ETV Bharat / state

ಬೆಂಗಳೂರು: ಮನೆಗೆ ನುಗ್ಗಿ ಡಕಾಯಿತಿ, ಉಪ ಅರಣ್ಯಾಧಿಕಾರಿ ಸೇರಿ 11 ಮಂದಿ ಬಂಧನ - etv bharat karnataka

ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ದರೋಡೆಕೋರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

11-robbers-arrested-for-a-house-robbery-in-bengaluru

author img

By ETV Bharat Karnataka Team

Published : Dec 22, 2023, 6:56 PM IST

ಬೆಂಗಳೂರು: ವ್ಯವಸ್ಥಿತ ಸಂಚು ರೂಪಿಸಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೈ, ಕಾಲು ಕಟ್ಟಿ‌ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದ ಉಪ ಅರಣ್ಯಾಧಿಕಾರಿ, ಇಬ್ಬರು ರೌಡಿಶೀಟರ್ ಸೇರಿ ಒಟ್ಟು 11 ಮಂದಿ ಡಕಾಯಿತರನ್ನು ಪೀಣ್ಯ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಹೆಚ್ಎಂಟಿ ಲೇಔಟ್‌ನಲ್ಲಿ ವಾಸವಾಗಿರುವ ರೂಪೇಶ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಇನ್ಸ್​ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ತನಿಖೆ ‌ನಡೆಸಿ ಕೃತ್ಯದಲ್ಲಿ ಶಾಮೀಲಾಗಿದ್ದ ತುಮಕೂರಿನ‌ ಸುರೇಶ್, ದಾವಣಗೆರೆ ಜಿಲ್ಲೆ ಚೆನ್ನಗಿರಿ ಅರಣ್ಯ ವಲಯದ ಉಪ ಅರಣ್ಯಾಧಿಕಾರಿ ಸುರೇಂದ್ರ, ಚಿತ್ರದುರ್ಗದ ಹಣ್ಣಿನ ವ್ಯಾಪಾರಿ ಶ್ರೀಧರ್, ನೆಲಮಂಗಲದಲ್ಲಿ ಫೈನಾನ್ಸಿಯರ್ ವಸಂತ್ ಕುಮಾರ್, ಅನಿಲ್ ಕುಮಾರ್, ಚಾಲಕ ನಾಗರಾಜ್, ಕೆ.ಜಿ.ಹಳ್ಳಿಯ ರೌಡಿಶೀಟರ್​ಗಳಾದ ನವಾಜ್, ಶೇಕ್ ಶಹಬಾಜ್ ಸಹಚರರಾದ ರಾಹಿಲ್‌ಪಾಷಾ, ಉಸ್ಮಾನ್ ಖಾನ್ ಎಂಬುವರನ್ನು ಅರೆಸ್ಟ್‌ ಮಾಡಿದ್ದಾರೆ.

ಬಂಧಿತರಿಂದ 45.52 ಲಕ್ಷ ಬೆಲೆಬಾಳುವ 273 ಗ್ರಾಂ ಚಿನ್ನ, 370 ಗ್ರಾಂ ಬೆಳ್ಳಿ, 23 ಲಕ್ಷದ‌ ನಗದು, 13 ಮೊಬೈಲ್​ಗಳು ಹಾಗೂ ಮಾರಕಾಸ್ತ್ರಗಳನ್ನ ವಶಕ್ಕೆ‌ ಪಡೆದುಕೊಳ್ಳಲಾಗಿದೆ. ಹೆಚ್ಎಂಟಿ ಲೇಔಟ್ ನಲ್ಲಿ ವಾಸವಾಗಿರುವ ರೂಪೇಶ್ ತಂದೆ ಮನೋಹರ್ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಇವರ ಬಳಿ ಲಾರಿ ಚಾಲಕನಾಗಿ ಆರೋಪಿ ನಾಗರಾಜ್ ಕೆಲಸ ಮಾಡುತ್ತಿದ್ದ. ಈತ ಕಳೆದ ವರ್ಷ ಡಿಸೆಂಬರ್​ನಲ್ಲಿ ಕೆಲಸ ತೊರೆದಿದ್ದ. ಮಾಲೀಕನ ಹಣದ ವ್ಯವಹಾರ ಬಗ್ಗೆ ಹತ್ತಿರದಿಂದ‌ ನಾಗರಾಜ್ ಗಮನಿಸಿದ್ದ‌.‌ ಇದೇ ವಿಷಯವನ್ನು ಸ್ನೇಹಿತ ಅನಿಲ್ ಕುಮಾರ್ ಬಳಿ ತಮ್ಮ ಮಾಲೀಕನ ಬಳಿ ಸಾಕಷ್ಟು ಹಣವಿದ್ದು, ನೋಟು ಎಣಿಸುವ ಯಂತ್ರಗಳಿವೆ ಎಂದಿದ್ದ.

11-robbers-arrested-for-a-house-robbery-in-bengaluru
ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದ ವಸ್ತುಗಳು

ಹಣದ ಮುಗ್ಗಟ್ಟು ಎದುರಿಸಿದ್ದ ಅನಿಲ್, ಗೆಳೆಯನಾಗಿದ್ದ ಫೈನಾನ್ಸಿಯರ್ ಅಗಿ ನಷ್ಟಕ್ಕೆ‌ ಒಳಗಾಗಿದ್ದ ವಸಂತ್ ಬಳಿ ಈ ಬಗ್ಗೆ ಮಾತನಾಡಿದ್ದ. ಇದೇ ವಿಚಾರವನ್ನು ಶ್ರೀಧರ್ ಹಾಗೂ ಸುರೇಶ್ ಮುಖಾಂತರ ಉಪ ಅರಣ್ಯಾಧಿಕಾರಿ ಸುರೇಂದ್ರ ಬಳಿ ಮಾತನಾಡಿ ಡಕಾಯಿತಿ ಮಾಡಲು ಒಪ್ಪಿಸಿದ್ದರು. ಜೂಜಾಟದ ಚಟ ಹೊಂದಿದ್ದ ಸುರೇಂದ್ರನಿಗೆ ಹಣದ ಅವಶ್ಯಕತೆ ಇದ್ದಿದ್ದರಿಂದ ಕೃತ್ಯವೆಸಗಲು ಒಪ್ಪಿಕೊಂಡಿದ್ದ. ಸುರೇಶ್​ಗೆ ಪರಿಚಯಸ್ಥರಾಗಿದ್ದ ಜೊತೆಗೆ ಕೆ.ಜಿ.ಹಳ್ಳಿಯಿಂದ ಐವರನ್ನು ಕರೆಯಿಸಿಕೊಂಡು ಡಕಾಯಿತಿಗೆ ಸಂಚು ರೂಪಿಸಿದ್ದರು.

ಪೊಲೀಸರೆಂದು ಹೇಳಿ ಮನೆಗೆ ನುಗ್ಗಿ ಡಕಾಯಿತಿ: ಉಪ ಅರಣ್ಯಾಧಿಕಾರಿಯಾಗಿದ್ದ ಸುರೇಂದ್ರನ ಸಮವಸ್ತ್ರ ಖಾಕಿಯಾಗಿದ್ದರಿಂದ ಪೊಲೀಸ್ ಸೋಗಿನಲ್ಲಿ ಹೋಗುವಂತೆ ಸಹಚರರು ಸೂಚಿಸಿದ್ದರು. ಇದರಂತೆ ಡಿ.4ರಂದು ಸಂಜೆ ಮನೆ ಬಳಿ ಡಕಾಯಿತರ ತಂಡವೇ ದಾಂಗುಡಿ ಇಟ್ಟಿತ್ತು. ಮನೆಯಲ್ಲಿ‌ ರೂಪೇಶ್ ಹಾಗೂ ಆತನ ತಾಯಿ ಇಬ್ಬರೆ ಇದ್ದರು.‌ ಪೊಲೀಸ್ ಸೋಗಿನಲ್ಲಿ ಸುರೇಂದ್ರ ಬಾಗಿಲು ತಟ್ಟಿದ್ದಾರೆ. ಮನೆಯೊಳಗಿನ‌‌ ಕಿಟಕಿಯಿಂದ ಇಣುಕಿ ನೋಡಿದ ರೂಪೇಶ್, ಪೊಲೀಸರೆಂದು ಭಾವಿಸಿ ಬಾಗಿಲು ತೆರೆದಿದ್ದರು‌. ಪೊಲೀಸ್ ಎಂದು ಪರಿಚಯಿಸಿಕೊಂಡು ಮನೆಯೊಳಗೆ ಸುರೇಂದ್ರ ಎಂಟ್ರಿಯಾಗಿದ್ದ. ಕ್ಷಣಮಾತ್ರದಲ್ಲಿ‌ ಇನ್ನಿತರ ಆರೋಪಿಗಳು ಮನೆಗೆ ನುಗ್ಗಿದ್ದಾರೆ. ಲಾಂಗು- ಮಚ್ಚಿನಿಂದ ರೂಪೇಶ್ ಮೇಲೆ ಹಲ್ಲೆ‌ ಮಾಡಿದ್ದಾರೆ. ಬಳಿಕ ಆಕೆಯ ತಾಯಿಗೂ ಬೆದರಿಸಿದ್ದಾರೆ.‌ ಇಬ್ಬರನ್ನ‌ು ರೂಮ್​ಗೆ ಕರೆದುಕೊಂಡು ಟೇಪ್‌ನಿಂದ ಸುತ್ತಿ ಕೂಡಿಹಾಕಿ ನಗದು, ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.

ಪೊಲೀಸರು ಮನೆಯ ಸುತ್ತಮುತ್ತ ಅಳವಡಿಸಲಾಗಿದ್ದ ಸಿಸಿಟಿವಿ ವಶಕ್ಕೆ‌ ಪಡೆದು ಪರಿಶೀಲಿಸಿದಾಗ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿರುವುದು ಗೊತ್ತಾಗಿದೆ‌.‌ ಅಲ್ಲದೆ ಕುಣಿಗಲ್ ಟೋಲ್ ದಾಟಿರುವುದು ತಿಳಿದುಬಂದಿತ್ತು. ಟವರ್ ಡಂಪ್ ಮೂಲಕ ಸುರೇಂದ್ರನ ನಂಬರ್ ಮಾತ್ರ ಆ್ಯಕ್ಟೀವ್ ಆಗಿತ್ತು. ಅಲ್ಲದೆ‌‌ ಸಿಡಿಆರ್ (ಒಳಬರುವ ಕರೆ) ತೆಗದಾಗ ಶ್ರೀಧರ್, ವಸಂತ್ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಘಟನೆ ಬಳಿಕ ಚಿತ್ರದುರ್ಗ, ಕೊಡೈಕೆನಾಲ್​ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಡೇಟಿಂಗ್ ಆ್ಯಪ್‌ನಲ್ಲಿ ನಗ್ನವಾಗುವಂತೆ ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.