ETV Bharat / state

ಯಮಸ್ವರೂಪಿಯಾಗಿ ಬಂದ ಲಾರಿ... ಟೋಲ್​ನಲ್ಲಿ ಹಾರಿಹೋಯ್ತು ಕಾರ್ಮಿಕನ ಪ್ರಾಣ - ವಿಡಿಯೋ - toll worker death

ನೆಲಮಂಗಲದ ನವಯುಗ ಟೋಲ್ ನಲ್ಲಿ ಯಮಸ್ವರೂಪಿಯಾಗಿ ಬಂದ ಲಾರಿಯೊಂದು ಟೋಲ್​ಗೇಟ್​ ಬಳಿ ಬಾಗಿಲಲ್ಲಿ ಕೈತೊಳೆಯುತ್ತಿದ್ದ ಕಾರ್ಮಿಕನನ್ನು ಎಳೆದೊಯ್ದಿದೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಟೋಲ್​ ಕಾರ್ಮಿಕನ ಸಾವಿನ ಭೀಕರ ದೃಶ್ಯ
ಟೋಲ್​ ಕಾರ್ಮಿಕನ ಸಾವಿನ ಭೀಕರ ದೃಶ್ಯ
author img

By

Published : May 31, 2020, 12:49 PM IST

ನೆಲಮಂಗಲ: ಲಾರಿ ಚಾಲಕನ ನಿರ್ಲಕ್ಷ್ಯದಿಂದ ಟೋಲ್ ಕಾರ್ಮಿಕನ ಪ್ರಾಣ ಪಕ್ಷಿ ಹಾರಿಹೋಗಿದೆ. ಇಲ್ಲಿನ ನವಯುಗ ಟೋಲ್​ ಗೇಟ್​ನಲ್ಲಿ ಈ ದುರ್ಘಟನೆ ನಡೆದಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಟೋಲ್​ ಕಾರ್ಮಿಕನ ಸಾವಿನ ಭೀಕರ ದೃಶ್ಯ

ಬೆಂಗಳೂರು ಹೊರವಲಯ ನೆಲಮಂಗಲದ ನವಯುಗ ಟೋಲ್ ನಲ್ಲಿ ಈ ಘಟನೆ ಜರುಗಿದೆ. ಯಮಸ್ವರೂಪಿಯಾಗಿ ಬಂದ ಲಾರಿಯೊಂದು ಟೋಲ್​ಗೇಟ್​ ಬಳಿ ಬಾಗಿಲಲ್ಲಿ ಕೈತೊಳೆಯುತ್ತಿದ್ದ ಕಾರ್ಮಿಕನನ್ನು ಎಳೆದೊಯ್ದಿದೆ. ಅಲ್ಲದೆ, ಮುಂದೆ ಸಾಗುತ್ತಿದ್ದ ಕಾರಿಗೂ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಟೋಲ್​ ಕಾರ್ಮಿಕ ಗೋಪಾಲ್ ಮೃತಪಟ್ಟಿದ್ದಾರೆ.

ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಗೆ ಟೋಲ್​ನ ಅವೈಜ್ಞಾನಿಕ ಮಾದರಿ ಸಹ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.