ಬೆಂಗಳೂರು: ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರ ಸುಮಾರು 10000 ಮಾಸ್ಕ್ ವಿತರಣಾ ಅಭಿಯಾನ ನಡೆಸಿದರು. ಇಂದು ಬಸವನಗುಡಿಯ ಡಿ.ವಿ.ಜಿ ರಸ್ತೆ, ಗಾಂಧಿ ಬಜಾರ್ ಸುತ್ತ ಮುತ್ತ ಮಾಸ್ಕ್ ವಿತರಿಸಿ ಜನರಲ್ಲಿ ಕೊರೊನಾ ಅರಿವು ಮೂಡಿಸಿದರು.
ಓದಿ: ಮದುವೆಗೆ ತೆರಳುವವರಿಗೆ ಅನುಮತಿ ಪತ್ರ, ಐಡಿ ಕಾರ್ಡ್, ಆಮಂತ್ರಣ ಪತ್ರಿಕೆ ಕಡ್ಡಾಯ
ಬೀದಿ ಬದಿ ವ್ಯಾಪಾರಿಗಳಲ್ಲಿ ಕೋವಿಡ್ ಎರಡನೆಯ ಅಲೆಯ ಬಗ್ಗೆ ಜಾಗೃತಿ ಮೂಡಿಸಿ ಮಾಸ್ಕ್ ವಿತರಿಸಿದರು. ಮಸಾಲಾ ದೋಸೆಗೆ ಖ್ಯಾತಿಯಾದ ವಿದ್ಯಾರ್ಥಿ ಭವನಕ್ಕೆ ತೆರಳಿ ಅಲ್ಲಿನ ಸಿಬ್ಬಂದಿಗೆ, ಸಾರ್ವಜನಿಕರಿಗೂ ಕೂಡ ಉಚಿತವಾಗಿ ಮಾಸ್ಕ್ ನೀಡಿದರು.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಭಾಸ್ಕರ್ ರಾವ್, ಲಾಲ್‌ಬಾಗ್ ಬಳಿ ಆಟೋ ರಿಕ್ಷಾ ಚಾಲಕನೊಬ್ಬ ತರಕಾರಿ ಮಾರಾಟಗಾರರಿಗೆ 5 ಮಾಸ್ಕ್ ದಾನ ಮಾಡುವುದನ್ನು ನೋಡಿದೆ. ನಾನು ಈ ಬಗ್ಗೆ ವಿಚಾರಿಸಿದಾಗ ಈ ಬೀದಿ ಬದಿ ಮಾರಾಟಗಾರರು ಮಾಸ್ಕ್ ಖರೀದಿಸುವುದಿಲ್ಲ ಎಂದು ಹೇಳಿದ.
ಆತ ಕಲಿಸಿದ ಪಾಠದಿಂದ ಅರ್ಹರಿಗೆ ಸುಮಾರು 10,000 ಮಾಸ್ಕ್ ಉಚಿತವಾಗಿ ವಿತರಿಸುತ್ತಿದ್ದೇನೆ. ನಾನು ಸಾಮಾನ್ಯ ಆಟೋ ಚಾಲಕನಿಂದ ಪಾಠ ಕಲಿತೆ ಮತ್ತು ಸಾರ್ವಜನಿಕರು ಸಾಧ್ಯವಾದರೆ ಈ ಅಭಿಯಾನ ಪ್ರಾರಂಭಿಸಿ ಎಂದು ಭಾಸ್ಕರ್ ರಾವ್ ವಿನಂತಿಸಿದರು.