ETV Bharat / state

ಸರ್ಕಾರಿ ಶಾಲಾ ಮಕ್ಕಳಿಗೆ ಏರ್​ ಶೋ ನೋಡಲು ಅನುಮತಿ ನೀಡುವಂತೆ ಪ್ರಧಾನಿಗೆ ಮನವಿ - ಈಟಿವಿ ಭಾರತ ಕನ್ನಡ

ಲೋಹದ ಹಕ್ಕಿಗಳ ತಾಲೀಮು ಕಂಡು ಸರ್ಕಾರಿ ಶಾಲಾ ಮಕ್ಕಳು ಖುಷಿಪಡುತ್ತಿದ್ದಾರೆ. ನಾಳೆ ನಡೆಯುವ ಏರ್​ ಶೋಗೆ ಮಕ್ಕಳಿಗೆ ಅವಕಾಶ ನೀಡಬೇಕೆಂದು ಶಿವರಾಜು ಹರಿಯಾಳ ಎಂಬವರು ಪ್ರಧಾನಿಗೆ ಟ್ವೀಟ್​ ಮಾಡಿ ಮನವಿ ಮಾಡಿದ್ದಾರೆ.

air show
ಏರ್​ ಶೋ
author img

By

Published : Feb 12, 2023, 2:02 PM IST

ಯಲಹಂಕ (ಬೆಂ.ಗ್ರಾ): ಪ್ರತಿ 2 ವರ್ಷಕ್ಕೊಮ್ಮೆ ನಡೆಯುವ ಏಷ್ಯಾದ ಅತಿದೊಡ್ಡ ಏರ್​ ಶೋಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಏರ್​ಫೋರ್ಸ್​ ಸ್ಟೇಷನ್​ನಲ್ಲಿ ಫೆಬ್ರವರಿ 13ರಿಂದ 17ರವರೆಗೆ 5 ದಿನಗಳ ಏರೋ ಇಂಡಿಯಾ 2023ರ ವೈಮಾನಿಕ ಪ್ರದರ್ಶನ ನಡೆಯಲಿದೆ. ಪ್ರಪಂಚದ ವಿವಿಧ ಭಾಗಗಳಿಂದ ಜನರು ಆಗಮಿಸಲಿದ್ದು, ಲೋಹದ ಹಕ್ಕಿಗಳ ಕಸರತ್ತುಗಳನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆಯ ಸುತ್ತಮುತ್ತಲಿನ ಸರ್ಕಾರಿ ಶಾಲಾ ಮಕ್ಕಳಿಗೆ ಏರ್​ಶೋ ನೋಡಲು ಅವಕಾಶ ಮಾಡಿಕೊಡಿ ಎಂದು ವ್ಯಕ್ತಿಯೊಬ್ಬರು ಟ್ವೀಟ್​ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಶಿವರಾಜು ಹರಿಯಾಳ ಎಂಬವರು ಪ್ರಧಾನಿ ಟ್ವಿಟರ್ ಖಾತೆಗೆ ವಿಡಿಯೋವೊಂದನ್ನು ಟ್ಯಾಗ್ ಮಾಡಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಏರ್​ ಶೋ ನೋಡಲು ಅವಕಾಶ ಕಲ್ಪಿಸುವಂತೆ ವಿನಂತಿಸಿದ್ದಾರೆ. ಟ್ಯಾಗ್​ ಮಾಡಿರುವ ವಿಡಿಯೋದಲ್ಲಿ ಮಕ್ಕಳು ಶಾಲಾ ಟೆರಸ್ ಮತ್ತು ಕಾಂಪೌಂಡ್‌ಗಳ ಮೇಲೆ ನಿಂತು ಯುದ್ಧ ವಿಮಾನಗಳು ನಡೆಸುವ ಕಸರತ್ತುಗಳನ್ನು ನೋಡಿ ಎಂಜಾಯ್​ ಮಾಡುತ್ತಿರುವ ದೃಶ್ಯವಿದೆ.

ಇದನ್ನೂ ಓದಿ: ಪ್ರಧಾನಿಯಿಂದ ನಾಳೆ ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ಮೊದಲ ಹಂತದ ಮಾರ್ಗ ಉದ್ಘಾಟನೆ

ಏರೋ ಇಂಡಿಯಾ ಪ್ರದರ್ಶನವನ್ನು ವಾಯುನೆಲೆಯ ಸುತ್ತಮುತ್ತಲಿನ ಹಲವು ಹಳ್ಳಿಗಳ ಜನರು ಹೊರಗಿನಿಂದಲೇ ಕಣ್ತುಂಬಿಕೊಳ್ಳುತ್ತಾರೆ. ಶಾಲಾ ಮಕ್ಕಳಿಗೆ ವಿಮಾನಗಳ ಹಾರಾಟ ಆಕರ್ಷಣೆಯ ಕೇಂದ್ರ ಬಿಂದು. ಈಗಾಗಲೇ ನಡೆಯುತ್ತಿರುವ ತಾಲೀಮು ಸರ್ಕಾರಿ ಶಾಲೆಯ ಮಕ್ಕಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ದೂರದಿಂದಲೇ ನೋಡಿ ಖುಷಿ ಪಡುತ್ತಿರುವ ಮಕ್ಕಳಿಗೆ ಹತ್ತಿರದಿಂದ ನೋಡುವ ಅವಕಾಶ ಕೊಟ್ಟಲ್ಲಿ ಮುಂದೆ ಭವಿಷ್ಯದಲ್ಲಿ ವಾಯುಸೇನೆಯಲ್ಲಿ ಯೋಧರಾಗಬಹುದು ಅಥವಾ ವೈಮಾನಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು. ಒಂದು ಅವಕಾಶ ಭವಿಷ್ಯದ ಸಾಧನೆಗೆ ಬುನಾದಿಯಾಗಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.

ವಿಮಾನ ಸೇವೆಯಲ್ಲಿ ವ್ಯತ್ಯಯ: ವಿಮಾನಗಳ ಅಭ್ಯಾಸ ಫೆಬ್ರವರಿ 8 ರಿಂದ ಶುರುವಾಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಫೆಬ್ರವರಿ 8 ರಿಂದ 17ರವರೆಗೆ ವಿಮಾನ ಸೇವೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ: ಏರೋ ಇಂಡಿಯಾ: ವಾಣಿಜ್ಯ ವಿಮಾನಗಳ ಹಾರಾಟ ವ್ಯತ್ಯಯ; ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಜನಜಾತ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.