ETV Bharat / state

ನಾನು, ಬೊಮ್ಮಾಯಿ ಸಿಎಂ ಆಗಿದ್ದರೆ ಅದಕ್ಕೆ ಮರಾಠ ಸಮುದಾಯದ ಬೆಂಬಲ ಕಾರಣ : ಬಿಎಸ್​ವೈ - ಕರ್ನಾಟಕ ಮರಾಠ ಸಮುದಾಯದ ಅಭಿವೃದ್ಧಿ ನಿಗಮದಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮ

ನಗರದ ಅರಮನೆ ಮೈದಾನದಲ್ಲಿ ಮರಾಠ ಸಮುದಾಯದ ಕಚೇರಿ ಉದ್ಘಾಟನೆ, ಲಾಂಛನ ಬಿಡುಗಡೆ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

ಮರಾಠ ಸಮುದಾಯದ ಬೇಡಿಕೆಗಳ ಕ್ರಿಯಾ ಯೋಜನೆ ರೂಪಿಸಲು 10 ಕೋಟಿ ಬಿಡುಗಡೆ

author img

By

Published : Jul 19, 2022, 5:40 PM IST

ಬೆಂಗಳೂರು: ರಾಜ್ಯದ ನಾನಾ ಕಡೆ ಶಿವಾಜಿ ಮನೆತನದವರ ಸ್ಮಾರಕ, ಪ್ರತಿಮೆ ನಿರ್ಮಾಣ, ಸಮಾಧಿ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲು10 ಕೋಟಿ ಬಿಡುಗಡೆ ಮಾಡುತ್ತೇನೆ. ಆದಷ್ಟು ಬೇಗ ಡಿಪಿಆರ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಮರಾಠ ಸಮುದಾಯದ ಕಚೇರಿ ಉದ್ಘಾಟನೆ, ಲಾಂಛನ ಬಿಡುಗಡೆ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಮರಾಠ ಸಮುದಾಯದ ಅಭಿವೃದ್ಧಿ ನಿಗಮದಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡುವ ಮೂಲಕ ಹಾಗೂ ನಿಗಮದ ಲಾಂಛನವನ್ನು ವರ್ಚ್ಯುಯಲ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ‌ ಉದ್ಘಾಟನೆ ಮಾಡಿದರು. ನಂತರ ಮಾಜಿ ಸಿಎಂ ಯಡಿಯೂರಪ್ಪ ನಿಗಮದ ಅಂತರ್ ಜಾಲತಾಣ ಬಿಡುಗಡೆ ಮಾಡಿದರು.

ಸಮಾರಂಭದ ವೇಳೆ
ಸಮಾರಂಭದ ವೇಳೆ

ನೂರು ಕೋಟಿ ಬಿಡುಗಡೆ: ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಿಗಮದ ಅಧ್ಯಕ್ಷ ಎಂ.ಜಿ ಮುಳೆ, ಮರಾಠ ಇತಿಹಾಸದಲ್ಲಿ ಇದು ಐತಿಹಾಸಿಕ ದಿನ. ಈ ನಿಗಮವನ್ನು ಮೊಟ್ಟ ‌ಮೊದಲು ಘೋಷಣೆ ಮಾಡಿದ್ದು ಮಾಜಿ ಸಿಎಂ ಯಡಿಯೂರಪ್ಪ. ನೂರು ಕೋಟಿ ಹಣ ನಿಗಮಕ್ಕೆ ಬಿಡುಗಡೆ ಮಾಡಿದ್ದಾರೆ.

ನೂರು ಕೋಟಿ ರೂಪಾಯಿಯ ಆ್ಯಕ್ಷನ್ ಪ್ಲಾನ್ ಆಗಿದೆ, ಗಂಗಾ ಕಲ್ಯಾಣ ಯೋಜನೆ ಬೋರ್ ವೇಲ್ ತೆಗೆಯುತ್ತಿದ್ದೇವೆ, ನಿರುದ್ಯೋಗ ಯುವಕರಿಗೆ ಕೆಲಸ ಸಿಗುವುವಂತೆ ಮಾಡುತ್ತೇವೆ. ಹಲವಾರು ಸ್ಕೀಮ್ ಇದೆ. ಇದಕ್ಕೆ ಕಾರಣವಾದವರು ಬೊಮ್ಮಾಯಿ‌,‌ ಮರಾಠಿ ನಿಗಮ ಆಗಲು ಲಕ್ಷ್ಮಣ ಸವದಿ ಬಹಳಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನಮ್ಮ ಮೀಸಲಾತಿ 3ಬಿ ಯಿಂದ ನಮಗೆ 2ಎ ಆಗಬೇಕು, ಇದು ನಮ್ಮ ಬೇಡಿಕೆ. 2012ರಲ್ಲಿ ಬಹಳಷ್ಟು ಬಾರಿ ಶಿಪಾರಸು ಮಾಡಿದ್ದೇವೆ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ರಾಜ್ಯ ಪ್ರವಾಸ ಮಾಡಿ ಅಧ್ಯಯನ ಮಾಡಿದ್ದರು, ಆರ್ಥಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಮರಾಠಿ ಸಮುದಾಯದ ಹಿಂದುಳಿದಿದೆ, ಯಡಿಯೂರಪ್ಪ 2018ರಲ್ಲಿ ನಿಗಮ ಹಾಗೂ ಮೀಸಲಾತಿ ಭರವಸೆ ಕೊಟ್ಟಿದ್ದರು. ಇದಕ್ಕೆ ಬೊಮ್ಮಾಯಿ‌ ಸರ್ಕಾರ ಸಕಾರಾತ್ಮಕ ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಿಎಂ ಎದುರೇ ಮುಂದೆ ಬೇಡಿಕೆ ಇಟ್ಟರು ಎಂದು ವಿವರಿಸಿದರು.

ಸಮಾರಂಭದ ವೇಳೆ
ಸಮಾರಂಭದ ವೇಳೆ

ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಬಹುದಿನಗಳ ಕಾಲ ಮಾರಾಠ ಸಮುದಾಯದಕ್ಕೆ ನಿಗಮ ಆಗಬೇಕು, ಈ ಸಮುದಾಯದ ಬಡವರಿಗೆ ನಿಗಮದ ಮೂಲಕ ಸಹಾಯ ಮಾಡಬೇಕು ಎನ್ನುವ ಬೇಡಿಕೆ ಇತ್ತು, ಹೀಗಾಗಿ ಸಮುದಾಯದ ಮುಖಂಡರು ಅನೇಕ ಸರ್ಕಾರದ ಮುಂದೆ ಮನವಿ ಮಾಡಿದ್ದರು.
ಶೈಕ್ಷಣಿಕವಾಗಿ, ಆರ್ಥಿಕವಾಗಿ ಮರಾಠರು ಮುಂದುವರಿಯಬೇಕು ಎಂಬ ನಿಟ್ಟಿನಲ್ಲಿ ಮುಳೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅನೇಕ ಜನರಿಗೆ ಶಾಸಕರಾಗುವ ಅವಕಾಶ ಕೊಟ್ಟಿದ್ದು ಮರಾಠ ಸಮುದಾಯ, ಅನೇಕ ಸರ್ಕಾರ ಬಂದರು ಯಾವುದೇ ಪ್ರಯೋಜನ ಆಗಿಲ್ಲ. ಸಿಎಂ ಬೊಮ್ಮಾಯಿ‌, ಯಡಿಯೂರಪ್ಪ ನಿಮ್ಮ ಜೊತೆಗೆ ಇರುತ್ತಾರೆ ಎಂದು ಹೇಳಿದರು.

ಸಚಿವ ಅಶ್ವತ್ಥನಾರಾಯಣ ಮಾತನಾಡಿ, ಕನ್ನಡ ನಾಡಿನಲ್ಲಿ ಹಲವಾರು ಧರ್ಮದವರು, ಹಲವಾರು ಸಮುದಾಯದವರು ವಾಸಿಸುತ್ತಿದ್ದಾರೆ. ಮೊದಲ ಬಾರಿಗೆ ಭಾಷಿಕರ ಹೆಸರಲ್ಲಿ ಅಭಿವೃದ್ಧಿ ಯಾವುದೇ ರಾಜ್ಯದಲ್ಲಿ ಮಾಡಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ ಮರಾಠ ಸಮುದಾಯದ ಅಭಿವೃದ್ಧಿ ಮಾಡುವ ಮೂಲಕ ಇಡೀ ದೇಶಕ್ಕೆ ಸಂದೇಶ ನೀಡಿದ್ದಾರೆ ಎಂದು ಹೊಗಳಿದರು.

ಮುಖ್ಯಮಂತ್ರಿ ಆಗಲು ಮರಾಠಿಗರೂ ಕಾರಣ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಮರಾಠರ ಇತಿಹಾಸ ಭಾರತದ ಪುಣ್ಯ ನೆಲದಲ್ಲಿ ದೊಡ್ಡ ಹಿರಿಮೆ ಸಾಧಿಸಿದೆ. ಇವತ್ತೇನಾದರೂ ನಾನು ಹಾಗೂ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದರೆ ಅದಕ್ಕೆ ಮರಾಠ ಸಮುದಾಯದ ಬೆಂಬಲ ಕಾರಣ.

ನಮ್ಮ ಧರ್ಮ, ಸಂಸ್ಕೃತಿ, ಪರಂಪರೆ ಆಚಾರ-ವಿಚಾರಗಳು ಈ ಸಮಾಜದಿಂದ ಗೌರವ ಸ್ಥಾನ ಪಡೆದಿವೆ. ಹಿಂದೂ ಸಮಾಜ ಸ್ಥಾಪಿಸುವ ಕನಸನ್ನ ಕಂಡವರು ಛತ್ರಪತಿ ಶಿವಾಜಿಯವರು, ಹೀಗಾಗಿ ಅವರು ಎಲ್ಲಾ ಸಮುದಾಯಗಳ ರಾಷ್ಟ್ರ ನಾಯಕರಾಗಿದ್ದಾರೆ ಎಂದು ತಿಳಿಸಿದರು.

ಶಿವಾಜಿ ಮಹಾರಾಜರ ಹೆಸರಿನಲ್ಲಿ ಏನೇನು ಆಗಬೇಕು ಅನ್ನೋ ಮನವಿ ಸಲ್ಲಿಸಿದ್ದೇವೋ ಅದನ್ನ ಸರ್ಕಾರದ ಕರ್ತವ್ಯ ಅಂತಾ ಭಾವಿಸಿದ್ದೇನೆ. ಅದನ್ನ ಕಾರ್ಯರೂಪರಕ್ಕೆ ತರಲು ಸಿಎಂ ಹಾಗೂ ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ.

ಮರಾಠ ಸಮುದಾಯವನ್ನ 3ಬಿಯಿಂದ 2ಎಗೆ ಸೇರಿಸಲು ಸಿಎಂ ಹಿಂದುಳಿದ ಆಯೋಗಕ್ಕೆ ಶಿಫಾರಸ್ಸು ಮಾಡ್ತಾರೆ. ನೀವು ಹೋರಾಟ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ, ನಿಮ್ಮ ವಿನಂತಿ ಏನಿದೆ ಅದನ್ನ ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನ ನಾವೂ ಮಾಡುತ್ತೇವೆ ಎಂದು ಮಾಜಿ ಸಿಎಂ ಬಿಎಸ್​​​​ವೈ ಭರವಸೆ ನೀಡಿದರು.

ಕಾರ್ಯಕ್ರಮ ಉದ್ಘಾಟನಾ ಸಮಾರಂಭ
ಕಾರ್ಯಕ್ರಮ ಉದ್ಘಾಟನಾ ಸಮಾರಂಭ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅಭಿವೃದ್ಧಿಗೆ ನಾವೆಲ್ಲ ಒಟ್ಟಾಗಿ ಹೋಗಬೇಕು. ಏನೇ ಮಾಡಿದರು ಸಂವಿಧಾನದ ಚೌಕಟ್ಟಿನಲ್ಲಿ ಮಾಡಬೇಕಾಗುತ್ತದೆ. ರಾಜ್ಯದ ನಾನಾ ಕಡೆ ಶಿವಾಜಿ ಮನೆತನದವರ ಸ್ಮಾರಕ, ಪ್ರತಿಮೆ ನಿರ್ಮಾಣ, ಸಮಾಧಿ ಅಭಿವೃದ್ಧಿಗೆ ಬೇಡಿಕೆ ಇದೆ.

ಈ ಎಲ್ಲ ಬೇಡಿಕೆಗಳನ್ನು ಪ್ರಾಧಿಕಾರದ ಮುಂದೆ ಇಡುತ್ತೇವೆ ಡಿಪಿಆರ್ ಗಾಗಿ 10 ಕೋಟಿ ಬಿಡುಗಡೆ ಮಾಡುತ್ತೇನೆ. ಅಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡುತ್ತೇನೆ ಎಂದರು.

ದೇವರಾಜ ಅರಸು ಸಿಎಂ ಆಗಿದ್ದಾಗ ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಗಿತ್ತು. ಇದೀಗ ನಮ್ಮ ಅವಧಿಯಲ್ಲಿ ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಗಿದೆ. ಇದಕ್ಕೆ ಕಾರಣ ನಮ್ಮ ಹಿರಿಯ ನಾಯಕ ಯಡಿಯೂರಪ್ಪ ತೆಗೆದುಕೊಂಡ ನಿರ್ಣಯ.

ಯಾವ ದೇಶಕ್ಕೆ ಉತ್ತಮವಾದ ಚರಿತ್ರೆ ಇರುತ್ತದೆಯೋ ಆ ದೇಶಕ್ಕೆ ಉತ್ತಮ ಭವಿಷ್ಯ ಇರುತ್ತದೆ. ನಮ್ಮ ದೇಶದ ಇತಿಹಾಸದಲ್ಲಿ ಕೆಲವೇ ಕೆಲವು ಮಿನುಗು ನಕ್ಷತ್ರಗಳು ಇವೆ. ಹಿಂದೂ ಸಾಮ್ರಾಜ್ಯದ ಇತಿಹಾಸ ನೋಡಿದಾಗ ಅತ್ಯಂತ ಶ್ರೇಷ್ಠವಾದ ಮಿನುಗು ತಾರೆ ಛತ್ರಪತಿ ಶಿವಾಜಿ ಎಂದು ಸ್ಮರಿಸಿಕೊಂಡರು.

ಮಾಜಿ ಸಿಎಂ ಹಾಗೂ ಸಿಎಂ
ಮಾಜಿ ಸಿಎಂ ಹಾಗೂ ಸಿಎಂ

ಮರಾಠಿಗರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಶಾಸಕ ಆಗ್ರಹ: ಬೊಮ್ಮಾಯಿ‌ ಸಂಪುಟದಲ್ಲಿ ಇಬ್ಬರು ಮರಾಠಿ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಶಾಸಕ ಶ್ರೀನಿವಾಸ ಮಾನೆ ಆಗ್ರಹಿಸಿದರು.

ಮರಾಠಿ ಸಮುದಾಯದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ‌ಗೆ ಮನವಿ ಮಾಡಿದ ಮಾನೆ,ರಾಜ್ಯದಲ್ಲಿ ಪ್ರತಿಯೊಂದು ಸರ್ಕಾರ ಬಂದರೂ ಮರಾಠಿ ಸಮುದಾಯದವರು ಒಬ್ಬರೊ ಇಬ್ಬರೋ ಮಂತ್ರಿಯಾಗಿರ್ತಾರೆ. ಆದರೆ, ಬೊಮ್ಮಾಯಿ‌ ಅವರ ಸಂಪುಟದಲ್ಲಿ ಒಬ್ಬರೂ ಮಂತ್ರಿಯಾಗಿಲ್ಲ. ಹೀಗಾಗಿ ಬೊಮ್ಮಾಯಿ‌ ಅವರು ತಮ್ಮ ಸಂಪುಟದಲ್ಲಿ ಇಬ್ಬರಿಗಾದ್ರು ಮಂತ್ರಿ ಸ್ಥಾನ ನೀಡಬೇಕು ಎಂದು ವೇದಿಕೆಯಲ್ಲಿ ಸಿಎಂಗೆ ಮನವಿ ಮಾಡಿದರು.

ಇದನ್ನೂ ಓದಿ: ನಾನೇನು ಸನ್ಯಾಸಿನಾ? ಕಾವಿ ಬಟ್ಟೆ ಹಾಕಿಲ್ಲ, ಖಾದಿ ಬಟ್ಟೆ ತೊಟ್ಟಿದ್ದೇನೆ : ಡಿ ಕೆ ಶಿವಕುಮಾರ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.