ETV Bharat / state

ಅಧಿಕಾರಿಗಳ ಸಮನ್ವಯ ಕೊರತೆಗೆ ದೊಡ್ಡಬಳ್ಳಾಪುರ ಆಯ್ತು ಧೂಳ್​​ಪುರ - ಮ್ಯಾನ್​ಹೋಲ್ ನಿರ್ಮಾಣ ವಿಳಂಬ

ದೊಡ್ಡಬಳ್ಳಾಪುರ ನಗರಸಭೆ ಮನಬಂದಂತೆ ಮ್ಯಾನ್​ಹೋಲ್ ನಿರ್ಮಿಸುತ್ತಿದೆ. ಲೋಕೋಪಯೋಗಿ ಇಲಾಖೆ ತನಗಿಷ್ಟಬಂದಂತೆ ರಸ್ತೆ ಕಾಮಗಾರಿ ನಡೆಸುತ್ತಿರುವ ಪರಿಣಾಮ ಪಟ್ಟಣ ಸಂಪೂರ್ಣ ಧೂಳಿನಿಂದ ಆವರಿಸಿದೆ.

ಧೂಳುಮಯವಾದ ದೊಡ್ಡಬಳ್ಳಾಪುರ
author img

By

Published : Nov 5, 2019, 10:19 PM IST

ದೊಡ್ಡಬಳ್ಳಾಪುರ: ನಗರಸಭೆ ಮನಬಂದಂತೆ ಮ್ಯಾನ್​ಹೋಲ್ ನಿರ್ಮಿಸುತ್ತಿದೆ. ಲೋಕೋಪಯೋಗಿ ಇಲಾಖೆ ತನಗಿಷ್ಟಬಂದಂತೆ ರಸ್ತೆ ಕಾಮಗಾರಿ ನಡೆಸುತ್ತಿದೆ. ಈ ಎರಡು ಇಲಾಖೆಗಳ ಅಧಿಕಾರಿಗಳ ಸಮನ್ವಯದ ಕೊರತೆಯಿಂದಾಗಿ ಅಮಾಯಕ ಜನರು ನರಕ ಅನುಭವಿಸುತ್ತಿದ್ದು, ದೊಡ್ಡಬಳ್ಳಾಪುರ ಧೂಳ್​ಪುರವಾಗಿ ಪರಿವರ್ತನೆಯಾಗುತ್ತಿದೆ.

ಪಟ್ಟಣದ ಕೊಂಗಾಡಿಯಪ್ಪ ಕಾಲೇಜ್, ಇಸ್ಲಾಂಪುರ, ತಾಲೂಕು ಕಚೇರಿ ರಸ್ತೆ ಮತ್ತು ಹಾಲಿನ ಡೈರಿ ವೃತ್ತದವರೆಗಿನ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಶುರುವಾಗಿ 4ತಿಂಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ವಿವಿಧ ಕಾಮಗಾರಿಗಳಿಂದಾಗಿ ತೊಂದರೆ ಅನುಭವಿಸುತ್ತಿರುವ ಜನ

ಬೆಸ್ಕಾಂ, ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದ ಕಾರಣ ದಸರಾಗೆ ಮುಗಿಯಬೇಕಿದ್ದ ಕಾಮಗಾರಿ ಇನ್ನೂ ಕುಂಟುತ್ತಲೆ ಸಾಗಿದೆ. ಸಾರ್ವಜನಿಕರ ದುಡ್ಡನ್ನು ಬೇಕಾಬಿಟ್ಟಿ ಖರ್ಚು ಮಾಡುವುದರ ಜೊತೆಗೆ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಕನ್ನಡಪರ ಸಂಘಟನೆ ಕಾರ್ಯಕರ್ತರು ಅಧಿಕಾರಿಗಳನ್ನ ಸ್ಥಳಕ್ಕೆ ಕರೆಸಿ ಶೀಘ್ರವೇ ಕಾಮಾಗಾರಿ ಮುಗಿಸುವಂತೆ ಗಡುವು ನೀಡಿದ್ದರು. ಆದರೂ ಪ್ರಯೋಜನವಾಗಿಲ್ಲ.
ಕುಟುಂತಾ ಸಾಗುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ವಾಸವಾಗಿರುವ ಜನರು ಧೂಳಿನ ಕಾಟಕ್ಕೆ ರೋಸಿಹೋಗಿದ್ದಾರೆ. ಹಲವು ರೋಗಗಳಿಗೆ ತುತ್ತಾಗುವ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಹಾಗೆಯೇ ಮ್ಯಾನ್​​ಹೋಲ್​ಗಳಿಗೆ ಈಗಾಗಲೇ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಆದ್ದರಿಂದ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Intro:ಅಧಿಕಾರಿಗಳ ದೆಸೆಯಿಂದ ದೊಡ್ಡಬಳ್ಳಾಪುರ ಧೂಳ್ ಪುರ ಆಯ್ತು
Body:ದೊಡ್ಡಬಳ್ಳಾಪುರ : ನಗರಸಭೆಯವ್ರೂ ಅವರಿಗಿಷ್ಟ ಬಂದಾಗ ಮ್ಯಾನ್ ಹೋಲ್ ನಿರ್ಮಾಣ ಮಾಡಿದ್ರೆ. ಲೋಕೋಪಯೋಗಿ ತನಗಿಷ್ಟ ಬಂದಾಗ ರಸ್ತೆ ಕಾಮಾಗಾರಿ ನಡೆಸುತ್ತಿದೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಕಷ್ಟಪಡುತ್ತಿರುವುದು ಅಮಾಯಕ ಜನರು. ಅವೈಜ್ಞಾನಿಕ ರಸ್ತೆ ಮತ್ತು ವಿಳಂಬ ರಸ್ತೆಕಾಮಾಗಾರಿಯಿಂದ ದೊಡ್ಡಬಳ್ಳಾಪುರ ಧೂಳ್ ಪುರವಾಗಿ ಬದಲಾಗುತ್ತಿದೆ.

ದೊಡ್ಡಬಳ್ಳಾಪುರ ಪಟ್ಟಣದ ಕೊಂಗಾಡಿಯಪ್ಪ ಕಾಲೇಜ್, ಇಸ್ಲಾಂಪುರ, ತಾಲೂಕು ಕಛೇರಿ ರಸ್ತೆ ಮತ್ತು ಹಾಲಿನ ಡೈರಿ ವೃತ್ತದ ವರೆಗಿನ ರಸ್ತೆ ಕಾಮಾಗಾರಿ ನಡೆಯುತ್ತಿದ್ದು. ಕಾಮಾಗಾರಿ ಶುರುವಾಗಿ ನಾಲ್ಕು ತಿಂಗಳೇ ಕಳೆದ್ರು ಇನ್ನು ಕಾಮಾಗಾರಿ ಪೂರ್ಣಗೊಂಡಿಲ್ಲ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ರಸ್ತೆ ಕಾಮಾಗಾರಿ ನೆನೆಗುದಿಗೆ ಬಿದ್ದಿದೆ. ಬೆಸ್ಕಾಂ, ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲ. ನಗರಸಭೆಯವರು ರಸ್ತೆ ಮಧ್ಯದಲ್ಲಿಯೇ ಮ್ಯಾನ್ ಹೋಲ್ ನಿರ್ಮಾಣ ಮಾಡುತ್ತಿದ್ದಾರೆ, ಲೋಕಪಯೋಗಿ ಇಲಾಖೆ ರಸ್ತೆ ಕಾಮಾಗಾರಿಯನ್ನ ನಡೆಸುತ್ತಿದೆ. ಅವೈಜ್ಞಾನಿಕ ಮತ್ತು ವಿಳಂಬ ರಸ್ತೆ ಕಾಮಾಗಾರಿಯಂದ್ದಾಗಿ ದಸರಾ ಹಬ್ಬಕ್ಕೆ ಕಾಮಾಗಾರಿ ಮುಗಿಯುವ ಬದಲಿಗೆ ಇನ್ನೂ ಕುಂಟುತ್ತಲೆ ಸಾಗಿದೆ. ಇದರಿಂದ ಬೇಸತ್ತ ಕನ್ನಡಪರ ಸಂಘಟನೆ ಕಾರ್ಯಕರ್ತರು ಅಧಿಕಾರಿಗಳನ್ನ ಸ್ಥಳಕ್ಕೆ ಕರೆಸಿ ಶೀಘ್ರವೇ ಕಾಮಾಗಾರಿ ಮುಗಿಸುವಂತೆ ಗಡುವು ನೀಡಿದ್ರು.

01a-ಬೈಟ್ : ಚಂದ್ರು. ಕನ್ನಡಪರ ಹೋರಾಟಗಾರ

ಕಳೆದ ನಾಲ್ಕು ತಿಂಗಳಿಂದ ಕುಟುಂತಾ ಸಾಗುತ್ತಿರುವ ಕಾಮಾಗಾರಿಯಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ವಾಸವಾಗಿರುವ ಜನರು ಧೂಳಿನ ಕಾಟಕ್ಕೆ ರೋಸಿಹೋಗಿದ್ದಾರೆ. ಧೂಳಿನ ದೆಸೆಯಿಂದ ಹಲವು ರೋಗಗಳಿಗೆ ತುತ್ತಾಗುವ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಹಾಗೆಯೇ ನಗರಸಭೆಯವರು ತೊಡಿರುವ ಮ್ಯಾನ್ ಹೋಲ್ ಗಳಿಗೆ ಈಗಾಗಲೇ ಹಲವು ವಾಹನ ಸವಾರರು ಬಿದ್ದು ಗಾಯಾಗೊಂಡಿದ್ದಾರೆ. ಕಾಮಾಗಾರಿ ಅದಷ್ಟು ಬೇಗ ಪೂರ್ಣಗೊಳದಿದ್ದಲ್ಲಿ ಮತ್ತಷ್ಟು ಜನರು ಮ್ಯಾನ್ ಹೋಲ್ ಗಳಿಗೆ ಬಿದ್ದು ಪ್ರಾಣ ಕಳೆದು ಕೊಳ್ಳವ ಅತಂಕವನ್ನ ಸ್ಥಳೀಯರು ವ್ಯಕ್ತಪಡಿಸುತ್ತಾರೆ

01b-ಬೈಟ್ : ನಟರಾಜ್, ಸ್ಥಳೀಯ

ಇಲಾಖೆಗಳ ನಡುವೆ ಸಮನ್ವಯ ಇಲ್ಲದೆ, ಸಾರ್ವಜನಿಕರ ದುಡ್ಡನ್ನು ಬೇಕಾಬಿಟ್ಟಿ ಖರ್ಚು ಮಾಡುವುದರ ಜೊತೆಗೆ ಅವೈಜ್ಞಾನಿಕ ರಸ್ತೆ ಮತ್ತು ವಿಳಂಬ ರಸ್ತೆ ಕಾಮಾಗಾರಿಯಿಂದ ಜನರು ಕಷ್ಟಪಡುವಂತೆ ಮಾಡಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.