ETV Bharat / state

ಟಿಪ್ಪು ಜನ್ಮಸ್ಥಳದಲ್ಲಿ ಅದ್ದೂರಿ ಜಯಂತಿ ಆಚರಣೆ: ಸರ್ಕಾರದ ವಿರುದ್ದ ಹರಿಹಾಯ್ದ ವಾಟಾಳ್ - tippu jayanthi celebration in devanahalli

ದೇವನಹಳ್ಳಿಯಲ್ಲಿ ಅದ್ದೂರಿಯಾಗಿ ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು. ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಜಯಂತಿಗೆ ಚಾಲನೆ ನೀಡಿ, ಟಿಪ್ಪು ಇತಿಹಾಸವನ್ನು ಪಠ್ಯಪುಸ್ತಕದಿಂದ ತೆಗೆಯುವ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

vatal
author img

By

Published : Nov 10, 2019, 7:42 PM IST

ಬೆಂಗಳೂರು: ಟಿಪ್ಪು ಜನ್ಮಸ್ಥಳ ದೇವನಹಳ್ಳಿ ಪಟ್ಟಣದಲ್ಲಿ ಸಂಭ್ರಮದಿಂದ ಟಿಪ್ಪು ಜಯಂತಿ ಆಚರಣೆ ಮಾಡಲಾಯಿತು. ಟಿಪ್ಪು ಪುತ್ಥಳಿಯನ್ನು ಹೂಮಾಲೆಗಳಿಂದ ಸಿಂಗಾರಗೊಳಿಸಲಾಗಿತ್ತು.

ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಜಯಂತಿಗೆ ಚಾಲನೆ ನೀಡಿ ಮಾತನಾಡುತ್ತಾ, ಟಿಪ್ಪು ಇತಿಹಾಸವನ್ನು ಪಠ್ಯಪುಸ್ತಕದಿಂದ ತೆಗೆದರೆ ನಿಮ್ಮ ಸರ್ಕಾರ ಪತನ ಖಂಡಿತ. ಸರ್ಕಾರ ಉರುಳಿಸಲು ನಾನೇ ರಾಜ್ಯಾದ್ಯಂತ ಹೋರಾಟ ಮಾಡ್ತೀನಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದರು.

ಟಿಪ್ಪು ಜಯಂತಿ ಆಚರಣೆ

ಶಾಸಕ ನಿಸರ್ಗ ನಾರಾಯಣಸ್ವಾಮಿ, ಟಿಪ್ಪು ವಂಶಸ್ಥರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮುಂದಿನ ದಿನಗಳಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರ ಆಚರಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಸ್ಥಳದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

Intro:KN_BNG_Tippu_Jayanthi_Ambarish_7203301
Slug:ಟಿಪ್ಪು ಜನ್ಮಸ್ಥಳದಲ್ಲಿ ಅದ್ದೂರಿ ಟಿಪ್ಪು ಜಯಂತಿ
ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದ ವಾಟಳ್ ನಾಗರಾಜ್

ಬೆಂಗಳೂರು: ರಾಜ್ಯ ಬಿಜೆಪಿ ಸರಕಾರಿ ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದು ಮಾಡಿದ್ರು ಸಹ ಈ ಊರಿನಲ್ಲಿ ಅದ್ದೂರಿಯಾಗಿ ಜಯಂತಿಯನ್ನ ಆಚರಣೆ ಮಾಡಲಾಯಿತು. ಜೊತೆಗೆ ಹಲವು ಗಣ್ಯರು ಬಂದು ಜಯಂತಿಯಲ್ಲಿ ಭಾಗಿಯಾಗಿದ್ರು. ಈ ವೇಳೆ ಟಿಪ್ಪುವಿನ ಬಗ್ಗೆ ವಿರೋಧ ವ್ಯಕ್ತಪಡಿಸಿ, ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನ ತೆಗೆಯಲು ಮುಂದಾಗಿರುವವರ ವಿರುದ್ದ ಹರಿಹಾಯ್ದಿದ್ದಾರೆ. ಮಾತ್ರವಲ್ಲ ಟಿಪ್ಪು ವಿರೋಧಿಸಿದ್ರೆ ರಾಜ್ಯ ಬಿಜೆಪಿ ಸರಕಾರ ಉರುಳಿಸುವ ಎಚ್ಚರಿಕೆ ಸಹ ನೀಡಿದ್ದಾರೆ. ಅಂದಹಾಗೆ ಎಲ್ಲಿ ಟಿಪ್ಪು ಜಯಂತಿ ಅದ್ದೂರಿಯಾಗಿ ಆಚರಣೆ ಮಾಡಿದ್ದು ಅಂತಿರಾ ಆಗಾದ್ರೆ ಇಲ್ಲಿದೆ ನೋಡಿ ಟಿಪ್ಪು ಜಯಂತಿಯ ಕಂಪ್ಲೀಟ್ ಡೀಟೆಲ್ಸ್..

ಹೂ ಮಾಲೆಗಳಿಂದ ಸಿಂಗಾರಗೊಂಡಿರುವ ಟಿಪ್ಪು ಪುತ್ಹಳಿ. ಟಿಪ್ಪು ಸುಲ್ತಾನ್ ಗೆ ಜೈಕಾರ ಹಾಕ್ತಿರುವ ಅಭಿಮಾನಿಗಳು. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಹಲವು ಗಣ್ಯರು. ಈ ದೃಶ್ಯಗಳು ಕಂಡು ಬಂದಿದ್ದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪವಿರುವ ದೇವನಹಳ್ಳಿ ಪಟ್ಟಣದಲ್ಲಿ. ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ರು ಸಹ ಇಲ್ಲಿನ ಟಿಪ್ಪು ಜನ್ಮ ಸ್ಥಳದಲ್ಲಿ ಸಂಭ್ರಮದಿಂದ ಟಿಪ್ಪು ಜಯಂತಿಯನ್ನು ಆಚರಣೆ ಮಾಡಲಾಯಿತು. ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಜಯಂತಿಗೆ ಚಾಲನೆ ನೀಡಿದರು. ಶಾಸಕ ನಿಸರ್ಗ ನಾರಾಯಣಸ್ವಾಮಿ, ಟಿಪ್ಪು ವಂಶಸ್ಥರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದೇ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯ ಬಿಜೆಪಿ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ. ಟಿಪ್ಪು ಇತಿಹಾಸವನ್ನು ಪಠ್ಯ ಪುಸ್ತಕದಿಂದ ತೆಗೆದ್ರೆ ನಿಮ್ಮ ಸರಕಾರದ ಪತನ ಖಂಡಿತ. ನಿಮ್ಮ ಸರಕಾರ ಉರುಳಿಸಲು ನಾನೇ ರಾಜ್ಯದ್ಯಂತ ಹೋರಾಟ ಮಾಡ್ತೀನಿ ಎಂದು ರಾಜ್ಯ ಬಿಜೆಪಿ ಸರಕಾರಕ್ಕೆ ಹಾಗೂ ಸಿಎಂ ಬಿಎಸ್ವೈ ಗೆ ಎಚ್ಚರಿಕೆ ನೀಡಿದ್ದಾರೆ.

ಬೈಟ್: ವಾಟಳ್ ನಾಗರಾಜ್
ಒಟ್ಟಾರೆ ಟಿಪ್ಪು ಜಯಂತಿ ಸರಕಾರದ ವತಿಯಿಂದ ಆಚರಣೆ ಮಾಡದಿದ್ರು, ಟಿಪ್ಪು ಹುಟ್ಟಿದ ಸ್ಥಳದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಟಿಪ್ಪು ಜಯಂತಿಯನ್ನು ಸರಕಾರ ಆಚರಣೆ ಮಾಡಬೇಕು ಎಂದು ಆಗ್ರಹ ಮಾಡಿದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂದು ಬಿಗಿ ಪೊಲೀಸ್ ಭದ್ರತೆ ನೀಡಲಾಗಿತ್ತು.
Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.