ನೆಲಮಂಗಲ: ಕೊರೊನಾ ಹಿನ್ನೆಲೆ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಶಿವಗಂಗೆ ಬೆಟ್ಟ ನಿಷಿದ್ಧವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರ ಆಹಾರವನ್ನೇ ಅವಲಂಬಿಸಿರುವ ಕೋತಿಗಳು ಹಸಿವಿನಿಂದ ಕಂಗಾಲಾಗಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಮಾರು 4,485 ಅಡಿ ಎತ್ತರದ ಶಿವಗಂಗೆ ಬೆಟ್ಟ, ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದೆ. ಸದ್ಯ ಕೊರೊನಾದಿಂದ ಸಂಪೂರ್ಣವಾಗಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಇದರಿಂದ ಬೆಟ್ಟದಲ್ಲಿ ಪ್ರವಾಸಿಗರು ಇಲ್ಲದೇ ಅವರು ನೀಡುವ ಆಹಾರವನ್ನು ಅವಲಂಬಿಸಿರುವ ಮೂಕ ಪ್ರಾಣಿಗಳು ಹಸಿವಿನಿಂದ ಕಂಗಾಲಾಗಿವೆ.
ಗ್ರಾಮಸ್ಥರಿಂದ ಆಹಾರ ಪೂರೈಕೆ : ಬೆಟ್ಟದಲ್ಲಿದ್ದ ಮೂಕ ಪ್ರಾಣಿಗಳ ರೋಧನೆಗೆ ಗ್ರಾಮಸ್ಥರು ಮಿಡಿದಿದ್ದಾರೆ. ಶಿವಗಂಗೆ ಬೆಟ್ಟ ಹತ್ತಿ ಕೋತಿಗಳಿಗೆ ನೀರು, ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೋತಿಗಳಿಗೆ ನೀರು ಕುಡಿಸಿ ಆಹಾರ ನೀಡಿ ಸಂತೈಸಿದ ಗ್ರಾಮಸ್ಥರು, ಸಾರ್ಥಕ ಕೆಲಸ ಮಾಡಿದ್ದಾರೆ. ನೀರು ಕೊಟ್ಟ ಕೂಡಲೇ ದಣಿವಾರಿಸಿಕೊಂಡ ವಾನರ ಗುಂಪು, ಜೀವ ಜಲಕ್ಕೆ ಹಾತೊರೆಯುತ್ತಿದ್ದವು. ಇನ್ನೂ ಸಾವಿರಾರು ವಾನರಗಳಿಗೆ ಶಿವಗಂಗೆ ಗ್ರಾಮಸ್ಥರಿಂದ ನೀರು, ಆಹಾರ ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.