ETV Bharat / state

ಬ್ಯಾಂಕ್ ಲಾಕರ್​ನಲ್ಲಿದ್ದ 85 ಲಕ್ಷ ರೂ. ಮೌಲ್ಯದ ಚಿನ್ನಾಭರಣವೇ ಮಾಯ...! - ಬೆಂಗಳೂರು ಕ್ರೈಮ್​ ಲೇಟೆಸ್ಟ್​ ನ್ಯೂಸ್​

ಜಯನಗರ ಬಳಿ ಇರುವ ಬ್ಯಾಂಕ್ ಆಫ್ ಬರೋಡಾದಲ್ಲಿ ಲಾಕರ್ ನಲ್ಲಿದ್ದ 85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಈ ಕುರಿತು ಜಯನಗರ ಠಾಣೆಯಲ್ಲಿ ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಾಗಿದೆ.

Bank
Bank
author img

By

Published : Aug 2, 2020, 9:41 AM IST

ಬೆಂಗಳೂರು: ಗ್ರಾಹಕರು ತಮ್ಮ ಹಣ ಹಾಗೂ ಚಿನ್ನಾಭರಣ ಸೇಫ್ ಆಗಿರಲಿ‌ ಎಂದು ಬ್ಯಾಂಕ್ ಲಾಕರ್ ಮೊರೆ ಹೋಗ್ತಾರೆ. ಆದರೀಗ ಬ್ಯಾಂಕ್ ಲಾಕರ್ ನಲ್ಲಿದ್ದ ಚಿನ್ನಾಭರಣವನ್ನೇ ಕಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಜಯನಗರ ಬಳಿ ಇರುವ ಬ್ಯಾಂಕ್ ಆಫ್ ಬರೋಡಾದಲ್ಲಿ ಲಾಕರ್ ನಲ್ಲಿದ್ದ 85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಶಿವಪ್ರಸಾದ್ ಎಂಬುವರು ಬ್ಯಾಂಕ್ ಲಾಕರ್ ನಲ್ಲಿ 1.73 ಕೆ.ಜಿ ಚಿನ್ನಾಭರಣವನ್ನು ಕಳೆದ ಫೆಬ್ರವರಿಯಲ್ಲಿ ಬ್ಯಾಂಕ್ ಲಾಕರ್ ನಂಬರ್ 24ರಲ್ಲಿ ಇಟ್ಟಿದ್ದರು. ಆದರೆ ಜುಲೈ 22 ರಂದು ಬ್ಯಾಂಕ್ ಲಾಕರ್ ಓಪನ್ ಮಾಡಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ತಿಳಿದುಬಂದಿದೆ.

ಗಾಬರಿಗೊಂಡ ಶಿವಪ್ರಸಾದ್, ಬ್ಯಾಂಕ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆದರೆ ಸರಿಯಾದ ಉತ್ತರ ನೀಡದ ಹಿನ್ನೆಲೆ ಜಯನಗರ ಠಾಣೆಯಲ್ಲಿ ಬ್ಯಾಂಕ್ ವಿರುದ್ಧ ದೂರು ನೀಡಿದ್ದಾರೆ.

ಸದ್ಯ ಪೊಲೀಸರು ಬ್ಯಾಂಕ್ ಸಿಸಿಟಿವಿ ಆಧಾರದ ಮೇರೆಗೆ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.