ETV Bharat / state

ಭಾರತೀಯ ಪಾಸ್​ಪೋರ್ಟ್​ನಲ್ಲಿ ಯಮನ್ ದೇಶಕ್ಕೆ ಪ್ರಯಾಣ: ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು - ಯಮನ್ ದೇಶಕ್ಕೆ ಹೋಗಿ ಕೆಲಸ

ಶೇಖ್ ಮಹಮ್ಮದ್ ಸೂಫಿಯಾನ್ 2012ರಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿ ನಜರಾನಲ್ಲಿ ಸೇಲ್ಸ್​ಮ್ಯಾನ್ ಕೆಲಸ ಮಾಡುತ್ತಿದ್ದರು. ಭಾರತೀಯ ಪಾಸ್​ಪೋರ್ಟ್​ನಲ್ಲಿಯೇ ಯಮನ್ ದೇಶಕ್ಕೆ ಹೋಗಿ ಕೆಲಸ ಮಾಡಿದ್ದರು.

Kempegowda International Airport
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
author img

By

Published : Dec 13, 2022, 11:52 AM IST

ದೇವನಹಳ್ಳಿ: ಪ್ರಯಾಣ ನಿಷೇಧಿತ ದೇಶವಾದ ಯಮನ್ ದೇಶಕ್ಕೆ ಭಾರತೀಯ ಪಾಸ್​ಪೋರ್ಟ್ ಬಳಸಿ ಪ್ರಯಾಣಿಸಿದ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಮೂಲದ 33 ವರ್ಷದ ಶೇಖ್ ಮಹಮ್ಮದ್ ಸೂಫಿಯಾನ್ ಭಾರತೀಯ ಪಾಸ್​ಪೋರ್ಟ್ ಬಳಸಿ ನಿಷೇಧಿತ ದೇಶವಾದ ಯಮನ್​ಗೆ ಪ್ರಯಾಣಿಸಿದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಡಿಸೆಂಬರ್ 12 ರಂದು ಶೇಖ್ ಮಹಮ್ಮದ್ ಸೂಫಿಯನ್ ಸುಡಾನ್ ಶಾರ್ಜಾ ಮಾರ್ಗವಾಗಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಏರ್​ಪೋರ್ಟ್​ನ ಇಮಿಗ್ರೇಷನ್ ಅಧಿಕಾರಿಗಳು ಪ್ರಯಾಣಿಕನ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಯಮನ್ ದೇಶದಲ್ಲಿ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ. ಶೇಖ್ ಮಹಮ್ಮದ್ ಸೂಫಿಯಾನ್ 2012ರಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿ ನಜರಾನಲ್ಲಿ ಸೇಲ್ಸ್​ಮ್ಯಾನ್ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಕಂಪನಿಯ ಬ್ರಾಂಚ್ ಯಮನ್ ದೇಶದ ಅಡೆನ್ನದಲ್ಲಿಯೂ ಇದೆ.

ಭಾರತೀಯ ಪಾಸ್​ಪೋರ್ಟ್​ನಲ್ಲಿಯೇ ಯಮನ್ ದೇಶಕ್ಕೆ ಹೋಗಿ ಕೆಲಸ ಮಾಡಿದ್ದರು. 26/09/2017 ರ ಭಾರತ ಸರ್ಕಾರದ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಭಾರತೀಯ ಪ್ರಜೆಯು ಭಾರತೀಯ ಪಾಸ್​ಪೋರ್ಟ್ ಬಳಸಿಕೊಂಡು ಯಮನ್ ದೇಶಕ್ಕೆ ಪ್ರಯಾಣಿಸುವಂತಿಲ್ಲ. ಇದರ ಆಧಾರದ ಮೇಲೆ ಇಮಿಗ್ರೇಷನ್ ಅಧಿಕಾರಿಗಳು ನಿಷೇಧಿತ ದೇಶಕ್ಕೆ ಪ್ರಯಾಣಿಸಿದ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: ಆಧಾರ್‌, ಪಾನ್‌ ಕಾರ್ಡ್‌, ಪಾಸ್‌ಪೋರ್ಟ್ ಎಲ್ಲವೂ ಅಕ್ರಮ: ಬೆಂಗಳೂರಿನಲ್ಲಿ ನೇಪಾಳಿ ಪ್ರಜೆ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.