ETV Bharat / state

ಅಲ್ಪಸಂಖ್ಯಾತರ ಬಗ್ಗೆ ದೇವೇಗೌಡರಿಗಿರುವ ಒನ್ ಪರ್ಸೆಂಟ್ ಕಾಳಜಿಯೂ ಕುಮಾರಸ್ವಾಮಿಗಿಲ್ಲ : ಜಮೀರ್ ಅಹ್ಮದ್ - ಮಾಜಿ ಸಚಿವ ಜಮೀರ್ ಅಹ್ಮದ್

ಅಲ್ಪಸಂಖ್ಯಾತರು ಸಿದ್ದರಾಮಯ್ಯನವರ ಮಾತನ್ನು ಕೇಳ್ತಾರೆ. ಸಿದ್ದರಾಮಯ್ಯ ಏನೆಂದು ಅವರಿಗೆ ಗೊತ್ತಿದೆ. ಎಲ್ಲಾ ಸಮುದಾಯದವರು ಸಿದ್ದರಾಮಯ್ಯನವರನ್ನ ತಮ್ಮ ನಾಯಕನೆಂದು ಒಪ್ಪಿಕೊಂಡಿದ್ದಾರೆ. ಇದನ್ನು ಸಹಿಸಲಾಗದ ಕುಮಾರಸ್ವಾಮಿ ಟೀಕೆ ಮಾಡುತ್ತಿದ್ದಾರೆ ಎಂದು ಕುಟುಕಿದರು..

ಜಮೀರ್ ಅಹ್ಮದ್
ಜಮೀರ್ ಅಹ್ಮದ್
author img

By

Published : Oct 16, 2021, 10:25 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ) : ಸಿದ್ದರಾಮಯ್ಯ ಅಲ್ಪಸಂಖ್ಯಾತರ ಟರ್ಮಿನೇಟರ್ ಎಂಬ ಹೆಚ್​ಡಿಕೆ ಹೇಳಿಕೆಗೆ ಮಾಜಿ ಸಚಿವ ಜಮೀರ್ ಅಹ್ಮದ್ ತಿರುಗೇಟು ಕೊಟ್ಟಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ದೇವೇಗೌಡರಿಗೆ ಇರುವ ಒನ್ ಪರ್ಸೆಂಟ್ ಕಾಳಜಿಯೂ ಕುಮಾರಸ್ವಾಮಿಗೆ ಇಲ್ಲ. ಉಪಚುನಾವಣೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿರುವ ಕಾರಣಕ್ಕೆ ಅಲ್ಪಸಂಖ್ಯಾತರ ಬಗ್ಗೆ ಪ್ರೀತಿ ತೋರಿಸುತ್ತಿದ್ದಾರೆಂದು ಹೆಚ್​​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಹೆಚ್ ಡಿಕೆ ವಿರುದ್ಧ ಮಾಜಿ ಸಚಿವ ಜಮೀರ್ ಅಹ್ಮದ್ ಆಕ್ರೋಶ ವ್ಯಕ್ತಪಿಡಿಸಿರುವುದು..

‘ಅಲ್ಪ ಸಂಖ್ಯಾತರ ವಿರೋಧಿ ಕುಮಾರಸ್ವಾಮಿ ತಾನೇ’?

ದೆಹಲಿಯಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಜಿ ಸಚಿವ ಜಮೀರ್ ಅಹ್ಮದ್ ಮಾಧ್ಯಮದವರೊಂದಿಗೆ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಸಾಕಷ್ಟು ಮುಖ್ಯಮಂತ್ರಿಗಳು ರಾಜ್ಯದಲ್ಲಿ ಬಂದು ಹೋಗಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ಮಾಡಿರುವಷ್ಟು ಬೇರೆ ಮುಖ್ಯಮಂತ್ರಿಗಳು ಮಾಡಿದ್ದರೆ, ದಾಖಲೆ ಸಮೇತ ತೋರಿಸಿ.

2013ಕ್ಕೂ ಮುಂಚೆ ಮೈನಾರಿಟಿ ಬಜೆಟ್ ಇದ್ದಿದ್ದು 280 ಕೋಟಿ ರೂ. ಮಾತ್ರ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ 5 ವರ್ಷಗಳಲ್ಲಿ ಮೈನಾರಿಟಿ ಬಜೆಟ್ 3,150 ಕೋಟಿ ರೂ.ಗೆ ಹೆಚ್ಚಿಸಿದ್ರು. ಇಂಥ ಬಜೆಟ್ ಯಾರಾದ್ರು ಮಾಡಲು ಸಾಧ್ಯವೇ? ಎರಡು ಸಲ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ 3,150 ಕೋಟಿ ರೂ. ಇದ್ದ ಮೈನಾರಿಟಿ ಬಜೆಟ್ ಅನ್ನು 1,800 ಕೋಟಿ ರೂ.ಗೆ ಇಳಿಸಿದ್ರು. ಇದನ್ನ ನೋಡಿದ್ರೆ ತಿಳಿಯುತ್ತೆ ಯಾರು ಅಲ್ಪಸಂಖ್ಯಾತರ ವಿರೋಧಿ ಎಂದು ಅಂತಾ ಹೆಚ್ ಡಿಕೆ ವಿರುದ್ಧ ಕಿಡಿಕಾರಿದ್ರು.

‘ಸಿಎಂ ಇಬ್ರಾಹಿಂ ದೇವೇಗೌಡರ ಕಾಲು ಹಿಡಿಯೋದು ಬಾಕಿಯಿತ್ತು’

ನಾನು ಕಣ್ಣಾರೆ ನೋಡಿದ ಘಟನೆ, 2004ರಲ್ಲಿ ಸಿಎಂ ಇಬ್ರಾಹಿಂ ನನ್ನ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಪಕ್ಷಕ್ಕೆ ಒಳ್ಳೆದಾಗುತ್ತೆ ಎಂದು ದೇವೇಗೌಡರ ಕಾಲು ಹಿಡಿಯೋದು ಒಂದು ಬಾಕಿಯಿತ್ತು. ಆದರೆ, ದೇವೇಗೌಡರು ಮನಸ್ಸು ಮಾಡಿದ್ರೂ, ಕುಮಾರಸ್ವಾಮಿ ಮಾಡಲಿಲ್ಲ. ದೇವೇಗೌಡರಿಗೆ ಅಲ್ಪಸಂಖ್ಯಾತರ ಬಗ್ಗೆ ಕಾಳಜಿಯಿದೆ, ಈಗಲೂ ಇದೆ.

ದೇವೇಗೌಡರಿಗೆ ಇರೋ ಕಾಳಜಿಯ ಒಂದು ಪರ್ಸೆಂಟ್ ಸಹ ಕುಮಾರಸ್ವಾಮಿಗೆ ಇಲ್ಲ. ಇಬ್ರಾಹಿಂ ಬದಲಿಗೆ ಚೆನ್ನೈ ಮೂಲದ ಎಂ ಎಂ ರಾಮಸ್ವಾಮಿಯನ್ನ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರು. ಮತ್ತೊಂದು ಬಾರಿ ಅಲ್ಪಸಂಖ್ಯಾತರನ್ನ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ ಅವಕಾಶವಿದ್ದರೂ, ವಿಜಯಮಲ್ಯರನ್ನ ಮಾಡಿದ್ರು. ಆ ನಂತರ ಕುಪೇಂದ್ರರೆಡ್ಡಿಯವರನ್ನ ಮಾಡಿದರು. 2004ರಿಂದ ರಾಜಕೀಯಕ್ಕೆ ಬಂದ ಕುಮಾರಸ್ವಾಮಿಯವರು ಅಲ್ಪಸಂಖ್ಯಾತರಿಗೆ ನೀಡಿದ ಕೊಡುಗೆಯ ಪಟ್ಟಿ ನೀಡಲಿ ಎಂದು ಸವಾಲೆಸೆದರು.

‘ಫಾರುಕ್​​ರನ್ನು ಡಿಸಿಎಂ ಮಾಡಲಿಲ್ಲ’

ತಾವು ಮುಖ್ಯಮಂತ್ರಿಯಾದರೆ ಫಾರುಕ್​​ರನ್ನ ಉಪಮುಖ್ಯಮಂತ್ರಿ ಮಾಡುವ ಭರವಸೆ ನೀಡಿದರು. ಆದರೆ, ಹೆಚ್​ಡಿಕೆ ಮುಖ್ಯಮಂತ್ರಿಯಾದ ನಂತರ ಅವರನ್ನ ಸಚಿವರನ್ನಾಗಿಯೂ ಮಾಡಲಿಲ್ಲ. ಸಮುದಾಯದಲ್ಲಿ ಗೌರವ ಸಿಗುತ್ತೆ ಒಂದು ದಿನದ ಮಟ್ಟಿಗಾದರೂ ಸಚಿವರನ್ನಾಗಿ ಮಾಡಿ ಎಂದು ಫಾರುಕ್​ರವರು ಕುಮಾರಸ್ವಾಮಿಯವರಲ್ಲಿ ಮನವಿ ಮಾಡಿದ್ರು.

ಜಾಫರ್ ಷರೀಫ್ ಮೊಮ್ಮಗನ ಮೇಲೆ ಪ್ರೀತಿ ಬಂದಿರುವ ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜಾಫರ್ ಷರೀಫ್ ಮೊಮ್ಮಗನನ್ನ ನಿಲ್ಲಿಸಬಹುದಿತ್ತು. ರಾಮನಗರ ಮತ್ತು ಹಾಸನ ಜೆಡಿಎಸ್ ಭದ್ರಕೋಟೆ. ಇಲ್ಲಿ ಅಲ್ಪಸಂಖ್ಯಾತರನ್ನ ನಿಲ್ಲಿಸಿ ಗೆಲ್ಲಿಸಬಹುದಿತ್ತಲ್ಲ ಎಂದು ಪ್ರಶ್ನಿಸಿದ್ರು.

‘ಬೈ ಎಲೆಕ್ಷನ್​ನಲ್ಲಿ ಹೆಚ್​ಡಿಕೆಗೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ’

ಉಪ ಚುನಾವಣೆಯಲ್ಲಿ ಇದ್ದಕ್ಕಿದ್ದಂತೆ ಕುಮಾರಸ್ವಾಮಿಗೆ ಅಲ್ಪಸಂಖ್ಯಾತರ ಬಗ್ಗೆ ಪ್ರೀತಿ ಹುಟ್ಟಿದೆ. ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಹಜ್ ಕ್ಯಾಂಪ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಬಂದಿದ್ದಾರೆ.

ಆದರೆ, ಎರಡು ಬಾರಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಒಮ್ಮೆಯೂ ಬರಲಿಲ್ಲ. ಟಿಪ್ಪು ಜಯಂತಿ ಆಚರಣೆಯನ್ನ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್​ನಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡುವಂತೆ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದ್ರು. ಆದರೆ, ನಾನು ಹಠ ಮಾಡಿ ಟಿಪ್ಪು ಜಯಂತಿಯನ್ನ ಬ್ಯಾಕ್ವೆಂಟ್ ಹಾಲ್​ನಲ್ಲಿ ಮಾಡಿಸಿದೆ.

‘ಕುಮಾರಸ್ವಾಮಿ, ಅಲ್ಪಸಂಖ್ಯಾತರನ್ನ ಮುಖ್ಯಮಂತ್ರಿ ಮಾಡುವ ಬಗ್ಗೆ ಘೋಷಿಸಲಿ’

ಕುಮಾರಸ್ವಾಮಿ, ಅಲ್ಪಸಂಖ್ಯಾತರನ್ನ ಮುಖ್ಯಮಂತ್ರಿ ಮಾಡುವ ಬಗ್ಗೆ ಘೋಷಿಸಲಿ. ನಮ್ಮ ಸಮುದಾಯ ಮತ್ತು ನಾನು ಸಹ ಜೆಡಿಎಸ್ ಸೇರುವ ಬಗ್ಗೆ ಚರ್ಚಿಸುತ್ತೇವೆ. ನಾನು ಬೇರೆ ಪಕ್ಷದಲ್ಲಿದ್ದರೂ ನನಗೆ ರಾಜಕೀಯದಲ್ಲಿ ಇರೋದು ಇಬ್ಬರೇ ಗುರುಗಳು ಒಬ್ಬರು ದೇವೇಗೌಡರು, ಮತ್ತೊಬ್ಬರು ಸಿದ್ದರಾಮಯ್ಯ.

‘ಸಿದ್ದರಾಮಯ್ಯ ಏನೆಂದು ಅವರಿಗೂ ಗೊತ್ತಿದೆ’

ಅಲ್ಪಸಂಖ್ಯಾತರು ಸಿದ್ದರಾಮಯ್ಯನವರ ಮಾತನ್ನು ಕೇಳ್ತಾರೆ. ಸಿದ್ದರಾಮಯ್ಯ ಏನೆಂದು ಅವರಿಗೆ ಗೊತ್ತಿದೆ. ಎಲ್ಲಾ ಸಮುದಾಯದವರು ಸಿದ್ದರಾಮಯ್ಯನವರನ್ನ ತಮ್ಮ ನಾಯಕನೆಂದು ಒಪ್ಪಿಕೊಂಡಿದ್ದಾರೆ. ಇದನ್ನು ಸಹಿಸಲಾಗದ ಕುಮಾರಸ್ವಾಮಿ ಟೀಕೆ ಮಾಡುತ್ತಿದ್ದಾರೆ ಎಂದು ಕುಟುಕಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.