದೂರಸಂಪರ್ಕ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: 102 ವರ್ಷಗಳ ಹಳೆಯ ಭದ್ರಾವತಿ ಕಬ್ಬಿಣ, ಉಕ್ಕಿನ ಕಾರ್ಖಾನೆಗೆ ಬೀಗ: ಸಂಸತ್​​ನಲ್ಲಿ ಕೇಂದ್ರ ಸರ್ಕಾರದ ಹೇಳಿಕೆ.. ಕಾಂಗ್ರೆಸ್​ ಟೀಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.