ಆನೇಕಲ್: ಮಾಡೆಲಿಂಗ್ ಮಾಡುವ ಆಮಿಷವೊಡ್ಡಿ ಫೇಸ್ಬುಕ್ ಗೆಳತಿಯನ್ನು ಅತ್ಯಾಚಾರವೆಸಗಿದ ಪ್ರಕರಣ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬಿಲವಾರದನಹಳ್ಳಿ ಅಹಮದ್ ಪಾಷ ಯುವತಿಗೆ ಗನ್ ತೋರಿಸಿ ನಗ್ನ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಭಯ ಹುಟ್ಟಿಸಿ ಅತ್ಯಾಚಾರ ಎಸಗಿದ್ದಾನೆ ದೂರು ನೀಡಲಾಗಿದೆ.
ಹೆಬ್ಬಾಳ ಮೂಲದ ಯುವತಿಯನ್ನು ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದ ಮಹಮದ್ ಪಾಷ, ಆಕೆಯ ನಂಬರ್ ಪಡೆದು ಲಾಕ್ಡೌನ್ ಸಂದರ್ಭದಲ್ಲಿ ದಿನಸಿ ಕಿಟ್ ನೀಡಿದ ಫೋಟೋಗಳನ್ನು ಕಳಿಸಿ ಸಭ್ಯಸ್ಥ ಪರೋಪಕಾರಿಯೆಂದು ಬಿಂಬಿಸಿ ಮೊದ ಮೊದಲು ವಿಶ್ವಾಸ ಗಳಿಸಿದ್ದ. ಅನಂತರ ಮಾಡೆಲಿಂಗ್ ಕ್ಷೇತ್ರದಲ್ಲಿ ನಟಿ ಮಾಡುವ ಹಾಗೂ ಕೆಲಸ ಕೊಡಿಸುವ ನೆಪ ಹೇಳೆ ಯುವತಿಯನ್ನು ಸ್ನೇಹಿತನ ಓಲಾ ಕ್ಯಾಬ್ ಮುಖಾಂತರ ಸೋಮವಾರ ಶಾನಬೋಗನಹಳ್ಳಿ ಮನೆಗೆ ಕರೆಸಿದ್ದ ಎನ್ನಲಾಗ್ತಿದೆ.
ಅನಂತರ ತನಗೆ ಲೈಂಗಿಕ ಹಿಂಸೆ ನೀಡಿ ಗನ್ ಪಾಯಿಂಟ್ನಲ್ಲಿ ಬೆದರಿಸಿದ್ದ, ಅಲ್ಲದೆ ತನ್ನನ್ನು ವಿವಸ್ತ್ರವಾಗಿಸಿ ಫೋಟೋ ತೆಗೆದು ಜಾಲತಾಣದಲ್ಲಿ ಹರಿಬಿಡುವ ಕುರಿತು ಬೆದರಿಸಿ ಅತ್ಯಾಚಾರವೆಸಗಿದ್ದಾನೆಂದು ಸಂತ್ರಸ್ತೆ ದೂರು ನೀಡಿದ್ದಾಳೆ.
ಈ ದೂರು ಆಧರಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಆನೇಕಲ್ ನೂತನ ವೃತ್ತ ನಿರೀಕ್ಷಕ ಮಹಾನಂದಿ, ಬನ್ನೇರುಘಟ್ಟ ಎಸ್ಐ ಗೋವಿಂದ್ ಯಶಸ್ವಿಯಾಗಿದ್ದಾರೆ.
ಓದಿ: ಪಾಲಿಕೆ ಅಧಿಕಾರಿಗಳ ಹೆಸರಲ್ಲಿ ಬಟ್ಟೆ ಅಂಗಡಿ ಮೇಲೆ ದಾಳಿ: ಓರ್ವ ಬಂಧನ, ಇಬ್ಬರು ಪರಾರಿ