ETV Bharat / state

ಬಿಬಿಎಂಪಿಗೆ 1,05,000 ವ್ಯಾಕ್ಸಿನ್ ಶಿಫ್ಟ್.. ಲಸಿಕೆ ಹಂಚಿಕೆ ಬಗ್ಗೆ ಆಯುಕ್ತರಿಂದ ಮಾಹಿತಿ - ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ

ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ಹಂಚಲಾಗುತ್ತದೆ. ಬಿಬಿಎಂಪಿ ವ್ಯಾಪ್ತಿಗೆ ಕೋವಿಶೀಲ್ಡ್ ವ್ಯಾಕ್ಸಿನ್ 1,05,000 ಬಂದಿವೆ. ಜ.16ರಂದು 6 ಲಸಿಕಾ ಕೇಂದ್ರಗಳನ್ನು ಉದ್ಘಾಟಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

BBMP
ಲಸಿಕೆ
author img

By

Published : Jan 13, 2021, 6:59 PM IST

ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯ ದಾಸ್ತಾನು ಕೇಂದ್ರದಿಂದ ಬಿಬಿಎಂಪಿ ದಾಸಪ್ಪ ಆಸ್ಪತ್ರೆಯಲ್ಲಿರುವ ದಾಸ್ತಾನು ಕೇಂದ್ರಕ್ಕೆ 1,05,000 ಕೋವಿಶೀಲ್ಡ್ ವ್ಯಾಕ್ಸಿನ್​ಗಳು ಬಂದು ತಲುಪಿವೆ. ವ್ಯಾಕ್ಸಿನ್ ಸ್ವೀಕರಿಸಿ, ದಾಸ್ತಾನು ಕೇಂದ್ರದ ಐಎಲ್​​ಆರ್ ಬಾಕ್ಸ್​​ಗಳಿಗೆ ವರ್ಗಾವಣೆ ಮಾಡಿ, ಸೂಕ್ತ ಉಷ್ಣಾಂಶದಲ್ಲಿಡಲಾಗಿದೆ. ಲಸಿಕಾ ಕೇಂದ್ರಕ್ಕೆ ಮಾರ್ಷಲ್ಸ್ ಹಾಗೂ ಪೊಲೀಸರ ಭದ್ರತೆ ಒದಗಿಸಲಾಗಿದೆ.

ಬಿಬಿಎಂಪಿಗೆ 1,05,000 ವ್ಯಾಕ್ಸಿನ್ ಸ್ಥಳಾಂತರ ಕುರಿತು ಆಯುಕ್ತರಿಂದ ಮಾಹಿತಿ
ಜನವರಿ 16 ರಂದು 6 ಕಡೆ ವ್ಯಾಕ್ಸಿನ್ ಉದ್ಘಾಟನೆ: ವ್ಯಾಕ್ಸಿನ್ ದಾಸ್ತಾನಿನ ಬಳಿಕ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಲಸಿಕೆ ಹಂಚಲಾಗುತ್ತದೆ. ಬಿಬಿಎಂಪಿ ವ್ಯಾಪ್ತಿಗೆ ಕೋವಿಶೀಲ್ಡ್ 1,05,000 ವ್ಯಾಕ್ಸಿನ್​ಗಳು ಬಂದಿವೆ. ಜ.16ರಂದು 6 ಲಸಿಕಾ ಕೇಂದ್ರಗಳನ್ನು ಉದ್ಘಾಟಿಸಲಾಗುವುದು ಎಂದರು.
ವಿಕ್ಟೋರಿಯಾ, ಕೆ.ಸಿ. ಜನರಲ್, ಜಯನಗರ ಆಸ್ಪತ್ರೆ, ಸಿ ವಿ ರಾಮನ್, ಸೇಂಟ್ ಜಾನ್ಸ್, ಮಲ್ಲಸಂದ್ರ ಪ್ರೈಮರಿ ಹೆಲ್ತ್ ಸೆಂಟರ್ ನಲ್ಲಿ ಮೊದಲ ದಿನ ತಲಾ ನೂರು ಮಂದಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್​ ನೀಡಲಾಗುತ್ತದೆ. ಯಾವ ಖಾಸಗಿ ಸಂಸ್ಥೆಯಿಂದ ಹೆಲ್ತ್ ವರ್ಕಸ್೯ ಇರ್ತಾರೋ, ಆ ಮುಖ್ಯಸ್ಥರಿಂದ ಮಾಹಿತಿ ಪಡೆದು ಲಸಿಕೆ ಕೊಡಲಾಗುತ್ತದೆ. ಲಸಿಕೆ ಹಂಚಿಕೆಗೆ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ರೆಫ್ರಿಜರೇಟರ್​​ನಲ್ಲಿ ಲಸಿಕೆ ಸಂಗ್ರಹಿಸಲಾಗಿದೆ. ಜನವರಿ 16 ರಂದು 760 ಕೇಂದ್ರಗಳಿಗೆ ಲಸಿಕೆಯನ್ನ ಕಳಿಸಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ದಾಸಪ್ಪ ಆಸ್ಪತ್ರೆಯಿಂದ ಜನವರಿ 15 ರಂದು 144 ಪ್ರೈಮರಿ ಹೆಲ್ತ್ ಸೆಂಟರ್ ಗಳಿಗೆ ಲಸಿಕೆ ರವಾನೆ ಆಗಲಿವೆ. ಬಳಿಕ ಲಸಿಕೆ ಹಂಚುವ 760 ಕೇಂದ್ರಗಳಿಗೆ ಬೆಳಗ್ಗೆ 8:30 ರೊಳಗೆ ವ್ಯಾಕ್ಸಿನ್ ಕಳಿಸುವ ಕೆಲಸ ಆಗುತ್ತದೆ. ಪ್ರತಿಯೊಂದು ಲಸಿಕೆಯ ಸೆಂಟರ್​​ಗೆ ಪ್ರತ್ಯೇಕ ಆ್ಯಂಬುಲೆನ್ಸ್ ಇರುತ್ತದೆ. ವ್ಯಾಕ್ಸಿನ್​ನಿಂದ ತೊಂದರೆ ಆದ್ರೆ ಕೂಡಲೇ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಎರಡನೇ ಹಂತದ ಪಟ್ಟಿ ತಯಾರಿ:
ವ್ಯಾಕ್ಸಿನ್ ಪಡೆಯಲು ನೊಂದಣಿ ಮಾಡಿಕೊಂಡವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಲಸಿಕೆಯಿಂದ ಭಯ ಪಡಬೇಕಿಲ್ಲ. ಮುಂಚೂಣಿ ವಲಯದ ಕಾರ್ಮಿಕ ಪಟ್ಟಿ ತಯಾರಿಸಿದ್ದೇವೆ. ಎರಡನೇ ಹಂತದಲ್ಲಿ ಪಾಲಿಕೆ, ಪೊಲೀಸ್, ಕಂದಾಯ ಇಲಾಖೆಯ ಅಧಿಕಾರಿಗಳು ಬರ್ತಾರೆ. ಇವರ ಲಿಸ್ಟ್ ನ್ನು ಇಂದಿನಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಲಸಿಕಾ ಕೇಂದ್ರಗಳ ಹೆಚ್ಚಳಕ್ಕೆ ಕಾಲೇಜುಗಳ ಬಳಕೆ:
ಲಸಿಕಾ ಕೇಂದ್ರಗಳನ್ನು ಹೆಚ್ಚು ಮಾಡೋದಿದ್ರೆ, ಕಾಲೇಜುಗಳನ್ನ ಬಳಸಿಕೊಳ್ಳಲು ಅನುಮತಿ ಸಿಕ್ಕಿದೆ. ಲಸಿಕೆ ನೀಡುವ ಪ್ರಕ್ರಿಯೆ ಮೂರು ದಿನಗಳಲ್ಲಿ ಮುಗಿಯಬಹುದು. ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲಿದ್ದೇವೆ ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.