ETV Bharat / state

ಧರ್ಮದ ಆಯ್ಕೆ ಅವರವರ ಸ್ವಂತ ಇಚ್ಚೆಗೆ ಬಿಟ್ಟದ್ದು: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ - Vice President Venkaiah speech

ಇಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಬೆಂಗಳೂರಿಗೆ ಆಗಮಿಸಿದ್ದರು. ಇದೇ ವೇಳೆ ಆನೇಕಲ್​ನಲ್ಲಿ ನಡೆದ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

Vice President Venkaiah Naidu visited Bangalore
ಬೆಂಗಳೂರಿಗೆ ಭೇಟಿ ನೀಡಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
author img

By

Published : Feb 26, 2022, 8:44 PM IST

ಆನೇಕಲ್: ವಿವಿಧತೆಯಲ್ಲಿ ಏಕತೆ ಭಾರತದ ವಿಶೇಷತೆ, ಹಿಂದೆ ಭಾರತಕ್ಕೆ ಅಧ್ಯಯನಕ್ಕೆಂದು ವಿದೇಶಿಗರು ಬರುತ್ತಿದ್ದ ಕಾಲವೊಂದಿತ್ತು. ಈ ಕಾರಣಕ್ಕಾಗಿ ದೇಶದ ಸಾರ್ವಭೌಮತೆ ಎತ್ತಿ ಹಿಡಿಯುವ ಮೂಲಕ ಇಲ್ಲಿನ ಸಂಸ್ಕೃತಿಯನ್ನು ಉಳಿಸಬೇಕಿದೆ. ಆಧ್ಯಾತ್ಮಿಕತೆ ಎಂದರೆ ಧರ್ಮದ ಆರಾಧನೆಯಲ್ಲ, ಧರ್ಮ ವ್ಯಕ್ತಿಯ ವೈಯಕ್ತಿಕ ಆಯ್ಕೆಯಾಗಬೇಕು. ಹೀಗಾಗಿ ಜಾತಿ, ಮತ, ಭಾಷೆ ಮತ್ತು ಲಿಂಗದ ಹೆಸರಲ್ಲಿ ಹೇರಿಕೆ ಸರಿಯಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ ನೀಡಿದರು.

ಆನೇಕಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭಾಷಣ

ತಾಲೂಕಿನ ಸರ್ಜಾಪುರ-ವರ್ತೂರು ಮುಖ್ಯ ರಸ್ತೆಯಗ್ರೀನ್ ವುಡ್ ಹೈ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯಲ್ಲಿ ನಾಟಕ, ನಾಟ್ಯಕ್ಕೆ ಮೀಸಲಿಟ್ಟ ಒಳಾಂಗಣವನ್ನು ಲೋಕಾರ್ಪಣೆಗೊಳಿಸಿ ವೇದಿಕೆಯಲ್ಲಿ ಮಾತನಾಡಿದರು. ದೇಶದ ಪ್ರತಿಯೊಬ್ಬರಿಗೂ ಮಾತೃ ಭಾಷೆ ಅನಿವಾರ್ಯವಾಗಬೇಕು. ಅದು ಕಣ್ಣಿದ್ದಂತೆ ಅದನ್ನು ಜೋಪಾನ ಮಾಡಿಕೊಳ್ಳಬೇಕು. ಬೇರೆ ಭಾಷೆ ಕನ್ನಡಕವಿದ್ದಂತೆ ಎಂದು ಸಾರಿದರು.

ಶಿಕ್ಷಣ ವ್ಯವಹಾರಿಕ ಉಧ್ಯಮವಾಗಬಾರದು. ಬದಲಿಗೆ ಮಾನವೀಯತೆಯ ಗುರಿಯತ್ತ ಸಾಗುವ ಕಲೆ ಸಂಸ್ಕೃತಿ ನಾಟಕ, ನಾಟ್ಯ, ಸಂಗೀತಗಳ ಮೂಲಕ ಪಠ್ಯೇತರ ಚಟುವಟಿಕೆಗಳ ಮೂಲಕ ದೇಶವನ್ನು ಕಟ್ಟುವ ಕೆಲಸದತ್ತ ಮುಖ ಮಾಡಬೇಕು ಎಂದರು.

ಬಳಿಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ದೇಶದ ಭವಿಷ್ಯದಲ್ಲಿ ಬೆಂಗಳೂರು ಉತ್ತಮ ಶೈಕ್ಷಣಿಕ ಕೇಂದ್ರವಾಗಿ ಮಾರ್ಪಾಡಾಗಲಿದೆ. ದೇಶದಲ್ಲಿಯೇ ಶಿಕ್ಷಣವನ್ನು ಪ್ರಗತಿಯತ್ತ ಕೊಂಡೋಯ್ಯುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರ ಸ್ಥಾನದಲ್ಲಿದೆ. ಹೀಗಾಗಿ ಹೊಸ ರಾಷ್ಟ್ರೀಯ ಶೈಕ್ಷಣಿಕ ನೀತಿಯನ್ನು ಜಾರಿ ಮಾಡಿದ ಕೀರ್ತಿ ರಾಜ್ಯಕ್ಕೆ ಸಲ್ಲುತ್ತದೆ.

ಗುಣಾತ್ಮಕ ಶಿಕ್ಷದ ಜೊತೆಗೆ ಕಲೆ ಸಂಸ್ಕೃತಿ ಸಂಗೀತ ನಾಟ್ಯದ ಮೂಲಕ ದೇಶವನ್ನು ಮನ್ನೆಡುವ ಜವಾಬ್ದಾರಿ ವಿದ್ಯಾರ್ಥಿಗಳು ಹೊಂದಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನಂ, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ರಾಜ್ಯಪಾಲರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ರೂಮಿನ ಪಕ್ಕವೇ ಬಾಂಬ್ ಸದ್ದು: ತಂದೆಗೆ ವಿಡಿಯೋ ಕಾಲ್​ ಮಾಡಿದ ಉಕ್ರೇನ್​ನಲ್ಲಿ ಸಿಲುಕಿದ ಕಾರವಾರದ ಯುವತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.