ETV Bharat / state

ನೂರಾರು ಅಪರಾಧ ಪ್ರಕರಣ ಭೇದಿಸಿದ್ದ 10 ವರ್ಷದ‌ ಶ್ವಾನ ಸಾವು.. 'ರೇವಾ'ಗೆ ಪೊಲೀಸ್​ ಗೌರವ - ಪೊಲೀಸ್ ನಾಯಿಗೆ ಗೌರವ ಸಲ್ಲಿಸಿದ ಪೊಲೀಸರು

ಆಡುಗೋಡಿಯ ದಕ್ಷಿಣ ಸಿಎಆರ್​ನ ಕರ್ನಾಟಕ ರಾಜ್ಯ ಶ್ವಾನ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾಬರ್​ಮನ್​ ತಳಿಯ ರೇವಾ ಸಾವನ್ನಪ್ಪಿದ್ದು, ಸಕಲ ಗೌರವದೊಂದಿಗೆ ಪೊಲೀಸರು ಅಂತ್ಯ ಸಂಸ್ಕಾರ ಮಾಡಿದರು.

ನೂರಾರು ಅಪರಾಧ ಪ್ರಕರಣಗಳಲ್ಲಿ ಭೇದಿಸಿದ್ದ 10 ವರ್ಷದ‌ ಶ್ವಾನ ಸಾವು

author img

By

Published : Mar 17, 2022, 3:08 PM IST

Updated : Mar 17, 2022, 3:49 PM IST

ಬೆಂಗಳೂರು: ನೂರಾರು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಹಿಡಿಯಲು ನೆರವಾಗಿದ್ದ ಹಾಗೂ ಕಳೆದ 10 ವರ್ಷಗಳಿಂದ ಪೊಲೀಸ್ ಕರ್ತವ್ಯದಲ್ಲಿ ತೊಡಗಿದ್ದ ರೇವಾ ಎಂಬ ಹೆಸರಿನ ಶ್ವಾನವು ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದೆ‌.

ಆಡುಗೋಡಿಯ ದಕ್ಷಿಣ ಸಿಎಆರ್​ನ ಕರ್ನಾಟಕ ರಾಜ್ಯ ಶ್ವಾನ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾಬರ್ ಮನ್ ತಳಿಯ ರೇವಾ ಸಾವನ್ನಪ್ಪಿದ್ದು, ಸಕಲ ಗೌರವದೊಂದಿಗೆ ಪೊಲೀಸರು ಅಂತ್ಯ ಸಂಸ್ಕಾರ ನೆರವೇರಿಸಿದರು.

2011ರಲ್ಲಿ ಜನಿಸಿದ್ದ ರೇವಾಗೆ 10 ವರ್ಷ ವಯಸ್ಸಾಗಿತ್ತು. ಶ್ವಾನ ದಳದ ಹೆಡ್​ಕಾನ್​​ಸ್ಟೇಬಲ್ ಪ್ರಕಾಶ ವಿವೇಕಿ ಎಂಬುವರು ಶ್ವಾನ ಪರಿಚಾಲಕರಾಗಿದ್ದರು. 2014 ರಲ್ಲಿ ಪಂಜಾಬ್​​ನಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಶ್ವಾನ ಕರ್ತವ್ಯ ಕೂಟ, 2017 ಮೈಸೂರು ಹಾಗೂ 2018 ತಮಿಳುನಾಡಿನಲ್ಲಿ ನಡೆದಿದ್ದ ಪೊಲೀಸ್ ಕರ್ತವ್ಯ ಕೂಟದಲ್ಲಿ ರೇವಾ ಭಾಗಿಯಾಗಿತ್ತು.

'ರೇವಾ'ಗೆ ಪೊಲೀಸ್​ ಗೌರವ

ಇದನ್ನೂ ಓದಿ: ಸಂಶೋಧಕ ಎಂ.ಎಂ. ಕಲಬುರ್ಗಿ ಹಂತಕರ ವಿಚಾರಣೆಗೆ ಕ್ಷಣಗಣನೆ

ಕಳೆದ 10 ವರ್ಷಗಳ ಸೇವೆಯಲ್ಲಿ ನೂರಾರು ಅಪರಾಧ ಕೃತ್ಯಗಳನ್ನು ಭೇದಿಸಿದೆ. ವಯೋಸಹಜ ಕಾಯಿಲೆಯಿಂದ ಇಂದು ಸಾವನ್ನಪ್ಪಿದೆ. ಶ್ವಾನದಳದ ಹಿರಿಯ ಅಧಿಕಾರಿ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಸರ್ಕಾರಿ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಇದಕ್ಕೂ ಮುನ್ನ ಗಾಡ್ ಆಫ್ ಹಾನರ್ ಸಲ್ಲಿಸಲಾಯಿತು.

Last Updated : Mar 17, 2022, 3:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.