ದೊಡ್ಡಬಳ್ಳಾಪುರ: ಭಾರಿ ಗಾಳಿ ಮಳೆಗೆ ಟೋಲ್ ಕೇಂದ್ರದಲ್ಲಿ ಅಳವಡಿಸಿದ ಶೀಟ್ಗಳು ಹಾರಿ ಹೋಗಿವೆ. ಪರಿಣಾಮ ಅವ್ಯವಸ್ಥೆ ಉಂಟಾಗಿ ಟೋಲ್ ಸಂಗ್ರಹ ಕೈ ಬಿಟ್ಟಿದ್ದು, ವಾಹನಗಳು ಟೋಲ್ ಸುಂಕವಿಲ್ಲದೆ ಓಡಾಡುತ್ತಿವೆ.
ಯಲಹಂಕ -ಹಿಂದೂಪುರ ರಾಜ್ಯ ಹೆದ್ದಾರಿಯ ದೊಡ್ಡಬಳ್ಳಾಪುರದ ಗುಂಜೂರಿನ ಟೋಲ್ ಕೇಂದ್ರಕ್ಕೆ ಮಳೆಯಿಂದ ಹಾನಿಯಾಗಿದೆ. ರಾತ್ರಿ 8 ಗಂಟೆಯ ಸಮಯದಲ್ಲಿ ಭಾರಿ ಗಾಳಿಯೊಂದಿಗೆ ಮಳೆ ಶುರುವಾಯಿತು. ಟೋಲ್ ಕೇಂದ್ರದ ಮೇಲ್ಛಾವಣಿಗೆ ಅಳವಡಿಸಿದ್ದ ಶೀಟ್ಗಳು ಗಾಳಿಗೆ ಹಾರಿಹೋಗಿವೆ.
ರಸ್ತೆಯ ತುಂಬೆಲ್ಲ ಶೀಟ್ಗಳು ಛಿದ್ರ ಛಿದ್ರವಾಗಿ ಬಿದ್ದಿವೆ. ಇದರಿಂದ ಸದ್ಯ ಟೋಲ್ ವಸೂಲಿ ತಕ್ಷಣಕ್ಕೆ ಕೈ ಬಿಡಲಾಗಿದೆ..