ದೊಡ್ಡಬಳ್ಳಾಪುರ : ಗ್ರಾಪಂ ಚುನಾವಣೆ ಕಾವು ದಿನೇದಿನೆ ಹೆಚ್ಚಾಗುತ್ತಿದೆ. ಯುವಕರು, ಮಹಿಳೆಯರು ಸೇರಿ ವಯಸ್ಸಾದ ವೃದ್ಧರೂ ಸಹ ಚುನಾವಣಾ ಕಣದಲ್ಲಿ ಧುಮುಕ್ಕಿದ್ದಾರೆ. ಹಾಗೆಯೇ ಮುಂಗಳಮುಖಿ ಸಹ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದ ಮಂಗಳಮುಖಿ ಅನುಶ್ರೀ ಗ್ರಾಪಂ ಚುನಾವಣಾ ಕಣಕ್ಕಿಳಿದಿದ್ದಾರೆ. ದೊಡ್ಡಬೆಳವಂಗಲ ವಾರ್ಡ್ ನಂ.3ರಲ್ಲಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಗ್ರಾಮದ ಯುವಕರು ತೃತೀಯ ಲಿಂಗಿಗೆ ಬೆಂಬಲ ಸೂಚಿಸಿ ಅವರಲ್ಲಿ ಉತ್ಸಾಹ ತುಂಬಿದ್ದಾರೆ.
ಇದನ್ನೂ ಓದಿ: ಗ್ರಾ.ಪಂ.ಚುನಾವಣೆ ವ್ಯಕ್ತಿಗತವಾಗಿರಬೇಕು, ಯಾವುದೇ ಪಕ್ಷಕ್ಕೆ ಸೀಮಿತವಾಗಿರಬಾರದು: ಸಿದ್ದಗಂಗಾ ಶ್ರೀ
ಸಮಾಜದಲ್ಲಿ ನಾವೂ ಕೂಡ ಯಾವುದಾದ್ರೂ ಒಂದು ಕ್ಷೇತ್ರದಲ್ಲಿ ಮುಂದುವರಿಯಬೇಕು. ನಾವೂ ಕೂಡ ನಾಗರಿಕ ಸಮಾಜದಲ್ಲಿದ್ದೇವೆ. ನಾವೂ ಕೂಡ ಜನರ ನಡುವೆ ಬೆರೆಯುತ್ತೇವೆ. ಸರ್ಕಾರದಿಂದ ಬರುವ ಸವಲತ್ತುಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಎಷ್ಟೋ ಜನರಿಗೆ ಮನೆಗಳಿಲ್ಲ. ಅಂತವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದಾರಂತೆ ಅನುಶ್ರೀ.